ಹೈದರಾಬಾದ್ ಮೇ 11: ತೆಲಂಗಾಣ (Telangana) ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಶುಕ್ರವಾರ ನಡೆಸಿದ ತಮ್ಮ ಸುದ್ದಿಗೋಷ್ಠಿಯಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯ (Balakot airstrikes) ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ವೈಮಾನಿಕ ದಾಳಿ ನಡೆದಿದೆಯೇ ಎಂಬುದು ಯಾರಿಗೂ ಖಚಿತವಾಗಿ ತಿಳಿದಿಲ್ಲ. ದೇಶದ ಆಂತರಿಕ ಭದ್ರತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ನಮ್ಮ (ಕಾಂಗ್ರೆಸ್) ಮೇಲಿದ್ದರೆ ನಾವು ಅದನ್ನು ಯಾರ ಕೈಗೂ ಬಿಡುತ್ತಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ ಹೇಳಿದ್ದಾರೆ. ನಾನು ಪ್ರಧಾನಿಯವರಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ಕೇಳಲು ಬಯಸುತ್ತೇನೆ. ಪುಲ್ವಾಮಾ ದಾಳಿಗೆ ಏಕೆ ಅವಕಾಶ ನೀಡಿದ್ದೀರಿ? ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸಲು ನೀವು ಏನು ಮಾಡಿದ್ದೀರಿ? IB ಮತ್ತು R&AW ನಂತಹ ಏಜೆನ್ಸಿಗಳ ಸಹಾಯವನ್ನು ನೀವು ಏಕೆ ತೆಗೆದುಕೊಳ್ಳಲಿಲ್ಲ? ಇದು ನಿಮ್ಮ ವೈಫಲ್ಯ” ಎಂದು ರೆಡ್ಡಿ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯುವಂತೆ ತೆಲಂಗಾಣ ಸಿಎಂ ಜನರಿಗೆ ಕರೆ ನೀಡಿದ ರೆಡ್ಡಿ, ಮೋದಿಗೆ ಎಲ್ಲವೂ ಚುನಾವಣೆ ಗೆಲ್ಲುವುದೇ ಆಗಿದೆ. ಅವರ ಆಲೋಚನಾ ಕ್ರಮ ದೇಶಕ್ಕೆ ಒಳ್ಳೆಯದಲ್ಲ. ಮೋದಿ ಮತ್ತು ಬಿಜೆಪಿಯನ್ನು ದೇಶ ತೊಲಗಿಸುವ ಸಮಯ ಬಂದಿದೆ. ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಗುಪ್ತಚರ ಬ್ಯೂರೋ ಏನು ಮಾಡುತ್ತಿದೆ? ಪ್ರಶ್ನಿಸಿದ್ದಾರೆ.
#WATCH | Hyderabad: Telangana CM Revanth Reddy says, “…For Modi, everything is politics, everything is about winning elections. So, Modi’s thinking is not right for the country. So, the country needs to be without BJP, without Modi now. They answer everything with ‘Jai Sri… pic.twitter.com/17ZYnIxbur
— ANI (@ANI) May 11, 2024
ಫೆಬ್ರವರಿ 14, 2019 ರಂದು ಜೈಶ್-ಎ-ಮೊಹಮ್ಮದ್‌ನ ಆತ್ಮಹತ್ಯಾ ಬಾಂಬರ್ ಐಇಡಿ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಬಸ್‌ಗೆ ಡಿಕ್ಕಿ ಹೊಡೆದ ನಂತರ ಪುಲ್ವಾಮಾ ದಾಳಿ ನಡೆದಿತ್ತು. ಫೆಬ್ರವರಿ 26 ರಂದು, IAF ಫೈಟರ್ ಜೆಟ್‌ಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಶ್ ಅಡಗುತಾಣವನ್ನು ಗುರಿಯಾಗಿಸಿ, “ದೊಡ್ಡ ಸಂಖ್ಯೆಯ ಭಯೋತ್ಪಾದಕರನ್ನು ಕೊಂದಿದ್ದು, ಅವರ ಮೂಲಸೌಕರ್ಯಗಳನ್ನು ನಾಶಪಡಿಸಿದ್ದವು.
ಬಿಜೆಪಿ ಎಲ್ಲದರಲ್ಲೂ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ ರೆಡ್ಡಿ, ಗುಜರಾತ್ ರಾಜ್ಯ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದರೂ ಬುಲೆಟ್ ರೈಲು, ಸಾಬರಮತಿ ನದಿ ತೀರ ಮತ್ತು ಗಿಫ್ಟ್ ಸಿಟಿಯಂತಹ ಯೋಜನೆಗಳನ್ನು ಗುಜರಾತ್‌ಗೆ ಏಕೆ ನೀಡಲಾಗಿದೆ ಪ್ರಶ್ನಿಸಿದ್ದಾರೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ಹಿಂದುಳಿದ ರಾಜ್ಯಗಳಿಗೆ ಹಣ ನೀಡಿದರೆ ಅದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡುವಲ್ಲಿಯೂ ತಾರತಮ್ಯವನ್ನು ತೋರಿಸಿದೆ.
“ಹಣಕಾಸು, (ನಿಧಿ ನೀಡಿದರೆ) ಜನಸಂಖ್ಯೆಯ ಆಧಾರದ ಮೇಲೆ, ನಾನು ಸ್ವೀಕರಿಸುತ್ತೇನೆ. ಆದರೆ ರಾಜಕೀಯ ಪ್ರಾತಿನಿಧ್ಯದಲ್ಲಿ, ನೀವು ದಕ್ಷಿಣಕ್ಕೆ ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಸ್ಥಾನ ಅಥವಾ ಪ್ರಮುಖ ಖಾತೆಗಳನ್ನು ಏಕೆ ನೀಡಿಲ್ಲ?” ಅವರು ಹೇಳಿದರು. “ಅವರಿಗೆ ಸಮಸ್ಯೆ ಇರುವಲ್ಲಿ, ನಾವು ಪ್ರಶ್ನೆಗಳನ್ನು ಕೇಳಿದಾಗ, ಅವರು ‘ಜೈ ಶ್ರೀ ರಾಮ್’ ಎಂದು ಹೇಳುತ್ತಾರೆ, ಎಲ್ಲದಕ್ಕೂ, ಅವರ ಬಳಿ ಒಂದೇ ಉತ್ತರ- ಜೈ ಶ್ರೀ ರಾಮ್ ಎಂದು ರೆಡ್ಡಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ, ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ 74 ವರ್ಷ ದಾಟಲಿದ್ದಾರೆ. ಮುಂದಿನ ವರ್ಷ ಪ್ರಧಾನಿಗೆ 75 ವರ್ಷ ತುಂಬಲಿದೆ. ಚುನಾಯಿತ ಪ್ರತಿನಿಧಿಗೆ ಬಿಜೆಪಿಯಲ್ಲಿ ನಿವೃತ್ತಿ ವಯಸ್ಸು 75 ವರ್ಷ ಎಂದು ಅವರು ನಿರ್ಧರಿಸಿದ್ದಾರೆ. ಹೀಗಾಗಿಯೇ ಅವರು ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಹಿರಿಯ ನಾಯಕರ ವಿರುದ್ಧ ಬಲವಂತವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈಗ ನರೇಂದ್ರ ಮೋದಿ 74 ವರ್ಷ ದಾಟಲು ಹೊರಟಿದ್ದು, ಇನ್ನೂ ಒಂದು ವರ್ಷ ಬಾಕಿ ಇದೆ. ಇದೇ ಪ್ರಶ್ನೆಯನ್ನು ನಾನು ನರೇಂದ್ರ ಮೋದಿಯವರಿಗೂ ಕೇಳಲು ಬಯಸುತ್ತೇನೆ. ನೀವು 75 ನೇ ವಯಸ್ಸಿನಲ್ಲಿ ನಿವೃತ್ತರಾಗಲು ಸಿದ್ಧರಿದ್ದೀರಾ? ” ಎಂದು ಕೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಮುಖ್ಯಮಂತ್ರಿಯಾದ ರೇವಂತ್ ರೆಡ್ಡಿ, ಪ್ರಧಾನಿ ಮೋದಿ ₹ 113 ಲಕ್ಷ ಕೋಟಿ ಸಾಲ ಮಾಡಿ ದೇಶವನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Arvind Kejriwal: ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕು, ನನಗೆ ದೇಶದ 140 ಕೋಟಿ ಜನರ ಬೆಂಬಲ ಬೇಕು: ಕೇಜ್ರಿವಾಲ್
“ನಾನು ನಿಮಗೆ ಒಂದು ವಿಷಯವನ್ನು ನೆನಪಿಸಬಯಸುತ್ತೇನೆ. 1947ರಿಂದ 2014ರವರೆಗೆ 14 ಪ್ರಧಾನಿಗಳು ಸುಮಾರು 67 ವರ್ಷಗಳ ಕಾಲ 55 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರಧಾನಿ ಮೋದಿ 113 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರು ಈ ದೇಶವನ್ನು ಹಾಳುಮಾಡಿದ್ದಾರೆ. ದೇಶವು ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗಾಗಿ ಅವರು ಯಾವುದೇ ದಾಖಲೆಗಳನ್ನು ಸಲ್ಲಿಸಿದರೂ, ನಾವು ಆ ದಾಖಲೆಗಳನ್ನು ನಂಬುವುದಿಲ್ಲ. ಏಕೆಂದರೆ ಅವರು ಚುನಾವಣೆಯಲ್ಲಿ ಗೆಲ್ಲಲು ಯಾವುದೇ ಮಟ್ಟಕ್ಕೆ ಹೋಗಬಹುದು ಎಂದು ರೆಡ್ಡಿ ಆರೋಪಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