DMK ಮಾಜಿ ಸಂಸದನ ರೌದ್ರಾವತಾರ ನೋಡಿ, ಪೊಲೀಸ್ ಪೇದೆ ಮಾಡಿದ ತಪ್ಪೇನು?

ಚೆನ್ನೈ: ಮಹಾಮಾರಿ ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಪೊಲೀಸರು ಕೊವಿಡ್ ವಾರಿಯರ್​ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲೂ ಕೆಲಸ ಮಾಡುತ್ತಿರುವ ಕೊವಿಡ್​ ವಾರಿಯರ್​ಗಳನ್ನು ಎಲ್ಲರೂ ಗೌರವಿಸಬೇಕಿದೆ. ಆದ್ರೆ, ತಮಿಳುನಾಡಿನ ಸೇಲಂನಲ್ಲಿ ಪೊಲೀಸ್ ಪೇದೆಯನ್ನೇ ಮಾಜಿ ಸಂಸದರೊಬ್ಬರು ಥಳಿಸಿರುವ ಘಟನೆ ನಡೆದಿದೆ. ನಿನ್ನೆ ಭಾನುವಾರ ತಮಿಳುನಾಡಿನಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದ ಕಾರಣ ಎಲ್ಲಾ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಸೇಲಂ ಚೆಕ್​ಪೋಸ್ಟ್​ನಲ್ಲಿ DMK ಮಾಜಿ ಸಂಸದ ಕೆ.ಅರ್ಜುನ್ ಅವರ ಕಾರನ್ನೂ ನಿಲ್ಲಿಸಿ ವೆಹಿಕಲ್ ಪಾಸ್ ಕೇಳಿದ್ದಾರೆ. […]

DMK ಮಾಜಿ ಸಂಸದನ ರೌದ್ರಾವತಾರ ನೋಡಿ, ಪೊಲೀಸ್ ಪೇದೆ ಮಾಡಿದ ತಪ್ಪೇನು?
Follow us
ಸಾಧು ಶ್ರೀನಾಥ್​
| Updated By:

Updated on: Jun 29, 2020 | 2:52 PM

ಚೆನ್ನೈ: ಮಹಾಮಾರಿ ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಪೊಲೀಸರು ಕೊವಿಡ್ ವಾರಿಯರ್​ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಕಷ್ಟದ ಸಂದರ್ಭದಲ್ಲೂ ಕೆಲಸ ಮಾಡುತ್ತಿರುವ ಕೊವಿಡ್​ ವಾರಿಯರ್​ಗಳನ್ನು ಎಲ್ಲರೂ ಗೌರವಿಸಬೇಕಿದೆ. ಆದ್ರೆ, ತಮಿಳುನಾಡಿನ ಸೇಲಂನಲ್ಲಿ ಪೊಲೀಸ್ ಪೇದೆಯನ್ನೇ ಮಾಜಿ ಸಂಸದರೊಬ್ಬರು ಥಳಿಸಿರುವ ಘಟನೆ ನಡೆದಿದೆ.

ನಿನ್ನೆ ಭಾನುವಾರ ತಮಿಳುನಾಡಿನಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದ ಕಾರಣ ಎಲ್ಲಾ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಸೇಲಂ ಚೆಕ್​ಪೋಸ್ಟ್​ನಲ್ಲಿ DMK ಮಾಜಿ ಸಂಸದ ಕೆ.ಅರ್ಜುನ್ ಅವರ ಕಾರನ್ನೂ ನಿಲ್ಲಿಸಿ ವೆಹಿಕಲ್ ಪಾಸ್ ಕೇಳಿದ್ದಾರೆ. ಇಷ್ಟಕ್ಕೇ ತಾಳ್ಮೆ ಕಳೆದುಕೊಂಡ ಕೆ.ಅರ್ಜುನ್, ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಒದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.