ಲಸಿಕೆ ವಿತರಣೆಗೆ ತಯಾರಾಗಿವೆ ಈ ಎರಡು ವಿಮಾನ ನಿಲ್ದಾಣಗಳು
ಎರಡೂ ವಿಮಾನ ನಿಲ್ದಾಣಗಳಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಲಸಿಕೆ ಸಂಗ್ರಹಣಾ ಪರಿಕರಗಳಿದ್ದು, ವಿಶೇಷ ಕೂಲ್ ಚೇಂಬರ್ ಕೂಡ ಲಭ್ಯವಿದೆ. ಈ ಮೂಲಕ -20 ಡಿಗ್ರಿ ಸೆಲ್ಸಿಯಸ್ನಲ್ಲಿ ಲಸಿಕೆಗಳನ್ನು ಸಂಗ್ರಹಿಸಿ ಇಡಬಹುದಾಗಿದೆ.
ದೆಹಲಿ: ಭಾರತದಲ್ಲಿ ಈಗಿರುವ ಶೈತ್ಯಾಗಾರ ವ್ಯವಸ್ಥೆಯು ಮೊದಲ ಹಂತದ, ಸುಮಾರು 3 ಕೋಟಿ ಕೊವಿಡ್ ಲಸಿಕೆಗಳನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ಸಚಿವಾಲಯ ಇಂದು ಸಂಜೆ ತಿಳಿಸಿದೆ.
ಮೊದಲ ಹಂತದಲ್ಲಿ ಹಿರಿಯ ನಾಗರಿಕರಿಗೆ, ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆ ಹೊಂದಿದವರಿಗೆ ಲಸಿಕೆ ವಿತರಿಸುವುದಾಗಿ ಸರ್ಕಾರ ಈ ಹಿಂದೆ ಹೇಳಿತ್ತು.
ದೆಹಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಲಸಿಕೆ ಸಂಗ್ರಹಕ್ಕೆ ಶೈತ್ಯಾಗಾರ ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಮುಂದಿನ ಕೆಲ ವಾರಗಳಲ್ಲಿ ಭಾರತೀಯರಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ.
ಎರಡೂ ವಿಮಾನ ನಿಲ್ದಾಣಗಳಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಲಸಿಕೆ ಸಂಗ್ರಹಣಾ ಪರಿಕರಗಳಿದ್ದು, ವಿಶೇಷ ಕೂಲ್ ಚೇಂಬರ್ ಕೂಡ ಲಭ್ಯವಿದೆ. ಈ ಮೂಲಕ -20 ಡಿಗ್ರಿ ಸೆಲ್ಸಿಯಸ್ನಲ್ಲಿ ಲಸಿಕೆಗಳನ್ನು ಸಂಗ್ರಹಿಸಿ ಇಡಬಹುದಾಗಿದೆ.
ವಿಮಾನ ನಿಲ್ದಾಣದಿಂದ ವಿಮಾನದವರೆಗೆ ಲಸಿಕೆ ಸಾಗಿಸಲು ಕೂಲ್ ಡಾಲಿ ಮತ್ತು ಕೂಲ್ ಟ್ರಾಲಿಗಳನ್ನು ಬಳಸಲು ಅನುಕೂಲ ಕಲ್ಪಿಸಲಾಗಿದೆ.
ಈ ಹಿಂದೆ, ಪಿಪಿಇ ಕಿಟ್ ಸಹಿತ ಇನ್ನಿತರ ಔಷಧಗಳ ಸರಬರಾಜಿನ ಮೂಲಕ ಕೊರೊನಾ ನಿಯಂತ್ರಣದಲ್ಲಿ ಸಹಕಾರಿಯಾಗಿದ್ದ ಈ ಎರಡು ವಿಮಾನ ನಿಲ್ದಾಣಗಳು ಈ ಬಾರಿ ಕಡಿಮೆ ಮಾನವ ಸಂಪರ್ಕದೊಂದಿಗೆ ಕಾರ್ಯ ನಿರ್ವಹಿಸಲು ತಯಾರಾಗಿವೆ.
#WATCH | GMR Hyderabad air cargo and Delhi Airport’s air cargo are set to play a pivotal role in the distribution of vaccines through state-of-the-art time-and temperature-sensitive distribution system. (Video source – GMR) pic.twitter.com/5yizh3Vb0F
— ANI (@ANI) December 5, 2020
ಕೊರೊನಾ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ಸಿಗುತ್ತಾ? ನಾಳೆ ನಡೆಯುವ ಸಭೆ ದೇಶಕ್ಕೆ ಎಷ್ಟು ಮುಖ್ಯ?
Published On - 10:32 pm, Tue, 8 December 20