African Cheetahs ಪ್ರಧಾನಿ ಮೋದಿ ಜನ್ಮದಿನದಂದು ಭಾರತಕ್ಕೆ ತರಲಿರುವ ಆಫ್ರಿಕನ್ ಚಿರತೆಗಳ ಫಸ್ಟ್​​ ಲುಕ್​​; ವಿಡಿಯೊ ನೋಡಿ

ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಚೀತಾ ಪ್ರಾಜೆಕ್ಟ್ ಮುಖ್ಯಸ್ಥ ಎಸ್‌ಪಿ ಯಾದವ್, ನಮೀಬಿಯಾದಿಂದ ಬರುವ ಚಿರತೆಗಳು ಈಗ ಗ್ವಾಲಿಯರ್‌ಗೆ ಬಂದಿಳಿಯಲಿವೆ.

African Cheetahs ಪ್ರಧಾನಿ ಮೋದಿ ಜನ್ಮದಿನದಂದು ಭಾರತಕ್ಕೆ ತರಲಿರುವ ಆಫ್ರಿಕನ್ ಚಿರತೆಗಳ ಫಸ್ಟ್​​ ಲುಕ್​​; ವಿಡಿಯೊ ನೋಡಿ
ಆಫ್ರಿಕಾದ ಚಿರತೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 16, 2022 | 1:56 PM

ಮಧ್ಯಪ್ರದೇಶದ (Madhya Pradesh) ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (KUNO National Park) ಸೆಪ್ಟೆಂಬರ್ 17 ರಂದು ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ತರಲಾಗುವ ಚಿರತೆಗಳ (Cheetahs) ಫಸ್ಟ್ ಲುಕ್ ಅನ್ನು ಶುಕ್ರವಾರ ಎಎನ್ಐ  ಸುದ್ದಿಸಂಸ್ಥೆ ಹಂಚಿಕೊಂಡಿದೆ. ರಾಷ್ಟ್ರೀಯ ಉದ್ಯಾನವನವೆಂದು ನಂಬಲಾದ ಮರದ ಕೆಳಗೆ ಎರಡು ಚಿರತೆಗಳು ವಿಶ್ರಾಂತಿ ಪಡೆಯುತ್ತಿರುವುದನ್ನು ಒಂದು ನಿಮಿಷದ ವಿಡಿಯೊ ತೋರಿಸುತ್ತದೆ. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಶುಕ್ರವಾರ 16 ಚಿರತೆಗಳು ಭಾರತಕ್ಕೆ ಆಗಮಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಪ್ರದೇಶದ ಶಿಯೋಪುರದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಲಿದ್ದು, ಸುಮಾರು 70 ವರ್ಷಗಳ ನಂತರ ದೇಶದಲ್ಲಿ ಚಿರತೆಗಳನ್ನು ಮರು ಪರಿಚಯಿಸಲು ಸಿದ್ಧತೆ ನಡೆಸಲಾಗುತ್ತಿದೆ. ಮೋದಿ ಜನ್ಮದಿನದ ಸಂದರ್ಭದಲ್ಲಿ, ದೇಶದ ವನ್ಯಜೀವಿ ಮತ್ತು ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಪ್ರಯತ್ನಗಳ ಭಾಗವಾಗಿ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಲಿದ್ದಾರೆ. ಚಿರತೆಯನ್ನು ವಿಶೇಷ ಕಾರ್ಗೋ ವಿಮಾನ ಬೋಯಿಂಗ್ -747 ನಲ್ಲಿ ತರಲಾಗುತ್ತಿದ್ದು ಇದು ಗ್ವಾಲಿಯರ್‌ನಲ್ಲಿ ಇಳಿಯಲಿದೆ. ನಂತರ ಅವುಗಳನ್ನು ಹೆಲಿಕಾಪ್ಟರ್‌ನಲ್ಲಿ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗುತ್ತದೆ.

ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಚೀತಾ ಪ್ರಾಜೆಕ್ಟ್ ಮುಖ್ಯಸ್ಥ ಎಸ್‌ಪಿ ಯಾದವ್, ನಮೀಬಿಯಾದಿಂದ ಬರುವ ಚಿರತೆಗಳು ಈಗ ಗ್ವಾಲಿಯರ್‌ಗೆ ಬಂದಿಳಿಯಲಿವೆ. ಅವುಗಳನ್ನು ಸೆಪ್ಟೆಂಬರ್ 17 ರಂದು ಜೈಪುರದಲ್ಲಿ ಇಳಿಸುವುದಾಗಿ ಮೊದಲು ನಿರ್ಧರಿಸಲಾಗಿತ್ತು. ಗ್ವಾಲಿಯರ್ ಗೆ ಬಂದಿಳಿಯಲಿರುವ ಚಿರತೆಗಳನ್ನು ಹೆಲಿಕಾಪ್ಟರ್‌ನಿಂದ ಕುನೊ ರಾಷ್ಟ್ರೀಯ ಉದ್ಯಾನವನ ಶೆಯೋಪುರಕ್ಕೆ ತರಲಾಗುತ್ತದೆ.

ಭಾರತೀಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ-ಪ್ರಾಜೆಕ್ಟ್ ಚೀತಾ- ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಮಾರ್ಗಸೂಚಿಗಳ ಪ್ರಕಾರ ವನ್ಯಜೀವಿ ಪ್ರಭೇದಗಳನ್ನು ವಿಶೇಷವಾಗಿ ಚೀತಾವನ್ನು ಮರುಪರಿಚಯಿಸಲಾಗುತ್ತಿದೆ.

ಭಾರತವು ವನ್ಯಜೀವಿ ಸಂರಕ್ಷಣೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅತ್ಯಂತ ಯಶಸ್ವಿ ವನ್ಯಜೀವಿ ಸಂರಕ್ಷಣಾ ಉದ್ಯಮಗಳಲ್ಲಿ ಒಂದಾದ ‘ಪ್ರಾಜೆಕ್ಟ್ ಟೈಗರ್’ 1972 ರಲ್ಲಿ ಪ್ರಾರಂಭವಾಯಿತು, ಇದು ಹುಲಿಗಳ ಸಂರಕ್ಷಣೆಗೆ ಮಾತ್ರವಲ್ಲದೆ ಇಡೀ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡಿದೆ.

Published On - 1:35 pm, Fri, 16 September 22