AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮ್ ಗಂಭೀರ್ ಮನೆಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಔತಣಕೂಟ

ಗೌತಮ್ ಗಂಭೀರ್ ಮನೆಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಔತಣಕೂಟ

ಪೃಥ್ವಿಶಂಕರ
|

Updated on:Oct 08, 2025 | 10:41 PM

Share

Team India: ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಡೆಯಲಿದೆ. ಇದರ ಅಂಗವಾಗಿ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ತಮ್ಮ ನಿವಾಸಕ್ಕೆ ಭೋಜನಕ್ಕೆ ಆಹ್ವಾನಿಸಿದ್ದರು. ಬುಧವಾರ ಸಂಜೆ ಶುಭ್​ಮನ್ ಗಿಲ್ ನೇತೃತ್ವದ ಭಾರತೀಯ ತಂಡ ಗಂಭೀರ್ ಅವರ ಮನೆಯಲ್ಲಿ ಭೋಜನ ಸವಿಯಿತು.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವು ಅಕ್ಟೋಬರ್ 10 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ, ಭಾರತೀಯ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ಆಟಗಾರರು ಮತ್ತು ತಂಡದ ಸಹಾಯಕ ಸಿಬ್ಬಂದಿಯನ್ನು ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ ಬುಧವಾರ ಸಂಜೆ ಶುಭ್​ಮನ್ ಗಿಲ್ ನೇತೃತ್ವದ ಭಾರತೀಯ ತಂಡವು ರಾಜೇಂದ್ರ ನಗರದಲ್ಲಿರುವ ಗಂಭೀರ್ ಅವರ ನಿವಾಸಕ್ಕೆ ಆಗಮಿಸಿತು.

Published on: Oct 08, 2025 10:35 PM