Telangana Liberation Day: ಇಂದು ತೆಲಂಗಾಣ ವಿಮೋಚನಾ ದಿನ -ಮಿಸುಕಾಡಿದರೆ ಚರ್ಮ ಸುಲಿಯುತ್ತೇವೆ -ಹೈದ್ರಾಬಾದ್ ಪೊಲೀಸರಿಂದ ನೇರ ಎಚ್ಚರಿಕೆ

| Updated By: ಸಾಧು ಶ್ರೀನಾಥ್​

Updated on: Sep 17, 2022 | 6:06 AM

ಸೆಪ್ಟೆಂಬರ್ 17: ವಿಮೋಚನೆಯ ಹಠಕ್ಕೆ ಬಿದ್ದಿರುವ ಕೇಸರಿ ಪಕ್ಷವು ಸಂಭ್ರಮಾಚರಣೆಯಲ್ಲಿ ಆಕ್ರಮಣಕಾರಿಯಾಗಿ ಹೆಜ್ಜೆ ಹಾಕುತ್ತಿದೆ. ವಿಮೋಚನಾ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲು ಬಿಜೆಪಿ ಸಿದ್ಧವಾಗಿದೆ. ಸೆ. 17ರಂದು ಪರೇಡ್ ಮೈದಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಅದೇ ದಿನ ರಾಜ್ಯ ಸರ್ಕಾರ ಎನ್‌ಟಿಆರ್ ಮೈದಾನದಲ್ಲಿ ಸಭೆ ಆಯೋಜಿಸುತ್ತಿದೆ!

Telangana Liberation Day: ಇಂದು ತೆಲಂಗಾಣ ವಿಮೋಚನಾ ದಿನ -ಮಿಸುಕಾಡಿದರೆ ಚರ್ಮ ಸುಲಿಯುತ್ತೇವೆ -ಹೈದ್ರಾಬಾದ್ ಪೊಲೀಸರಿಂದ ನೇರ ಎಚ್ಚರಿಕೆ
ಮಿಸುಕಾಡಿದರೆ ಚರ್ಮ ಸುಲಿಯುತ್ತೇವೆ -ಹೈದ್ರಾಬಾದ್ ಪೊಲೀಸರಿಂದ ನೇರ ಎಚ್ಚರಿಕೆ
Follow us on

Hyderabad /Telangana: ಇಂದು ತೆಲಂಗಾಣ ಅದರಲ್ಲೂ ಹೈದರಾಬಾದ್‌ನಲ್ಲಿ ದೊಡ್ಡ ದಿನ. ತೆಲಂಗಾಣ ಸರ್ಕಾರ ಇದನ್ನು ರಾಷ್ಟ್ರೀಯ ಏಕೀಕರಣ ದಿನ ಎಂದು ಘೋಷಿಸಿದೆ. ಬಿಜೆಪಿ ಇದನ್ನು ತೆಲಂಗಾಣ ವಿಮೋಚನಾ ದಿನ ಎಂದು ಕರೆಯುತ್ತದೆ. ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವವರ ಮೇಲೆ ನಿಗಾ ಇರಿಸಿದ್ದೇವೆ. ಮಿಸುಕಾಡಿದರೆ ಚರ್ಮ ಸುಲಿಯುತ್ತೇವೆ ಹೈದರಾಬಾದ್ ಪೊಲೀಸರು ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ತೆಲಂಗಾಣ ರಾಜಕೀಯ ರಂಗೇರುತ್ತಿದೆ. ತೆಲಂಗಾಣ/ ಹೈದರಾಬಾದ್‌ ವಿಮೋಚನೆಯ ಆಚರಣೆಗಳು ಭರ್ಜರಿಯಾಗಿ ರಾಜಕೀಯ ರಂಗು ಪಡೆದುಕೊಂಡಿವೆ. ಆ ಪಕ್ಷ.. ಈ ಪಕ್ಷ ಅಂತಲ್ಲ.. ಎಲ್ಲ ರಾಜಕೀಯ ಪಕ್ಷಗಳೂ ಹಬ್ಬ ಹರಿದಿನದ ಹೆಸರಿನಲ್ಲಿ ಆಯಕಟ್ಟಿನ ಹೆಜ್ಜೆ ಇಡುತ್ತಿವೆ. ಇದರಲ್ಲಿ ಕಮಲ ಪಕ್ಷ ಬಿಜೆಪಿ ಮುಂಚೂಣಿಯಲ್ಲಿದೆ. ವಿಮೋಚನೆಯ ಹಠಕ್ಕೆ ಬಿದ್ದಿರುವ ಕೇಸರಿ ಪಕ್ಷವು ಸಂಭ್ರಮಾಚರಣೆಯಲ್ಲಿ ಆಕ್ರಮಣಕಾರಿಯಾಗಿ ಹೆಜ್ಜೆ ಹಾಕುತ್ತಿದೆ.

