ನಮ್ಮ ದೇಹದ ನಾರ್ಮಲ್ ಉಷ್ಣತೆಯನ್ನು ಮೊದಲು ಕಂಡು ಹಿಡಿದಿದ್ದು ಹೇಗೆ?

1851ರಲ್ಲಿ ವುಂಡರ್ಲಿಚ್ 25,000 ಜರ್ಮನ್ನರಿಂದ ತೆಗೆದ 1 ಮಿಲಿಯನ್ ದೇಹದ ಉಷ್ಣತೆಯ ಮಾಪನಗಳನ್ನು ಬಿಡುಗಡೆ ಮಾಡಿದರು. ಆಗ ತಂತ್ರಜ್ಞಾನವಾಗಲಿ, ವೈದ್ಯಕೀಯ ಕ್ಷೇತ್ರವಾಗಲಿ ಈಗಿನಷ್ಟು ಅಭಿವೃದ್ಧಿ ಹೊಂದಿರಲಿಲ್ಲವಾದ್ದರಿಂದ ಇದು ಬಹಳ ಕಷ್ಟದ ಕೆಲಸವಾಗಿತ್ತು.

ನಮ್ಮ ದೇಹದ ನಾರ್ಮಲ್ ಉಷ್ಣತೆಯನ್ನು ಮೊದಲು ಕಂಡು ಹಿಡಿದಿದ್ದು ಹೇಗೆ?
Follow us
ಸುಷ್ಮಾ ಚಕ್ರೆ
|

Updated on: Dec 30, 2023 | 4:29 PM

ನಮ್ಮ ದೇಹದ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಅಥವಾ 98.6 F ಇದ್ದರೆ ಅದನ್ನು ನಾರ್ಮಲ್ ಉಷ್ಣತೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದನ್ನು ಮೊದಲು ನಿರ್ಧರಿಸಿದ್ದು ಹೇಗೆ? ಮನುಷ್ಯನ ದೇಹದ ತಾಪಮಾನ ಎಷ್ಟು ಇದ್ದರೆ ಅದು ನಾರ್ಮಲ್ ಎಂದು ಮೊದಲು ಕಂಡುಹಿಡಿದಿದ್ದು ಹೇಗೆಂಬುದರ ಬಗ್ಗೆ ನಿಮಗೂ ಕುತೂಹಲ ಇದ್ದರೆ ಆ ಕುರಿತು ಮಾಹಿತಿ ಇಲ್ಲಿದೆ. 1851ಕ್ಕೂ ಹಿಂದೆಯೇ ಇದನ್ನು ಕಂಡುಹಿಡಿಯಲಾಯಿತು. ಜರ್ಮನ್ ವೈದ್ಯ ಕಾರ್ಲ್ ರೆನ್ಹೋಲ್ಡ್ ಆಗಸ್ಟ್ ವುಂಡರ್ಲಿಚ್ ಮನುಷ್ಯನ ದೇಹದ ನಾರ್ಮಲ್ ಉಷ್ಣತೆಯನ್ನು ಕಂಡುಹಿಡಿದರು.

1851ರಲ್ಲಿ ವುಂಡರ್ಲಿಚ್ 25,000 ಜರ್ಮನ್ನರಿಂದ ತೆಗೆದ 1 ಮಿಲಿಯನ್ ದೇಹದ ಉಷ್ಣತೆಯ ಮಾಪನಗಳನ್ನು ಬಿಡುಗಡೆ ಮಾಡಿದರು. ಆಗ ತಂತ್ರಜ್ಞಾನವಾಗಲಿ, ವೈದ್ಯಕೀಯ ಕ್ಷೇತ್ರವಾಗಲಿ ಈಗಿನಷ್ಟು ಅಭಿವೃದ್ಧಿ ಹೊಂದಿರಲಿಲ್ಲವಾದ್ದರಿಂದ ಇದು ಬಹಳ ಕಷ್ಟದ ಕೆಲಸವಾಗಿತ್ತು. ಜನರ ದೇಹದ ಉಷ್ಣತೆಯನ್ನು ನೋಡಲು 1 ಅಡಿ ಉದ್ದದ ಥರ್ಮಾಮೀಟರ್ ಅನ್ನು ಬಳಸಲಾಯಿತು. ಅದು ದೇಹದ ಉಷ್ಣತೆಯ ಮಾಪನ ಮಾಡಲು ಒಬ್ಬೊಬ್ಬರಿಗೆ 20 ನಿಮಿಷಗಳನ್ನು ತೆಗೆದುಕೊಂಡಿತು. ಅದಾದ ನಂತರ ಕೆಲವು ಆರೋಗ್ಯ ಸಮಸ್ಯೆ ಇರುವ ಜನರ ದೇಹದ ತಾಪಮಾನಗಳನ್ನು ಬದಿಗಿಟ್ಟು, ಆರೋಗ್ಯವಂತ ಜನರ ತಾಪಮಾನದ ಡೇಟಾ ತೆಗೆದುಕೊಂಡು ನಾರ್ಮಲ್ ಉಷ್ಣತೆಯನ್ನು ಗುರುತಿಸಲಾಯಿತು.

