AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಡಿಜೆ ಸದ್ದಿಗೆ ಸ್ಟೆಪ್ಸ್ ಹಾಕಿದ್ದ ಮದುಮಗ ಬೆಳಗ್ಗೆ ದಾರುಣ ಸಾವು!

ಹೈದರಾಬಾದ್: ಡಿಜೆ ಸದ್ದಿಗೆ ಹೆಜ್ಜೆ ಹಾಕ್ತಿದ್ದಾರೆ. ಫುಲ್ ಖುಷಿ.. ಸಿಕ್ಕಾಪಟ್ಟೆ ಜೋಷ್.. ಮಿರ ಮಿರ ಮಿಂಚೋ ಲೈಟ್​​ ನಡುವೆ ನವದಂಪತಿ ಹಾಕ್ತಿರೋ ಸ್ಟೆಪ್​​ಗೆ ಶಿಳ್ಳೆ.. ಚಪ್ಪಾಳೆ.. ಕೇಕೆ.. ಆದ್ರೆ, ಇದೇ ಖುಷಿ.. ಇದೇ ಸಂತೋಷ ಅಲ್ಲೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಯಾರೂ ಊಹಿಸಲಾಗದ ಕಣ್ಣೀರ ಕಂಪನವೇ ಸೃಷ್ಟಿಯಾಗಿದೆ. ಯೆಸ್​.. ಅಂದು ಖುಷಿಯಲ್ಲಿದ್ದವರೂ ಕಣ್ಣೀರ ಕೋಡಿಯಲ್ಲಿ ಬೆಂದು ಹೋಗಿದ್ದಾರೆ. ಅಯ್ಯೋ. ಎಂಥಾ ಅನಾಹುತ ಆಗೋಯ್ತಲ್ಲ ಅಂತಾ ಚೀರಾಡ್ತಿದ್ದಾರೆ. ಕೆಲವರಂಥೂ ನಡುಗಿ ಹೋಗಿದ್ದಾರೆ. ಅದಕ್ಕೆ ಕಾರಣ ತೆಲಂಗಾಣದಲ್ಲಿ ನಡೆದ ಮದುಮಗನ […]

ರಾತ್ರಿ ಡಿಜೆ ಸದ್ದಿಗೆ ಸ್ಟೆಪ್ಸ್ ಹಾಕಿದ್ದ ಮದುಮಗ ಬೆಳಗ್ಗೆ ದಾರುಣ ಸಾವು!
ಸಾಧು ಶ್ರೀನಾಥ್​
|

Updated on:Feb 16, 2020 | 1:08 PM

Share

ಹೈದರಾಬಾದ್: ಡಿಜೆ ಸದ್ದಿಗೆ ಹೆಜ್ಜೆ ಹಾಕ್ತಿದ್ದಾರೆ. ಫುಲ್ ಖುಷಿ.. ಸಿಕ್ಕಾಪಟ್ಟೆ ಜೋಷ್.. ಮಿರ ಮಿರ ಮಿಂಚೋ ಲೈಟ್​​ ನಡುವೆ ನವದಂಪತಿ ಹಾಕ್ತಿರೋ ಸ್ಟೆಪ್​​ಗೆ ಶಿಳ್ಳೆ.. ಚಪ್ಪಾಳೆ.. ಕೇಕೆ.. ಆದ್ರೆ, ಇದೇ ಖುಷಿ.. ಇದೇ ಸಂತೋಷ ಅಲ್ಲೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ. ಯಾರೂ ಊಹಿಸಲಾಗದ ಕಣ್ಣೀರ ಕಂಪನವೇ ಸೃಷ್ಟಿಯಾಗಿದೆ.

ಯೆಸ್​.. ಅಂದು ಖುಷಿಯಲ್ಲಿದ್ದವರೂ ಕಣ್ಣೀರ ಕೋಡಿಯಲ್ಲಿ ಬೆಂದು ಹೋಗಿದ್ದಾರೆ. ಅಯ್ಯೋ. ಎಂಥಾ ಅನಾಹುತ ಆಗೋಯ್ತಲ್ಲ ಅಂತಾ ಚೀರಾಡ್ತಿದ್ದಾರೆ. ಕೆಲವರಂಥೂ ನಡುಗಿ ಹೋಗಿದ್ದಾರೆ. ಅದಕ್ಕೆ ಕಾರಣ ತೆಲಂಗಾಣದಲ್ಲಿ ನಡೆದ ಮದುಮಗನ ದಾರುಣ ಸಾವು.

