ನಿಮ್ಮ ದೇಹದ ನಾರ್ಮಲ್ ತಾಪಮಾನ ತಿಳಿಯುವುದು ಹೇಗೆ?; ಇಲ್ಲಿ ಕ್ಲಿಕ್ ಮಾಡಿ
ದೇಹದ ಸಾಮಾನ್ಯ ತಾಪಮಾನವು ವಯಸ್ಸು, ಲಿಂಗ ಮತ್ತು ದಿನದ ಸಮಯದೊಂದಿಗೆ ಬದಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ತಾಪಮಾನ ಸ್ವಲ್ಪ ಹೆಚ್ಚಾಗಿರುತ್ತದೆ. ಹಗಲಿನಲ್ಲಿ, ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಸ್ವಲ್ಪ ಹೆಚ್ಚಾಗುತ್ತದೆ.
ಮನುಷ್ಯರೆಲ್ಲರ ದೇಹದ ಸಾಮಾನ್ಯ ತಾಪಮಾನ ಒಂದೇ ಆಗಿರುವುದಿಲ್ಲ. ಒಬ್ಬೊಬ್ಬರ ದೇಹದ ನಾರ್ಮಲ್ ಉಷ್ಣಾಂಶ ಬೇರೆ-ಬೇರೆ ರೀತಿಯಲ್ಲಿರುತ್ತದೆ. 37 ಡಿಗ್ರಿ ಸೆಲ್ಸಿಯಸ್ ಇದ್ದರೆ ಅದನ್ನು ಸಾಮಾನ್ಯ ತಾಪಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ, ವ್ಯಕ್ತಿಗಳ ಲಿಂಗ, ವಯಸ್ಸು, ಯಾವ ಕಾಲದಲ್ಲಿ ನೀವು ತಾಪಮಾನ ಪರಿಶೀಲಿಸುತ್ತಿದ್ದೀರಿ ಎಂಬುದೆಲ್ಲದರ ಆಧಾರದ ಮೇಲೆ ಮನುಷ್ಯನ ದೇಹದ ಉಷ್ಣಾಂಶ ಬದಲಾಗುತ್ತದೆ. ನಿಮ್ಮ ದೇಹದ ತಾಪಮಾನವು ಎಲ್ಲಾ ದಿನವೂ ಒಂದೇ ಆಗಿರುವುದಿಲ್ಲ. ಹಗಲಿನಲ್ಲಿ ನಿಮ್ಮ ತಾಪಮಾನವು ಬದಲಾಗುತ್ತಲೇ ಇರುತ್ತದೆ. ಹಾಗಾದರೆ, ನಿಮ್ಮ ದೇಹದ ತಾಪಮಾನವನ್ನು ಚೆಕ್ ಮಾಡುವುದು ಹೇಗೆ? ಅದಕ್ಕಾಗಿ ಒಂದು ಚಾರ್ಟ್ ಇಲ್ಲಿದೆ.
ಸಾಮಾನ್ಯ ತಾಪಮಾನವು ವಯಸ್ಸು, ಲಿಂಗ ಮತ್ತು ದಿನದ ಸಮಯದೊಂದಿಗೆ ಬದಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ತಾಪಮಾನ ಸ್ವಲ್ಪ ಹೆಚ್ಚಾಗಿರುತ್ತದೆ. ಹಗಲಿನಲ್ಲಿ, ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಸ್ವಲ್ಪ ಹೆಚ್ಚಾಗುತ್ತದೆ. ವಯಸ್ಸಿನೊಂದಿಗೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಈ ಕೆಳಗಿನ ಲಿಂಕ್ ನಿರ್ದಿಷ್ಟ ಸಮಯದಲ್ಲಿ ನಿಮ್ಮ ಸಾಮಾನ್ಯ ದೇಹದ ಉಷ್ಣತೆಯನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: Summer Health Tips: ತಾಪಮಾನವು 45 ಡಿಗ್ರಿಗಳನ್ನು ದಾಟಿದಾಗ ದೇಹದಲ್ಲಿ ಸಂಭವಿಸಬಹುದಾದ ಬದಲಾವಣೆಗಳು
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೀಡಿರುವ ಮಾಹಿತಿಯನ್ನು ಭರ್ತಿ ಮಾಡಿದರೆ ನಿಮ್ಮ ದೇಹದ ಸಾಮಾನ್ಯ ತಾಪಮಾನ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಈ ಬಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಮಾಹಿತಿ ನೀಡಿದ್ದಾರೆ.
