ವರ್ಷಕ್ಕೊಮ್ಮೆ ಮಾತ್ರ ಯಾಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಉತ್ಸವ (Hasanamba Utsav 2025) ಈ ವರ್ಷ ಅಕ್ಟೋಬರ್ 9 ರಿಂದ 23 ರವರೆಗೆ ನಡೆಯಲಿದೆ. ಇನ್ನು ಹಾಸನಾಂಬೆ ವರ್ಷಕ್ಕೊಮ್ಮೆ ಏಕೆ ಭಕ್ತರಿಗೆ ದರ್ಶನ ನೀಡುತ್ತಾಳೆ? ಇದರ ಹಿಂದಿನ ಮಹತ್ವ ಏನು? ಎನ್ನುವುದು ಹಲವರಲ್ಲಿ ಭಾರೀ ಕುತೂಹಲ ಇದ್ದು, ಈ ಬಗ್ಗೆ ಪ್ರಧಾನ ಅರ್ಚಕರು ತಾಯಿಯ ಮಹಾತ್ಮೆ ವಿವರಿಸಿದ್ದಾರೆ.
ಹಾಸನ, (ಅಕ್ಟೋಬರ್ 08): ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಉತ್ಸವ (Hasanamba Utsav 2025) ಈ ವರ್ಷ ಅಕ್ಟೋಬರ್ 9 ರಿಂದ 23 ರವರೆಗೆ ನಡೆಯಲಿದೆ. ಹಾಸನದ ಪ್ರಸಿದ್ಧ ‘ಹಾಸನಾಂಬ ಜಾತ್ರಾ ಮಹೋತ್ಸವದ ಈ ಬಾರಿಯ ಆಚರಣೆಗೆ ಜಿಲ್ಲಾಡಳಿತದಿಂದ ಭಾರೀ ಷರತ್ತು ವಿಧಿಸಲಾಗಿದೆ. ಎಲ್ಲ ಭಕ್ತರೂ ಸಾಂಪ್ರದಾಯಿಕ ಉಡುಗೆಗಳನ್ನೇ ಧರಿಸಿಕೊಂಡು ಬರಬೇಕು. ಜೊತೆಗೆ, ವಿಐಪಿ ಟಿಕೆಟ್, ಹಣಕ್ಕೆ ಖರೀದಿಸಿದ ವಿಶೇಷ ದರ್ಶನ ಟಿಕೆಟ್ ಹಾಗೂ ಧರ್ಮದರ್ಶನ ಮಾಡುವ ಭಕ್ತರಿಗೆ ಪ್ರತ್ಯೇಕ ಸಮಯ ಮತ್ತು ಸರತಿ ಸಾಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ. ಇನ್ನು ಹಾಸನಾಂಬೆ ವರ್ಷಕ್ಕೊಮ್ಮೆ ಏಕೆ ಭಕ್ತರಿಗೆ ದರ್ಶನ ನೀಡುತ್ತಾಳೆ? ಇದರ ಹಿಂದಿನ ಮಹತ್ವ ಏನು? ಎನ್ನುವುದು ಹಲವರಲ್ಲಿ ಭಾರೀ ಕುತೂಹಲ ಇದ್ದು, ಈ ಬಗ್ಗೆ ಪ್ರಧಾನ ಅರ್ಚಕರು ತಾಯಿಯ ಮಹಾತ್ಮೆ ವಿವರಿಸಿದ್ದಾರೆ.

