PM Modi Birthday: ಇಂದು ಪ್ರಧಾನಿ ನರೇಂದ್ರ ಮೋದಿ 72ನೇ ಜನ್ಮದಿನ; ದೇಶಾದ್ಯಂತ ಬಿಜೆಪಿಯಿಂದ ವಿವಿಧತೆಯಲ್ಲಿ ಏಕತೆ, ರಕ್ತದಾನ, ಸ್ವಚ್ಛತಾ ಅಭಿಯಾನ ಆಯೋಜನೆ
PM Narendra Modi 72nd Birthday: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬವನ್ನು ಆಚರಿಸಲು ಬಿಜೆಪಿ ದೇಶಾದ್ಯಂತ 'ವೈವಿಧ್ಯತೆಯಲ್ಲಿ ಏಕತೆ', ರಕ್ತದಾನ ಅಭಿಯಾನ, ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಿದೆ.
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಜನ್ಮದಿನ. ಈ ದಿನದಂದು ದೇಶಾದ್ಯಂತ ಬಿಜೆಪಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಇಂದು ‘ರಕ್ತದಾನ ಅಮೃತ ಮಹೋತ್ಸವ’ ಆರಂಭವಾಗಲಿದೆ. ಹಾಗೇ, ಪ್ರಧಾನಿ ಮೋದಿಯವರ ಉಡುಗೊರೆಗಳ ಇ-ಹರಾಜು ಇಂದಿನಿಂದ ಆರಂಭವಾಗಲಿದೆ. ಪಿಎಂ ಮೋದಿ ಅವರಿಗೆ ನೀಡಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಇಂದು (ಸೆಪ್ಟೆಂಬರ್ 17) ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದಂದು ಪ್ರಾರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬವನ್ನು ಆಚರಿಸಲು ಬಿಜೆಪಿ ದೇಶಾದ್ಯಂತ ‘ವೈವಿಧ್ಯತೆಯಲ್ಲಿ ಏಕತೆ’, ರಕ್ತದಾನ ಅಭಿಯಾನ, ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಿದೆ. ಬಿಜೆಪಿಯಿಂದ ‘ಸೇವಾ ಅಭಿಯಾನ’ ಇಂದು ಪ್ರಾರಂಭವಾಗಲಿದ್ದು, ಅಕ್ಟೋಬರ್ 2ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: Narendra Modi Birthday: ಮೋದಿ ಹುಟ್ಟುಹಬ್ಬದಂದು ಜನಿಸುವ ಶಿಶುಗಳಿಗೆ ತಮಿಳುನಾಡು ಬಿಜೆಪಿಯಿಂದ ಚಿನ್ನದ ಉಂಗುರ ಉಡುಗೊರೆ
ಹುಟ್ಟಿದ ಹಬ್ಬದ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ಸಾಲು ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪ್ರಧಾನಿ ಮೋದಿ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (ಎನ್‌ಎಲ್‌ಪಿ) ಅನ್ನು ಬಿಡುಗಡೆ ಮಾಡಲಿದ್ದಾರೆ. ಈ NLP ಇಡೀ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಗಾಗಿ ಒಂದು ವ್ಯಾಪಕವಾದ ಅಂತರ್ಶಿಸ್ತೀಯ ಚೌಕಟ್ಟನ್ನು ಹಾಕುವ ಮೂಲಕ ಹೆಚ್ಚಿನ ವೆಚ್ಚ ಮತ್ತು ಅಸಮರ್ಥತೆಯ ಸಮಸ್ಯೆಗಳನ್ನು ಪರಿಹರಿಸಲು ಸಮಗ್ರ ಪ್ರಯತ್ನವಾಗಿದೆ. ಐಟಿಐ ವಿದ್ಯಾರ್ಥಿಗಳ ಮೊಟ್ಟಮೊದಲ ‘ದೀಕ್ಷಾಂತ್ ಸಮಾರೋಹ್’ ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 40 ಲಕ್ಷ ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದೆ.
#WATCH | The special chartered cargo flight, bringing 8 cheetahs from Namibia, lands at the Indian Air Force Station in Gwalior, Madhya Pradesh.
Prime Minister Narendra Modi will release the cheetahs into Kuno National park in MP today, on his birthday. pic.twitter.com/J5Yxz9Pda9
— ANI (@ANI) September 17, 2022
ಇಂದು ತಮ್ಮ 72ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾದ 8 ಚಿರತೆಗಳನ್ನು ಬಿಡಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ನಮೀಬಿಯಾದಿಂದ ವಿಮಾನದಲ್ಲಿ ಭಾರತಕ್ಕೆ 8 ಚಿರತೆಗಳು ಆಗಮಿಸಿವೆ. ಮಧ್ಯಪ್ರದೇಶದ ಗ್ವಾಲಿಯರ್ ಏರ್ಪೋರ್ಟ್ಗೆ ವಿಮಾನ ಬಂದಿಳಿದಿದೆ. 70 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಈ ಚಿರತೆಗಳನ್ನು ಇಂದು ಬೆಳಗ್ಗೆ 10.45ಕ್ಕೆ ಕುನೋ ಉದ್ಯಾನವನಕ್ಕೆ ಮೋದಿ ಬಿಡುಗಡೆ ಮಾಡಲಿದ್ದಾರೆ. ಇದು ವನ್ಯಜೀವಿಗಳನ್ನು ಸಂರಕ್ಷಿಸುವ ಪ್ರಯತ್ನಕ್ಕೆ ಇಂದು ಹೊಸ ಶಕ್ತಿ ನೀಡಲಿವೆ.
Puri, Odisha | Sand artist Sudarsan Pattnaik made a sand sculpture wishing PM Modi on his birthday pic.twitter.com/yryzCct3JZ
— ANI (@ANI) September 16, 2022
ಇದಾದ ಬಳಿಕ ಸಂಸದರ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ತಮಿಳುನಾಡು ಬಿಜೆಪಿ ವತಿಯಿಂದ ಇಂದು ಜನಿಸುವ ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಲು ಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳು ಮತ್ತು ಬೇಬಿ ಕಿಟ್‌ಗಳನ್ನು ಉಡುಗೊರೆಯಾಗಿ ನೀಡುವುದು ಸೇರಿದಂತೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.