ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು

| Updated By:

Updated on: Jun 28, 2020 | 6:01 PM

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ. ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು […]

ಪೊಲೀಸ್‌ ಅಕಾಡೆಮಿ ಮೇಲೆ ಕೊರೊನಾ ದಾಳಿ, ಡಿಐಜಿ ಸೇರಿ 124 ಮಂದಿಗೆ ಸೋಂಕು
Follow us on

ಹೈದರಾಬಾದ್‌: ದೇಶಾದ್ಯಂತ ದಿನೇ ದಿನೇ ಕೊರೊನಾ ಅಟ್ಟಹಾಸಗೈಯುತ್ತಿದೆ. ಅದ್ರಲ್ಲೂ ತೆಲಂಗಾಣದಲ್ಲಿ ಕೊರೊನಾ ಉಪಟಳ ಹೆಚ್ಚಾಗ್ತಿದೆ. ಈಗ ಅಲ್ಲಿನ ಪೊಲೀಸ್‌ ಸೇವೆಗೆ ತರಬೇತಿ ನೀಡುವ ಪೊಲೀಸ್‌ ಅಕಾಡೆಮಿಗೆ ನುಗ್ಗಿದೆ. ಪರಿಣಾಮ ಅಕಾಡೆಮಿಯಲ್ಲೀಗ ತಳಮಳ ಶುರುವಾಗಿದೆ.

ಹೌದು, ಕೊರೊನಾ ವೈರಸ್‌ ದಾಳಿಗೆ ತೆಲಂಗಾಣ ಪೊಲೀಸ್ ಅಕಾಡೆಮಿಯ 124 ಮಂದಿಗೆ‌ ಸೋಂಕು ತಗುಲಿದೆ. ಅಟೆಂಡರ್‌ನಿಂದ‌ ಹಿಡಿದು ಡಿಐಜಿ‌ ವರೆಗಿನ ಅಧಿಕಾರಿಗಳಿಗೂ ಕೊರೊನಾ ಹರಡಿದೆ. ಅಕಾಡೆಮಿಯಲ್ಲಿ‌ ಕಾರ್ಯನಿರ್ವಹಿಸುವ‌ ಅಡಿಷನಲ್ ಎಸ್​ಪಿ., ಮೂವರು‌ ಡಿಎಸ್​ಪಿ, ನಾಲ್ವರು ಸಿಐ ಸೇರಿದಂತೆ ಮೆಡಿಕಲ್‌ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ.

ಇಷ್ಟೇ ಅಲ್ಲ ಅಕಾಡೆಮಿಯಲ್ಲಿ‌ ಶಿಕ್ಷಣ ಪಡೆಯುತ್ತಿರೋ 1900 ಕ್ಯಾಡೆಟ್‌ಗಳಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಅಕಾಡೆಮಿ‌ಯ ಎಲ್ಲ ಕ್ಯಾಡೆಟ್‌ಗಳಿಗೆ‌ ಈಗ ವೈದ್ಯಕೀಯ ಪರೀಕ್ಷೆ‌ ಮಾಡಿಸಲು‌ ತೆಲಂಗಾಣ ಅಕಾಡೆಮಿ ಮುಂದಾಗಿದೆ.