ನೀವು ನಮೂದಿಸಿದ ಎತ್ತರ, ತೂಕ, ಲಿಂಗ ಮತ್ತು ದಿನದ ಸಮಯವನ್ನು (ಬೆಳಿಗ್ಗೆ 7ರಿಂದ ಸಂಜೆ 6ರ ನಡುವೆ) ಆಧರಿಸಿ, ನಿಮ್ಮಂತಹ ಯಾರಿಗಾದರೂ ನಿಮ್ಮ ಉಷ್ಣತೆಯು ಸಾಮಾನ್ಯ ವ್ಯಾಪ್ತಿಯಲ್ಲಿದೆಯೇ ಎಂದು ನಿರ್ಧರಿಸಲು ಈ ಉಪಕರಣವು ಸಹಾಯ ಮಾಡುತ್ತದೆ.
ನೀವು ಎಷ್ಟು ಕ್ರಿಯಾಶೀಲರಾಗಿದ್ದೀರಿ, ದಿನದ ಯಾವ ಸಮಯದಲ್ಲಿ ಚೆಕ್ ಮಾಡುತ್ತಿದ್ದೀರಿ, ನಿಮ್ಮ ವಯಸ್ಸು, ನೀವು ಗಂಡೋ ಅಥವಾ ಹೆಣ್ಣೋ, ನೀವು ಏನು ಸೇವಿಸಿದ್ದೀರಿ, ನಿಮ್ಮ ಋತುಚಕ್ರದಲ್ಲಿ ನೀವು ಎಲ್ಲಿದ್ದೀರಿ ಎಂಬುದೆಲ್ಲವೂ ನಿಮ್ಮ ದೇಹದ ತಾಪಮಾನವನ್ನು ನಿರ್ಧರಿಸುತ್ತದೆ.
ಇದನ್ನೂ ಓದಿ: Neem Leaves Benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆ ಜಗಿಯುವುದರಿಂದ ಲಭಿಸುತ್ತೇ ಹಲವು ಆರೋಗ್ಯ ಪ್ರಯೋಜನಗಳು
ನೀವೇನಾದರೂ ಥರ್ಮಾಮೀಟರ್ ಮೂಲಕ ತಾಪಮಾನ ಚೆಕ್ ಮಾಡುವುದಾದರೆ ಆ ಥರ್ಮಾಮೀಟರ್ ಅನ್ನು ಯಾವ ಜಾಗದಲ್ಲಿಟ್ಟಿದ್ದೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಕಂಕುಳಿನ ಕೆಳಗೆ ಥರ್ಮಾಮೀಟರ್ ಇಟ್ಟರೆ ಅದು ನಿಮ್ಮ ಬಾಯಿಯಲ್ಲಿಟ್ಟಾಗಿನ ಉಷ್ಣತೆಗಿಂತ ಕಡಿಮೆಯಿರಬಹುದು. ನಿಮ್ಮ ಗುದನಾಳದ ಉಷ್ಣತೆಯು ಕಂಕುಳು ಹಾಗೂ ಬಾಯಿಯ ಉಷ್ಣತೆಗಿಂತ ಒಂದು ಡಿಗ್ರಿಯಷ್ಟು ಹೆಚ್ಚಾಗಿರುತ್ತದೆ.
ಸರಾಸರಿ ಸಾಮಾನ್ಯ ದೇಹದ ಉಷ್ಣತೆಯನ್ನು ಸಾಮಾನ್ಯವಾಗಿ 37 ಡಿಗ್ರಿ ಸೆಲ್ಸಿಯಸ್ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ದೇಹದ ಉಷ್ಣತೆಯು 36.1 ಡಿಗ್ರಿ ಸೆಲ್ಸಿಯಸ್ನಿಂದ 37.2 ಡಿಗ್ರಿ ಸೆಲ್ಸಿಯಸ್ವರೆಗೂ ಏರಿಳಿತವಾಗುತ್ತಿರುತ್ತದೆ. ನಿಮ್ಮ ದೇಹದ ತಾಪಮಾನ 38 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿದ್ದರೆ ನಿಮಗೆ ಸೋಂಕು ಅಥವಾ ಜ್ವರ ತಗುಲಿದೆ ಎಂದರ್ಥ.