AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayodhya Tour: ಅಯೋಧ್ಯೆಗೆ ಹೋಗುವವರು ಈ ಐತಿಹಾಸಿಕ ಸ್ಥಳಗಳಿಗೂ ಭೇಟಿ ನೀಡಿ

ರಾಮಮಂದಿರವನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ಹನುಮಾನನಗರಿ, ಕನಕ ​​ಭವನ ದೇವಾಲಯ, ನಾಗೇಶ್ವರನಾಥ ದೇವಾಲಯ, ರಾಮ್ ಕಥಾ ಮ್ಯೂಸಿಯಂ ಮುಂತಾದ ಸ್ಥಳಗಳಿಗೂ ನೀವು ಭೇಟಿ ನೀಡಲು ಮರೆಯದಿರಿ.

ಅಕ್ಷತಾ ವರ್ಕಾಡಿ
|

Updated on:Dec 30, 2023 | 4:45 PM

Share
ರಾಮ ಮಂದಿರ ಉದ್ಘಾಟನೆಯ ದಿನ ಸಮೀಪಿಸುತ್ತಿದ್ದಂತೆ ಈ ಪುಣ್ಯ ಕ್ಷೇತ್ರವನ್ನು ಕಣ್ತುಂಬಿಸಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ನೀವು ಕೂಡ ಅಯೋಧ್ಯೆಗೆ ಭೇಟಿ ನೀಡುವ ಪ್ಲ್ಯಾನ್ ಮಾಡಿದ್ದರೆ, ಅಲ್ಲಿನ ಸುತ್ತಮುತ್ತಲಿನ ಈ ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ.

1 / 7
ರಾಮ ಜನ್ಮಭೂಮಿಯಾದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಈಗಾಗಲೇ ಬಿರುಸಿನ ತಯಾರಿ ನಡೆಯುತ್ತಿದ್ದು, ಇಲ್ಲಿಗೆ ನೀವು ವಿಮಾನ, ರೈಲು ಅಥವಾ ಬಸ್​​ ಮೂಲಕ ಪ್ರಯಾಣಿಸಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಬೆಂಗಳೂರು ಮತ್ತು ಕೋಲ್ಕತದಿಂದ ನೇರ ವಿಮಾನ ಯಾನ ಜನವರಿ 17ರಿಂದ ಶುರುವಾಗಲಿದೆ.

2 / 7
ರಾಮಮಂದಿರವನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ಹನುಮಾನನಗರಿ, ಕನಕ ​​ಭವನ ದೇವಾಲಯ, ನಾಗೇಶ್ವರನಾಥ ದೇವಾಲಯ, ರಾಮ್ ಕಥಾ ಮ್ಯೂಸಿಯಂ ಮುಂತಾದ ಸ್ಥಳಗಳಿಗೂ ನೀವು ಭೇಟಿ ನೀಡಲು ಮರೆಯದಿರಿ.

ರಾಮಮಂದಿರವನ್ನು ಕಣ್ತುಂಬಿಸಿಕೊಳ್ಳುವುದರ ಜೊತೆಗೆ ಹನುಮಾನನಗರಿ, ಕನಕ ​​ಭವನ ದೇವಾಲಯ, ನಾಗೇಶ್ವರನಾಥ ದೇವಾಲಯ, ರಾಮ್ ಕಥಾ ಮ್ಯೂಸಿಯಂ ಮುಂತಾದ ಸ್ಥಳಗಳಿಗೂ ನೀವು ಭೇಟಿ ನೀಡಲು ಮರೆಯದಿರಿ.

3 / 7
ಶ್ರೀ ಹನುಮಾನ್ ಗರ್ಹಿ ಮಂದಿರ:ಅಯೋಧ್ಯೆಯ ಹೃದಯಭಾಗದಲ್ಲಿ ಈ ದೇವಾಲಯವು ಅಯೋಧ್ಯೆಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ರಾಮ ಜನ್ಮಭೂಮಿ ಸ್ಥಳದಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿದೆ.

4 / 7
ಕನಕ ​​ಭವನ ದೇವಾಲಯ: ಇಲ್ಲಿ ರಾಮ ಮತ್ತು ಸೀತಾ ದೇವಿಯ ಚಿನ್ನದ ಅಲಂಕೃತ ವಿಗ್ರಹಗಳಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಸೋನೆ ಕಾ ಘರ್ ಎಂದೂ ಕರೆಯಲಾಗುತ್ತದೆ, ಅಂದರೆ "ಚಿನ್ನದಿಂದ ಮಾಡಿದ ಮನೆ" ಎಂಬ ಅರ್ಥವನ್ನು ನೀಡುತ್ತದೆ.ಈ ಪವಿತ್ರ ಕ್ಷೇತ್ರಕ್ಕೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಭೇಟಿ ನೀಡಿ.

5 / 7
ರಾಮ್ ಕಥಾ ಮ್ಯೂಸಿಯಂ: ಖಂಡಿತವಾಗಿಯೂ ನಿಮ್ಮನ್ನು ನೆನಪಿನ ಹಾದಿಯಲ್ಲಿ ನಡೆಯುವಂತೆ ಮಾಡುತ್ತದೆ ಏಕೆಂದರೆ ಇಲ್ಲಿ ನೀವು ಅನೇಕ ಐತಿಹಾಸಿಕ ಕಲೆಗಳು ಮತ್ತು ಕಲಾಕೃತಿಗಳನ್ನು ನೋಡಬಹುದು. ಈ ವಸ್ತುಸಂಗ್ರಹಾಲಯದಲ್ಲಿ ಕೆಲವು ಶತಮಾನಗಳಷ್ಟು ಹಳೆಯದಾದ ನಾಣ್ಯಗಳು, ಅಪರೂಪದ ತಾಳೆ ಮರದ ಹಸ್ತಪ್ರತಿಗಳು, ಅಪರೂಪದ ಕುಂಬಾರಿಕೆ ಸಂಗ್ರಹ, ಜವಳಿ ಕಲಾಕೃತಿಗಳು, ಸುಂದರವಾದ ವರ್ಣಚಿತ್ರಗಳು ಇತ್ಯಾದಿಗಳನ್ನು ಕಣ್ತುಂಬಿಸಿಕೊಳ್ಳಬಹುದು.

6 / 7
ನಾಗೇಶ್ವರನಾಥ ದೇವಾಲಯ: ಈ ದೇವಾಲಯವು ತನ್ನ ಅದ್ಭುತ ವಾಸ್ತುಶಿಲ್ಪದ ಕೆತ್ತನೆಯಿಂದಲೇ ಪ್ರಸಿದ್ಧಿಯನ್ನು ಪಡೆದಿದೆ. ದಂತ ಕಥೆಗಳ ಪ್ರಕಾರ ರಾಮನ ಕಿರಿಯ ಮಗ ಕುಶ ಸ್ಥಾಪಿಸಿದ ಎಂದು ನಂಬಲಾಗಿದೆ. ಶಿವನಿಗೆ ಅರ್ಪಿತವಾದ ಈ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಕ್ಕೆ ನೆಲೆಯಾಗಿದೆ.

7 / 7

Published On - 4:44 pm, Sat, 30 December 23

ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Follow Us
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ

ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​

ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?

ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್