ಮಹಬೂಬಾಬಾದ್ : ತೆಲಂಗಾಣ ಭಾರತದ ಅಫ್ಘಾನಿಸ್ತಾನ (Afghanistan) ಮತ್ತು ಕೆಸಿಆರ್(KCR) ಅದರ ತಾಲಿಬಾನ್ (Taliban)ಎಂದು ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ(YS Sharmila) ಭಾನುವಾರ ಹೇಳಿದ್ದಾರೆ. ಮಹಬೂಬಾಬಾದ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರ್ಮಿಳಾ, ತೆಲಂಗಾಣ ಸಿಎಂ ಕೆಸಿಆರ್ ಸರ್ವಾಧಿಕಾರಿ, ಅವರು ನಿರಂಕುಶಾಧಿಕಾರಿ, ತೆಲಂಗಾಣದಲ್ಲಿ ಭಾರತೀಯ ಸಂವಿಧಾನವಿಲ್ಲ, ಕೆಸಿಆರ್ ಅವರ ಸಂವಿಧಾನವಿದೆ, ತೆಲಂಗಾಣ ಭಾರತದ ಆಫ್ಘಾನಿಸ್ತಾನ ಮತ್ತು ಕೆಸಿಆರ್ ಅದರ ತಾಲಿಬಾನ್ ಎಂದಿದ್ದಾರೆ. ಮಹಬೂಬಾಬಾದ್ ಶಾಸಕ ಮತ್ತು ಬಿಆರ್‌ಎಸ್ ನಾಯಕ ಶಂಕರ್ ನಾಯ್ಕ್ ವಿರುದ್ಧ ಅನುಚಿತ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು ವೈಎಸ್ ಶರ್ಮಿಳಾ ಅವರನ್ನು ಭಾನುವಾರ ಬಂಧಿಸಿದ್ದಾರೆ.
ಮಹಬೂಬಾಬಾದ್ ಪಟ್ಟಣದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗದಂತೆ ಪೊಲೀಸರು ಆಕೆಯನ್ನು ಹೈದರಾಬಾದ್‌ಗೆ ಸ್ಥಳಾಂತರಿಸಿದರು. ಅವರು ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 ರ ಅಡಿಯಲ್ಲಿ ಶಾಂತಿ ಭಂಗವನ್ನು ಪ್ರಚೋದಿಸುವ ಮತ್ತು SC ST POA ಕಾಯಿದೆಯ ಸೆಕ್ಷನ್ 3(1)r ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
#WATCH | He (Telangana CM KCR) is a dictator, he is a tyrant, there is no Indian Constitution in Telangana, there is only KCR’s Constitution. Telangana is the Afghanistan of India and KCR is its Taliban: YSRTP Chief YS Sharmila pic.twitter.com/yAr8SyMT9h
— ANI (@ANI) February 19, 2023
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವೈಎಸ್ ಶರ್ಮಿಳಾ, ಮಹಬೂಬಾಬಾದ್ ಶಾಸಕರು ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ನೀವು ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದೀರಿ, ನೀವು ಅದನ್ನು ಈಡೇರಿಸಿಲ್ಲ, ನಿಮ್ಮ ಭರವಸೆಗಳನ್ನು ಈಡೇರಿಸದಿದ್ದರೆ ನೀವು ಕೊಜ್ಜಾ ಎಂದು ಅರ್ಥ ಎಂದಿದ್ದಾರೆ.
ಇದನ್ನೂ ಓದಿ: ತಮ್ಮ ಖಾಸಗಿ ಫೋಟೋಗಳಿಗೆ ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ, IPS ರೂಪಾ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ
ಘಟನೆಯ ನಂತರ, ಮಹಬೂಬಾಬಾದ್ ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಾಗಿ ವೈಎಸ್ ಶರ್ಮಿಳಾ ವಿರುದ್ಧ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಜಿಲ್ಲೆಯಲ್ಲಿ ಧರಣಿ ಪ್ರತಿಭಟನೆ ನಡೆಸಿದೆ. ರಸ್ತೆಯಲ್ಲಿದ್ದ ಪ್ರತಿಭಟನಾಕಾರರು ವೈಎಸ್‌ಆರ್‌ಟಿಪಿ ಮುಖ್ಯಸ್ಥರ ವಿರುದ್ಧ “ಗೋ ಬ್ಯಾಕ್ ಶರ್ಮಿಳಾ” ಎಂದು ಘೋಷಣೆ ಕೂಗುತ್ತಾ ಪಕ್ಷದ ಹೋರ್ಡಿಂಗ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ಸುಟ್ಟುಹಾಕಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Sun, 19 February 23