ಇದನ್ನೂ ಓದಿ: ನಿಮ್ಮ ದೇಹದ ನಾರ್ಮಲ್ ತಾಪಮಾನ ತಿಳಿಯುವುದು ಹೇಗೆ?; ಇಲ್ಲಿ ಕ್ಲಿಕ್ ಮಾಡಿ

ಜರ್ಮನ್​ನ ಜನಸಂಖ್ಯೆಯ 9.2% ಜನರು ಮಧುಮೇಹವನ್ನು ಹೊಂದಿದ್ದರೂ, 26% ಜನರು ಕಡಿಮೆ ತಾಪಮಾನವನ್ನು ಹೊಂದಿದ್ದರು. ಆದ್ದರಿಂದ ಮಧುಮೇಹ ಹೊಂದಿರುವ ಪ್ರತಿಯೊಬ್ಬರನ್ನು ಡೇಟಾಸೆಟ್‌ನಿಂದ ತೆಗೆದುಹಾಕಲಾಯಿತು. ಜನಸಂಖ್ಯೆಯ 5% ಜನರು ಕೆಮ್ಮನ್ನು ಹೊಂದಿದ್ದು, 7% ಹೆಚ್ಚಿನ ತಾಪಮಾನ ಹೊಂದಿದ್ದರು ಮತ್ತು 7% ಜನರು ತುಂಬಾ ಕಡಿಮೆ ತಾಪಮಾನವನ್ನು ಹೊಂದಿದ್ದರು. ಆದ್ದರಿಂದ ಕೆಮ್ಮು ಇರುವ ಪ್ರತಿಯೊಬ್ಬರನ್ನು ಕೂಡ ಪಟ್ಟಿಯಿಂದ ಹೊರಗಿಡಲಾಯಿತು

ಸೈನುಟಿಸ್, ಮೂತ್ರನಾಳದ ಸೋಂಕುಗಳು, ನ್ಯುಮೋನಿಯಾ ಮತ್ತು ತೀವ್ರವಾದ ಜ್ವರ ಹೊಂದಿವರನ್ನು ಕೂಡ ಪಟ್ಟಿಯಿಂದ ಹೊರಗಿಡಲಾಯಿತು.

ಮನುಷ್ಯರೆಲ್ಲರ ದೇಹದ ಸಾಮಾನ್ಯ ತಾಪಮಾನ ಒಂದೇ ಆಗಿರುವುದಿಲ್ಲ. ಒಬ್ಬೊಬ್ಬರ ದೇಹದ ನಾರ್ಮಲ್ ಉಷ್ಣಾಂಶ ಬೇರೆ-ಬೇರೆ ರೀತಿಯಲ್ಲಿರುತ್ತದೆ. 37 ಡಿಗ್ರಿ ಸೆಲ್ಸಿಯಸ್​ ಇದ್ದರೆ ಅದನ್ನು ಸಾಮಾನ್ಯ ತಾಪಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ, ವ್ಯಕ್ತಿಗಳ ಲಿಂಗ, ವಯಸ್ಸು, ಯಾವ ಕಾಲದಲ್ಲಿ ನೀವು ತಾಪಮಾನ ಪರಿಶೀಲಿಸುತ್ತಿದ್ದೀರಿ ಎಂಬುದೆಲ್ಲದರ ಆಧಾರದ ಮೇಲೆ ಮನುಷ್ಯನ ದೇಹದ ಉಷ್ಣಾಂಶ ಬದಲಾಗುತ್ತದೆ. ನಿಮ್ಮ ದೇಹದ ತಾಪಮಾನವು ಎಲ್ಲಾ ದಿನವೂ ಒಂದೇ ಆಗಿರುವುದಿಲ್ಲ. ಹಗಲಿನಲ್ಲಿ ನಿಮ್ಮ ತಾಪಮಾನವು ಬದಲಾಗುತ್ತಲೇ ಇರುತ್ತದೆ.

