ಬಾಕಿ ಸಂಬಳ ಸಿಕ್ಕಿಲ್ಲ ಎಂದು ಸ್ಮೃತಿ ಇರಾನಿಗೆ ದೂರು ನೀಡಿದ ಶಿಕ್ಷಕರು; ಅಧಿಕಾರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡ ಸಚಿವೆ

|

Updated on: Dec 30, 2023 | 2:58 PM

ಶಿಕ್ಷಣಾಧಿಕಾರಿಯೊಂದಿಗೆ ಬಿಜೆಪಿ ಸಂಸದ, ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡೆಸಿದ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೇಥಿಯಲ್ಲಿ ನೆಲೆಸಿರುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಮಸ್ಯೆಗಳನ್ನು ಹೇಳಲು ನೇರವಾಗಿ ತನ್ನ ಬಳಿಗೆ ಬರುತ್ತಾರೆ ಎಂದು ಅವರು ಅಧಿಕಾರಿಗೆ ಹೇಳುವುದನ್ನು ಕೇಳಬಹುದು.

ಬಾಕಿ ಸಂಬಳ ಸಿಕ್ಕಿಲ್ಲ ಎಂದು ಸ್ಮೃತಿ ಇರಾನಿಗೆ ದೂರು ನೀಡಿದ ಶಿಕ್ಷಕರು; ಅಧಿಕಾರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡ ಸಚಿವೆ
ಸ್ಮೃತಿ ಇರಾನಿ
Follow us on

ದೆಹಲಿ ಡಿಸೆಂಬರ್ 30: ಇನ್ನೂ ಬಾಕಿ ಸಂಬಳ ಬಂದಿಲ್ಲ ಎಂದು ನಿವೃತ್ತ ಶಾಲಾ ಶಿಕ್ಷಕರು(retired school teachers) ಕೇಂದ್ರ ಸಚಿವೆ ಮತ್ತು ಅಮೇಠಿ (Amethi) ಸಂಸದೆ ಸ್ಮೃತಿ ಇರಾನಿ (Smriti Irani) ಅವರಿಗೆ ದೂರು ನೀಡಿದ್ದು, ತಕ್ಷಣವೇ ಸಚಿವೆ ಶಿಕ್ಷಣ ಅಧಿಕಾರಿಗೆ ಫೋನ್ ಮಾಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಮೃತಿ ಇರಾನಿ ತಮ್ಮ ಲೋಕಸಭಾ ಕ್ಷೇತ್ರ ಅಮೇಠಿಗೆ 3 ದಿನಗಳ ಭೇಟಿಯಲ್ಲಿದ್ದಾರೆ. ಶುಕ್ರವಾರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ಅಸಮಾಧಾನಗೊಂಡ ನಿವೃತ್ತ ಶಾಲಾ ಶಿಕ್ಷಕರ ಗುಂಪು ಆಕೆಯನ್ನು ಸಂಪರ್ಕಿಸಿದ್ದು, ಅವರು ಬಾಕಿ ಸಂಬಳ ಸಿಕ್ಕಿಲ್ಲ ಎಂಬುದರ  ಬಗ್ಗೆ ದೂರು ನೀಡಿದ್ದಾರೆ.

ಕೂಡಲೇ ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದ ಸ್ಮೃತಿ, ಎಲ್ಲಾ ಬಾಕಿಗಳನ್ನು ಕೂಡಲೇ ತೆರವುಗೊಳಿಸುವಂತೆ ಕೇಳಿಕೊಂಡರು. ನಿಮ್ಮ ಮೇಜಿನ ಮೇಲೆ ನೀವು ಯಾವುದೇ ಬಾಕಿಯನ್ನು ಹೊಂದಿದ್ದರೂ, ಇಂದೇ ಅದನ್ನು ಕ್ಲಿಯರ್ ಮಾಡಿ ಎಂದು ಕೇಂದ್ರ ಸಚಿವೆ ಆದೇಶಿಸಿದ್ದಾರೆ.


ಶಿಕ್ಷಣಾಧಿಕಾರಿಯೊಂದಿಗೆ ಬಿಜೆಪಿ ಸಂಸದರು ನಡೆಸಿದ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೇಥಿಯಲ್ಲಿ ನೆಲೆಸಿರುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಮಸ್ಯೆಗಳನ್ನು ಹೇಳಲು ನೇರವಾಗಿ ತನ್ನ ಬಳಿಗೆ ಬರುತ್ತಾರೆ ಎಂದು ಅವರು ಅಧಿಕಾರಿಗೆ ಹೇಳುವುದನ್ನು ಕೇಳಬಹುದು.

ಇದನ್ನೂ ಓದಿ: ಅಯೋಧ್ಯೆ: ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಸ್ವಲ್ಪ ಮಾನವೀಯತೆಯನ್ನು ತೋರಿಸಿ. ಇದು ಅಮೇಠಿ , ಇಲ್ಲಿನ ಪ್ರತಿಯೊಬ್ಬ ನಾಗರಿಕರೂ ನನ್ನ ಬಳಿ ಬರಬಹುದು ಎಂದು ಸ್ಮೃತಿ ಇರಾನಿ ಹೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತಿದೆ. ಯೋಗಿ ಆದಿತ್ಯನಾಥ್ ಸರ್ಕಾರವು ಶಿಕ್ಷಕರಿಗೆ ಅವರ ಬಾಕಿಯನ್ನು ಸಂಬಳ ನೀಡಬೇಕು ಎಂದು ಬಯಸುತ್ತದೆ, ಆದ್ದರಿಂದ ನೀವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಮೃತಿ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Sat, 30 December 23