Narendra Modi Birthday: ಮೋದಿ ಹುಟ್ಟುಹಬ್ಬದಂದು ಜನಿಸುವ ಶಿಶುಗಳಿಗೆ ತಮಿಳುನಾಡು ಬಿಜೆಪಿಯಿಂದ ಚಿನ್ನದ ಉಂಗುರ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ದೇಶಾದ್ಯಂತ ಹಲವು ಕಾರ್ಯಕ್ರಮಗಳು ನಡೆಯಲಿವೆ. ಕೆಲವೆಡೆ ಸಿಹಿ ಹಂಚುವುದು, ಇನ್ನೂ ಕೆಲವಡೆ ರಕ್ತದಾನ, ಬಟ್ಟೆ ಹಂಚುವ ಕಾರ್ಯಕ್ರಮ ನಡೆಯಲಿದೆ.

Narendra Modi Birthday: ಮೋದಿ ಹುಟ್ಟುಹಬ್ಬದಂದು ಜನಿಸುವ ಶಿಶುಗಳಿಗೆ ತಮಿಳುನಾಡು ಬಿಜೆಪಿಯಿಂದ ಚಿನ್ನದ ಉಂಗುರ ಉಡುಗೊರೆ
Narendra Modi
TV9kannada Web Team

| Edited By: Nayana Rajeev

Sep 16, 2022 | 2:46 PM

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ದೇಶಾದ್ಯಂತ ಹಲವು ಕಾರ್ಯಕ್ರಮಗಳು ನಡೆಯಲಿವೆ. ಕೆಲವೆಡೆ ಸಿಹಿ ಹಂಚುವುದು, ಇನ್ನೂ ಕೆಲವಡೆ ರಕ್ತದಾನ, ಬಟ್ಟೆ ಹಂಚುವ ಕಾರ್ಯಕ್ರಮ ನಡೆಯಲಿದೆ.

ಆದರೆ ತಮಿಳುನಾಡು ಬಿಜೆಪಿಯು ಬೇರೆಯದ್ದೇ ರೀತಿಯಲ್ಲಿ ಕೆಲಸ ಮಾಡಲು ಮುಂದಾಗಿದೆ. ಇಲ್ಲಿ ಸೆಪ್ಟೆಂಬರ್ 17 ರಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ನೀಡಲಿದೆ. ಈ ದಿನ ಜನಿಸಿದ ಶಿಶುಗಳಿಗೆ ಸುಮಾರು 2 ಗ್ರಾಂನ ಉಂಗುರವನ್ನು ನೀಡಲಾಗುತ್ತದೆ.

“ನಾವು ಚೆನ್ನೈನ ಸರ್ಕಾರಿ ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದ್ದೇವೆ, ಅಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನದಂದು ಜನಿಸಿದ ಎಲ್ಲಾ ಮಕ್ಕಳಿಗೆ ಚಿನ್ನದ ಉಂಗುರಗಳನ್ನು ನೀಡಲಾಗುತ್ತದೆ ಎಂದು ಮೀನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಹೇಳಿದ್ದಾರೆ.

ಪ್ರತಿ ಉಂಗುರವು ಸುಮಾರು 2 ಗ್ರಾಂ ಚಿನ್ನವನ್ನು ಹೊಂದಿರುತ್ತದೆ, ಇದರ ಬೆಲೆ ಸುಮಾರು 5000 ರೂ,  ಬಿಜೆಪಿಯ ಸ್ಥಳೀಯ ಘಟಕದ ಅಂದಾಜಿನ ಪ್ರಕಾರ ಸೆಪ್ಟೆಂಬರ್ 17 ರಂದು ಈ ಆಸ್ಪತ್ರೆಯಲ್ಲಿ 10-15 ಶಿಶುಗಳು ಜನಿಸುತ್ತವೆ.

ದೆಹಲಿಯ ರೆಸ್ಟೋರೆಂಟ್​ನಲ್ಲಿ ವಿಶೇಷ ಥಾಲಿ ದೆಹಲಿಯ ರೆಸ್ಟೋರೆಂಟ್ ಮಾಲೀಕರು ಕೂಡ ದಿನವನ್ನು ವಿಶೇಷವಾಗಿಸಲು ವಿಶೇಷವಾದ ಥಾಲಿ ಅನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.0 ರೆಸ್ಟೋರೆಂಟ್ 56 ಆಹಾರ ಪದಾರ್ಥಗಳನ್ನು ಒಳಗೊಂಡಿರುವ ವಿಶೇಷ ಥಾಲಿಯನ್ನು ನೀಡುತ್ತಿದೆ. ಗ್ರಾಹಕರಿಗೆ ವೆಜ್ ಮತ್ತು ನಾನ್ ವೆಜ್ ಎರಡರ ಆಯ್ಕೆ ಇರುತ್ತದೆ.

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ARDOR 2.0 ರೆಸ್ಟೋರೆಂಟ್ ಈ ವಿಶಿಷ್ಟ ಆಲೋಚನೆಯೊಂದಿಗೆ ಬಂದಿದೆ. ರೆಸ್ಟೋರೆಂಟ್ ಮಾಲೀಕ ಸುಮಿತ್ ಕಲಾರ ಮಾತನಾಡಿ, “ನನಗೆ ಪ್ರಧಾನಿ ಮೋದಿ ಅವರ ಬಗ್ಗೆ ಅಪಾರ ಗೌರವವಿದೆ. ಅವರು ನಮ್ಮ ದೇಶದ ಹೆಮ್ಮೆ. ಅವರ ಜನ್ಮದಿನದಂದು ನಾವು ವಿಶಿಷ್ಟವಾದದ್ದನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಈ ಥಾಲಿಯನ್ನು ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ. ನಾವು ಅದಕ್ಕೆ ಹೆಸರಿಸಿದ್ದೇವೆ.

ಅವರಿಗೆ ನೀಡಬೇಕೆಂದು ನಾವು ಬಯಸುತ್ತೇವೆ ಆದರೆ ಪ್ರಧಾನಿಯವರು ಬರಲು ಸಾಧ್ಯವಿಲ್ಲದ ಕಾರಣ, ಜನರಿಗೆ ಉಚಿತವಾಗಿ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada