ಅಲ್ಲೂ ಪಟಾಕಿ ನಿಷೇಧ ಆಯ್ತು.. ಅಲ್ಲಿನ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಹೇಳಿದ್ದೇನು?

| Updated By: ಸಾಧು ಶ್ರೀನಾಥ್​

Updated on: Nov 12, 2020 | 4:28 PM

ತೆಲಂಗಾಣ: ದೀಪಾವಳಿ‌ ಹಬ್ಬ ಸನಿಹವಾಗುತ್ತಿರುವ ಹಿನ್ನೆಲೆಯಿಂದಾಗಿ ಪಟಾಕಿಗಳಿಂದ ಹೊರಬರುವ ಮಾಲಿನ್ಯಕಾರಕ ಹೊಗೆ ಜನರಿಗೆ ತೊಂದರೆಯುನ್ನುಂಟು ಮಾಡುತ್ತವೆ. ಅಲ್ಲದೆ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವುದನ್ನು ಗಮನಿಸಿದ ಕೆಲವೊಂದು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧ ಮಾಡಿವೆ. ಈಗ ತೆಲಂಗಾಣ ಹೈಕೋರ್ಟ್​ ಸಹ ರಾಜ್ಯದಲ್ಲಿ ಪಟಾಕಿ ನಿಷೇದ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ನ್ಯಾಯವಾದಿ ಇಂದ್ರಪ್ರಕಾಶ ಅವರು ದೀಪಾವಳಿಯಲ್ಲಿ‌ ಪಟಾಕಿ‌ ಹೊಡೆಯದಂತೆ ಹೈಕೋರ್ಟ್​ನಲ್ಲಿ ಪಿಟಿಷನ್ ಹೂಡಿದ್ದರು.​ ತೆಲಂಗಾಣದಲ್ಲಿ ಇನ್ನೂ ಕೂಡ ಕೊರೊನಾ ಹಾವಳಿ […]

ಅಲ್ಲೂ ಪಟಾಕಿ ನಿಷೇಧ ಆಯ್ತು.. ಅಲ್ಲಿನ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಹೇಳಿದ್ದೇನು?
Follow us on

ತೆಲಂಗಾಣ: ದೀಪಾವಳಿ‌ ಹಬ್ಬ ಸನಿಹವಾಗುತ್ತಿರುವ ಹಿನ್ನೆಲೆಯಿಂದಾಗಿ ಪಟಾಕಿಗಳಿಂದ ಹೊರಬರುವ ಮಾಲಿನ್ಯಕಾರಕ ಹೊಗೆ ಜನರಿಗೆ ತೊಂದರೆಯುನ್ನುಂಟು ಮಾಡುತ್ತವೆ. ಅಲ್ಲದೆ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವುದನ್ನು ಗಮನಿಸಿದ ಕೆಲವೊಂದು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧ ಮಾಡಿವೆ.

ಈಗ ತೆಲಂಗಾಣ ಹೈಕೋರ್ಟ್​ ಸಹ ರಾಜ್ಯದಲ್ಲಿ ಪಟಾಕಿ ನಿಷೇದ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ನ್ಯಾಯವಾದಿ ಇಂದ್ರಪ್ರಕಾಶ ಅವರು ದೀಪಾವಳಿಯಲ್ಲಿ‌ ಪಟಾಕಿ‌ ಹೊಡೆಯದಂತೆ ಹೈಕೋರ್ಟ್​ನಲ್ಲಿ ಪಿಟಿಷನ್ ಹೂಡಿದ್ದರು.​ ತೆಲಂಗಾಣದಲ್ಲಿ ಇನ್ನೂ ಕೂಡ ಕೊರೊನಾ ಹಾವಳಿ ಇದೆ. ಹೀಗಾಗಿ ಪಟಾಕಿ‌ ಹೊಡೆಯುವದರಿಂದ ಜನರು‌ ಶ್ವಾಸಕೋಶದ ಸಮಸ್ಯೆಗೆ ಈಡಾಗುತ್ತಾರೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಪಟಾಕಿ ಹೊಡೆಯುವುದು ಸರಿ ಅಲ್ಲ ಎಂದು ನ್ಯಾಯವಾದಿ ಇಂದ್ರಪ್ರಕಾಶ ವಾದ ಮಂಡಿಸಿದರು. ಜೊತೆಗೆ ಪಟಾಕಿ‌‌ಯನ್ನು ಬ್ಯಾನ್‌ ಮಾಡುವಂತೆ ಮನವಿ ಮಾಡಿದ್ದರು. ವಾದವನ್ನು ಪುರಸ್ಕರಿಸಿದ ಹೈಕೋರ್ಟ್​ ಪಟಾಕಿ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.

ಅಲ್ಲದೆ ಮಾಧ್ಯಮಗಳ ಮೂಲಕ ಈ ಬಗ್ಗೆ ಪ್ರಚಾರ ಮಾಡಿ ಪಟಾಕಿ‌ ಹೊಡೆಯದಂತೆ ಪ್ರಜೆಗಳಲ್ಲಿ‌ ಜಾಗೃತಿ ಮೂಡಿಸಲು ಸರಕಾರಕ್ಕೆ ಆದೇಶ ನೀಡಿದೆ. ಜೊತೆಗೆ ಪಟಾಕಿ ಹೊಡೆದವರ ಮೇಲೆ ಪ್ರಕರಣ ದಾಖಲಿಸಲು ಸಹ ಸೂಚನೆ ನೀಡಿದೆ. ಹಾಗೂ ಇದೇ 19 ರಂದು ಈ‌ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡಲು ಹೇಳಿದೆ.