ಡಿಜೆ ಸದ್ದಿಗೆ ಸ್ಟೆಪ್​.. ಮದುಮಗನ ದಾರುಣ ಸಾವು! ಇದೇ ಫೆಬ್ರವರಿ 14.. ತೆಲಂಗಾಣದ ನಿಜಾಮಾಬಾದ್ ಜಿಲ್ಲೆ ಬೋಧನ ಪಟ್ಟಣದಲ್ಲಿ ಗಣೇಶ್ ಹಾಗೂ ಸ್ವಪ್ನ ಸಪ್ತಪದಿ ತುಳಿದಿದ್ರು. ಮದುವೆ ಸಮಾರಂಭ ಮುಗಿದ ಬಳಿಕ ಮೆರವಣಿಗೆ ಕೂಡ ಮಾಡಿದ್ರು. ಅದೇ ದಿನ ರಾತ್ರಿ ಡಿಜೆ ಹಾಡಿನೊಂದಿಗೆ ನೃತ್ಯ ಸಹ ಆಯೋಜಿಸಿದ್ರು. ಈ ವೇಳೆ ಸಿಕ್ಕಾಪಟ್ಟೆ ಖುಷಿಯಲ್ಲಿದ್ದ ಮದುಮಗ ಗಣೇಶ್ ಡಿಜೆ ಸದ್ದಿಗೆ ಸಿಕ್ಕಾಪಟ್ಟೆ ಸ್ಟೆಪ್ ಹಾಕಿದ್ದ.

ಶುಕ್ರವಾರ ಖುಷಿ ಖುಷಿಯಲ್ಲೇ ಇದ್ದ ಗಣೇಶ್ ಶನಿವಾರ ಬೆಳಗ್ಗೆ ಆಗೋವಷ್ಟರಲ್ಲಿ ಉಸಿರು ನಿಲ್ಲಿಸಿದ್ದಾನೆ. ಶುಕ್ರವಾರ ಸಿಕ್ಕಾಪಟ್ಟೆ ನೃತ್ಯ ಮಾಡಿ ದಣಿದಿದ್ದ ಗಣೇಶ್ ಮೃತಪಟ್ಟಿದ್ದಾನೆ. ಈ ಅಘಾತದ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಬಾಳಿ ಬದುಕಬೇಕಾಗಿದ್ದ ಮನೆ ಮಗನ ಕಳೆದುಕೊಂಡು ಕುಟುಂಬಕ್ಕೆ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ.

ಇನ್ನು, ಡಿಜೆ ಸೌಂಡ್​​ಗೆ ಜೋಷ್​​ನಲ್ಲೇ ಕುಣಿದಿದ್ದ ಗಣೇಶ್​ಗೆ ಏನೋ ಆಯಾಸ, ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆತನನ್ನು ನಿಜಾಮಾಬಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಣೇಶ್ ಹೃದಯಾಘಾತದಿಂದ ಮೃತಪಟ್ಟಿರೋದಾಗಿ ವೈದ್ಯರು ಸೂಚಿಸಿದ್ದಾರಂತೆ. ಈ ಸಾವಿನ ಸುದ್ದಿ ಕೇಳಿ ಎಲ್ಲೆಲ್ಲೂ ದುಃಖದ ಕಾರ್ಮೋಡ ಆವರಿಸಿದೆ.

ಒಟ್ನಲ್ಲಿ ಕಲ್ಯಾಣ ಮಂಟಪದಲ್ಲೇ ಮಧುಮಗನ ಸಾವು ಸಂಭವಿಸಿರೋದು ತೆಲಂಗಾಣದಾದ್ಯಂತ ಚರ್ಚೆಗೂ ಗ್ರಾಸವಾಗಿದೆ. ಆರೋಗ್ಯವಾಗಿದ್ದ ಗಣೇಶ್ ಸಾವಿನ ಸುತ್ತ ಹಲವು ಅನುಮಾನ ಮೂಡ್ತಿದೆ. ಅದೇನೆ ಇರ್ಲಿ ಮದುಮಗನ ಸಾವಿನ ಅಘಾತ ಅರಗಿಸಿಕೊಳ್ಳಲಾಗದಂತಾಗಿದೆ. ಎರಡೂ ಕುಟುಂಬಗಳು ಅಯ್ಯೋ ದೇವರ ನಿನಗೆ ಕರುಣ ಇಲ್ವಾ ಅಂತಾ ಕಣ್ಣೀರಿಡ್ತಿದ್ದಾರೆ.

Published On - 1:07 pm, Sun, 16 February 20