AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಣದಬತ್ತಿಯ ಹೊಗೆ ಯಾರಿಗೆ ಅಪಾಯಕಾರಿ? ಇಲ್ಲಿದೆ ಮಾಹಿತಿ

ಶ್ವಾಸಕೋಶವು ಹದಗೆಡಲು ಪ್ರಾರಂಭಿಸಿದಾಗ, ಅವುಗಳ ಬಣ್ಣವು ಕೆಂಪು ಬಣ್ಣಕ್ಕೆ ಬದಲಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಸಣ್ಣ ಟ್ಯೂಬ್​ಗಳು ಕುಗ್ಗುತ್ತವೆ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ಧೂಮಪಾನ, ವಾಯು ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರವು ನಮ್ಮ ಶ್ವಾಸಕೋಶಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಆದರೆ ಮೇಣದ ಬತ್ತಿಯ ಹೊಗೆಯಿಂದಲೂ ಶ್ವಾಸಕೋಶಕ್ಕೆ ಹಾನಿಯಾಗುವುದು ಎಂಬುದು ಕೆಲವೇ ಕೆಲವು ಮಂದಿಗೆ ತಿಳಿದಿದೆ. ಒಳಾಂಗಣ ಮಾಲಿನ್ಯವು ಹೊರಾಂಗಣ ಮಾಲಿನ್ಯದಷ್ಟೇ ಹಾನಿಕಾರಕವಾದದ್ದು.

ಮೇಣದಬತ್ತಿಯ ಹೊಗೆ ಯಾರಿಗೆ ಅಪಾಯಕಾರಿ? ಇಲ್ಲಿದೆ ಮಾಹಿತಿ
ಮೇಣದಬತ್ತಿ
Follow us
ನಯನಾ ರಾಜೀವ್
|

Updated on: Sep 08, 2023 | 3:00 PM

ಶ್ವಾಸಕೋಶವು ಹದಗೆಡಲು ಪ್ರಾರಂಭಿಸಿದಾಗ, ಅವುಗಳ ಬಣ್ಣವು ಕೆಂಪು ಬಣ್ಣಕ್ಕೆ ಬದಲಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಸಣ್ಣ ಟ್ಯೂಬ್​ಗಳು ಕುಗ್ಗುತ್ತವೆ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ಧೂಮಪಾನ, ವಾಯು ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರವು ನಮ್ಮ ಶ್ವಾಸಕೋಶಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಆದರೆ ಮೇಣದ ಬತ್ತಿಯ ಹೊಗೆಯಿಂದಲೂ ಶ್ವಾಸಕೋಶಕ್ಕೆ ಹಾನಿಯಾಗುವುದು ಎಂಬುದು ಕೆಲವೇ ಕೆಲವು ಮಂದಿಗೆ ತಿಳಿದಿದೆ. ಒಳಾಂಗಣ ಮಾಲಿನ್ಯವು ಹೊರಾಂಗಣ ಮಾಲಿನ್ಯದಷ್ಟೇ ಹಾನಿಕಾರಕವಾದದ್ದು.

ಮೇಣದಬತ್ತಿಗಳನ್ನು ಹೊಗೆ ಯಾರಿಗೆ ಅಪಾಯಕಾರಿ? ಈ ಅಧ್ಯಯನದ ಪ್ರಕಾರ, ಸೌಮ್ಯವಾದ ಅಸ್ತಮಾ ಹೊಂದಿರುವ ಜನರು ಮೇಣದಬತ್ತಿಯ ಹೊಗೆಯಿಂದ ದೂರವಿರಬೇಕು. ಏಕೆಂದರೆ ಅದು ಅವರ ಶ್ವಾಸಕೋಶಕ್ಕೆ ಹೋಗಿ ಉಸಿರಾಟಕ್ಕೆ ತೊಂದರೆ ಉಂಟುಮಾಡಬಹುದು. ಇದರಿಂದ ನಿರಂತರ ಕೆಮ್ಮು, ಉಸಿರುಗಟ್ಟುವಿಕೆ ಮುಂತಾದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಮೇಣದಬತ್ತಿಯ ಹೊಗೆ ಡಿಎನ್ಎಗೆ ಹಾನಿ ಮಾಡುತ್ತದೆ ಮತ್ತು ರಕ್ತದ ಉರಿಯೂತವನ್ನು ಉಂಟುಮಾಡುತ್ತದೆ.

