ಬಿಗ್ ಬಾಸ್ ವಿವಾದ: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ಕೆಲವು ನಿಯಮ ಪಾಲಿಸದ ಕಾರಣ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಹಳೇ ಘಟನೆಯನ್ನು ಕೆದಕಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಮನೆಯನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಹಳೇ ಘಟನೆಯನ್ನು ಕೆದಕಿದ್ದಾರೆ. ‘ನಾನು ಭಾಗವಹಿಸಿದ್ದ ಸೀಸನ್ 9ರಲ್ಲಿ ರೂಪೇಶ್ ರಾಜಣ್ಣ ಅವರಿಗೆ ಹೇಳಿದ ಮಾತಿಗೆ ನನ್ನ ವಿರುದ್ಧ ಹೊರಗಡೆ ಧರಣಿ ಮಾಡಿದರು. ಸಂಬರಗಿಯನ್ನು ಆಚೆ ಹಾಕಿ ಅಥವಾ ನಮಗೆ 15 ಲಕ್ಷ ರೂಪಾಯಿ ಕೊಡಿ ಅಂತ ಕನ್ನಡಪರ ಡೋಂಗಿ ಹೋರಾಟಗಾರರು ಡಿಮ್ಯಾಂಡ್ ಮಾಡಿದ್ದರು. ದಾಖಲೆ ಕೊಡಿ ಎನ್ನುತ್ತಾರೆ. ಎಲ್ಲಿಂದ ಕೊಡುವುದು? ಲಂಚ ಕೊಟ್ಟಿದ್ದಕ್ಕೆ ದಾಖಲೆ ಕೊಡೋಕೆ ಆಗುತ್ತಾ’ ಎಂದು ಪ್ರಶಾಂತ್ ಸಂಬರಗಿ (Prashanth Sambargi) ಅವರು ಪ್ರಶ್ನಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
