ಹೈದರಾಬಾದ್: ಇತ್ತೀಚೆಗೆ ನಡೆದ GHMC ಇಲೆಕ್ಷನ್ನಲ್ಲಿ ಬಿಜೆಪಿ ಮತ್ತು ಟಿಆರ್ಎಸ್ ನಡುವೆ ಭಾರೀ ಜಟಾಪಟಿ ನಡೆದಿತ್ತು. ಬಿಜೆಪಿಯ ತೀವ್ರ ಸ್ಪರ್ಧೆಯಿಂದ ಟಿಆರ್ಎಸ್ನ ಪ್ರಾಬಲ್ಯ ಕುಸಿದಿತ್ತು. ಇದರಿಂದ ಟಿಆರ್ಎಸ್ ಮತ್ತು ಬಿಜೆಪಿ ನಡುವಿನ ಸಂಬಂಧ ಬಿರುಕು ಬಿಟ್ಟಿತ್ತು. ಈ ನಡುವೆ, ಇತ್ತೀಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಸೆಂಟ್ರಲ್ ವಿಸ್ಟಾ ಹೊಸ ಯೋಜನೆಯ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪತ್ರದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೆಂಟ್ರಲ್ ವಿಸ್ಟಾ ಯೋಜನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರದ ಮೂಲಸೌಕರ್ಯಗಳು ಅಸಮರ್ಪಕವಾಗಿದೆ. ಅಲ್ಲದೇ, ದೆಹಲಿ ಇಂದಿಗೂ ವಸಾಹತುಶಾಹಿ ಸಂಸ್ಕೃತಿಯಲ್ಲಿಯೇ ಇದೆ ಎಂದಿರುವ ಅವರು, ಸೆಂಟ್ರಲ್ ವಿಸ್ಟಾ ಯೋಜನೆ ಮೂಲಕ ವ್ಯವಸ್ಥೆಯ ಪುನರುತ್ಥಾನವಾಗಲಿ ಎಂದು ಆಶಿಸಿದ್ದಾರೆ.
ಭಾರತದ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಪ್ರತಿಷ್ಠೆ ಈ ಯೋಜನೆಯಿಂದ ಬಲಗೊಳ್ಳಲಿ. ಹೊಸ ಸಂಸತ್ ಭವನ ರಾಷ್ಟ್ರದ ಹೆಮ್ಮೆಯ ಸಂಕೇತವಾಗಲಿ ಎಂದು ಅವರು ಹಾರೈಸಿದ್ದಾರೆ. ಜೊತೆಗೆ, ಈ ಮಹತ್ವದ ರಾಷ್ಟ್ರೀಯ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳ್ಳಲಿ ಎಂದು ಬಯಸಿದ್ದಾರೆ.
I join you with a sense of pride on the occasion of laying of foundation stone for grand project of Central Vista. Project was long overdue, as existing govt infrastructure in the national capital is inadequate & also associated with our colonial past: Telangana CM writes to PM pic.twitter.com/4prszENMef
— ANI (@ANI) December 9, 2020