ಮೇಣದಬತ್ತಿ ಎಷ್ಟು ಅಪಾಯಕಾರಿ ಸಂಶೋಧನಾ ಬರಹಗಾರ ಕರಿನ್ ರೋಸೆನ್‌ಕಿಲ್ಡೆ ಲಾರ್ಸೆನ್ ಪ್ರಕಾರ, ಈ ಅಧ್ಯಯನವನ್ನು 18-25 ವರ್ಷ ವಯಸ್ಸಿನ ಯುವಕರ ಮೇಲೆ ಮಾಡಲಾಗಿದೆ. ಮಕ್ಕಳು ಮತ್ತು ಹಿರಿಯರಿಗೆ ಹೋಲಿಸಿದರೆ ಅವರು ಸಾಕಷ್ಟು ಫಿಟ್ ಆಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸೌಮ್ಯವಾದ ಆಸ್ತಮಾ ರೋಗಿಗಳಿಂದ ಪಡೆದ ಫಲಿತಾಂಶಗಳು ಮಕ್ಕಳು ಮತ್ತು ಹಿರಿಯರು ಹೆಚ್ಚು ಕಾಳಜಿವಹಿಹಬೇಕು.

ಮನೆಯಲ್ಲಿ ಮೇಣದಬತ್ತಿಗಳನ್ನು ಬೆಳಗಿಸುವಾಗ ಅಥವಾ ಅಡುಗೆ ಮಾಡುವಾಗ, ಮೊದಲನೆಯದಾಗಿ ಗಾಳಿಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಇದರಿಂದಾಗಿ ಮನೆಯೊಳಗೆ ಹಾನಿಕಾರಕ ಹೊಗೆ ಮತ್ತು ಅನಿಲ ಸಂಗ್ರಹವಾಗುವುದಿಲ್ಲ ಮತ್ತು ಉಸಿರಾಟದ ತೊಂದರೆ ಇರುವುದಿಲ್ಲ. ಅಡುಗೆ ಮಾಡುವಾಗ ಮತ್ತು ಮೇಣದಬತ್ತಿಗಳನ್ನು ಬೆಳಗಿಸುವಾಗ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆದಿಡಿ. ಅಧ್ಯಯನದ ಪ್ರಕಾರ, ಮೇಣದಬತ್ತಿಯು ಅಸ್ತಮಾ ರೋಗಿಗಳಿಗೆ ಹಾನಿಕಾರಕವಲ್ಲ ಆದರೆ ಇದು ಶ್ವಾಸಕೋಶಕ್ಕೆ ಅಪಾಯಕಾರಿ.

ಚಳಿಗಾಲದಲ್ಲಿ ಕಿಟಕಿಗಳು ಮತ್ತು ಬಾಗಿಲುಗಳು ಹೆಚ್ಚಾಗಿ ಮುಚ್ಚಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅಡುಗೆ ಮತ್ತು ಮೇಣದಬತ್ತಿಗಳ ಹೊಗೆ ಹೆಚ್ಚು ಹಾನಿ ಉಂಟುಮಾಡಬಹುದು.

ಮತ್ತಷ್ಟು ಓದಿ: Dragon fruit health benefits: ಡ್ರ್ಯಾಗನ್ ಫ್ರೂಟ್​​​ನ ಯಾಕೆ ಸೂಪರ್​​​​​ಪುಡ್​​​​​ ಎನ್ನುತ್ತಾರೆ? ಕಾರಣಗಳು ಇಲ್ಲಿವೆ

ಶ್ವಾಸಕೋಶವನ್ನು ಬಲಪಡಿಸಲು ಏನು ತಿನ್ನಬೇಕು ಶ್ವಾಸಕೋಶವನ್ನು ಬಲವಾಗಿ ಮತ್ತು ಸ್ವಚ್ಛವಾಗಿಡಲು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದರಿಂದ ಶ್ವಾಸಕೋಶಗಳು ಸಡಿಲಗೊಂಡು ಅವುಗಳ ಕೊಳೆ ಹೊರಬರುತ್ತದೆ.

ಬೀಟ್ರೂಟ್, ಮೆಣಸಿನಕಾಯಿ, ಸೇಬು, ಕುಂಬಳಕಾಯಿ, ಅರಿಶಿನ, ಟೊಮೆಟೊ, ಬ್ಲೂಬೆರ್ರಿ, ಕ್ಯಾಪ್ಸಿಕಂ, ಆಲಿವ್ ಎಣ್ಣೆ, ಮೊಸರು, ಬ್ರೆಜಿಲ್ ಬೀಜಗಳು ಮತ್ತು ಕಾಫಿಯನ್ನು ಆಹಾರದಲ್ಲಿ ಸೇವಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