ವಿಮೋಚನಾ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲು ಬಿಜೆಪಿ ಸಿದ್ಧವಾಗಿದೆ. ಕಿಶನ್ ರೆಡ್ಡಿ ರ‍್ಯಾಲಿಯಲ್ಲಿ ಭಾಗವಹಿಸಲಕಿದ್ದಾರೆ. ಸೆಪ್ಟೆಂಬರ್17ರಂದು ಪರೇಡ್ ಮೈದಾನದಲ್ಲಿ ಬಿಜೆಪಿ ಬೃಹತ್ ಸಾರ್ವಜನಿಕ ಸಭೆ ನಡೆಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಅದೇ ದಿನ ರಾಜ್ಯ ಸರ್ಕಾರ ಎನ್‌ಟಿಆರ್ ಮೈದಾನದಲ್ಲಿ ಸಭೆ ಆಯೋಜಿಸುತ್ತಿದೆ!

ಸೆಪ್ಟೆಂಬರ್ 17 ರಂದು ಹೈದರಾಬಾದ್‌ನಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ. ತೆಲಂಗಾಣ ಸರ್ಕಾರ ಸೆಪ್ಟೆಂಬರ್ 17 ಅನ್ನು ರಾಷ್ಟ್ರೀಯ ಏಕೀಕರಣ ದಿನವನ್ನಾಗಿ ಆಚರಿಸುತ್ತಿದೆ. ಅಲ್ಲದೆ, ಬಿಜೆಪಿ ಸೆಪ್ಟೆಂಬರ್ 17 ಅನ್ನು ತೆಲಂಗಾಣ ವಿಮೋಚನಾ ದಿನವನ್ನಾಗಿ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಿಂದ ಎಲ್ಲಿಯೂ ಉದ್ವಿಗ್ನತೆ ಉಂಟಾಗದಂತೆ ಪೊಲೀಸರು ಎಚ್ಚರಿಕೆ ವಹಿಸುತ್ತಿದ್ದಾರೆ.

ಪೊಲೀಸ್ ಇಲಾಖೆ ನಗರದ ನಾಗರಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಸೆಪ್ಟೆಂಬರ್ 17 ರಂದು ಶಾಂತಿಯುತ ಆಚರಣೆಗಳನ್ನು ನಡೆಸುವಂತೆ ಕೋರಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವವರ ಮೇಲೆ ನಿಗಾ ಇರಿಸಿದ್ದೇವೆ ಎಂದೂ ಸ್ಪಷ್ಟಪಡಿಸಿದ್ದಾರೆ. ಗಲಭೆ/ಕ್ಷೋಭೆಗಳನ್ನುಂಟು ಮಾಡಲು ಯತ್ನಿಸಿದರೆ ತಕ್ಕ ಶಾಸ್ತಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ ಹೈದರಾಬಾದ್‌ ಪೊಲೀಸರು.

To read more in Telugu click here