ಇದನ್ನೂ ಓದಿ: ರೂಂ ಹೀಟರ್ ಬಳಸುತ್ತೀರಾ?; ನಿಮ್ಮ ಆರೋಗ್ಯದ ಬಗ್ಗೆಯೂ ಎಚ್ಚರವಿರಲಿ

ಸಾಮಾನ್ಯ ತಾಪಮಾನವು ವಯಸ್ಸು, ಲಿಂಗ ಮತ್ತು ದಿನದ ಸಮಯದೊಂದಿಗೆ ಬದಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ತಾಪಮಾನ ಸ್ವಲ್ಪ ಹೆಚ್ಚಾಗಿರುತ್ತದೆ. ಹಗಲಿನಲ್ಲಿ, ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಸ್ವಲ್ಪ ಹೆಚ್ಚಾಗುತ್ತದೆ. ವಯಸ್ಸಿನೊಂದಿಗೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಈ ಕೆಳಗಿನ ಲಿಂಕ್ ನಿರ್ದಿಷ್ಟ ಸಮಯದಲ್ಲಿ ನಿಮ್ಮ ಸಾಮಾನ್ಯ ದೇಹದ ಉಷ್ಣತೆಯನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಎಷ್ಟು ಕ್ರಿಯಾಶೀಲರಾಗಿದ್ದೀರಿ, ದಿನದ ಯಾವ ಸಮಯದಲ್ಲಿ ಚೆಕ್ ಮಾಡುತ್ತಿದ್ದೀರಿ, ನಿಮ್ಮ ವಯಸ್ಸು, ನೀವು ಗಂಡೋ ಅಥವಾ ಹೆಣ್ಣೋ, ನೀವು ಏನು ಸೇವಿಸಿದ್ದೀರಿ, ನಿಮ್ಮ ಋತುಚಕ್ರದಲ್ಲಿ ನೀವು ಎಲ್ಲಿದ್ದೀರಿ ಎಂಬುದೆಲ್ಲವೂ ನಿಮ್ಮ ದೇಹದ ತಾಪಮಾನವನ್ನು ನಿರ್ಧರಿಸುತ್ತದೆ.

ಮನುಷ್ಯನ ದೇಹದ ಸರಾಸರಿ ಸಾಮಾನ್ಯ ದೇಹದ ಉಷ್ಣತೆಯನ್ನು ಸಾಮಾನ್ಯವಾಗಿ 37 ಡಿಗ್ರಿ ಸೆಲ್ಸಿಯಸ್​ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ದೇಹದ ಉಷ್ಣತೆಯು 36.1 ಡಿಗ್ರಿ ಸೆಲ್ಸಿಯಸ್​ನಿಂದ 37.2 ಡಿಗ್ರಿ ಸೆಲ್ಸಿಯಸ್​ವರೆಗೂ ಏರಿಳಿತವಾಗುತ್ತಿರುತ್ತದೆ. ನಿಮ್ಮ ದೇಹದ ತಾಪಮಾನ 38 ಡಿಗ್ರಿ ಸೆಲ್ಸಿಯಸ್​​ಗಿಂತ ಹೆಚ್ಚಿದ್ದರೆ ನಿಮಗೆ ಸೋಂಕು ಅಥವಾ ಜ್ವರ ತಗುಲಿದೆ ಎಂದರ್ಥ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