AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RSS Dasara Programme: ದಸರಾ ಕಾರ್ಯಕ್ರಮಕ್ಕೆ ಪರ್ವತಾರೋಹಿ ಸಂತೋಷ್ ಯಾದವ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ RSS

ಆರ್‌ಎಸ್‌ಎಸ್‌ನ ದಸರಾ ಕಾರ್ಯಕ್ರಮಕ್ಕೆ ಮೌಂಟ್ ಎವರೆಸ್ಟ್ ಅನ್ನು ಎರಡು ಬಾರಿ ಏರಿದ ಮೊದಲ ಮಹಿಳಾ ಆರೋಹಿ ಸಂತೋಷ್ ಯಾದವ್ ಅತಿಥಿಯಾಗಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದಸರಾ ಆಚರಣೆಗೆ ಖ್ಯಾತ ಪರ್ವತಾರೋಹಿ ಸಂತೋಷ್ ಯಾದವ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ.

RSS Dasara Programme: ದಸರಾ ಕಾರ್ಯಕ್ರಮಕ್ಕೆ ಪರ್ವತಾರೋಹಿ ಸಂತೋಷ್ ಯಾದವ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ RSS
Mohan Bhagwat
Follow us
TV9 Web
| Updated By: ನಯನಾ ರಾಜೀವ್

Updated on: Sep 16, 2022 | 1:11 PM

ಆರ್‌ಎಸ್‌ಎಸ್‌ನ ದಸರಾ ಕಾರ್ಯಕ್ರಮಕ್ಕೆ ಮೌಂಟ್ ಎವರೆಸ್ಟ್ ಅನ್ನು ಎರಡು ಬಾರಿ ಏರಿದ ಮೊದಲ ಮಹಿಳಾ ಆರೋಹಿ ಸಂತೋಷ್ ಯಾದವ್ ಅತಿಥಿಯಾಗಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದಸರಾ ಆಚರಣೆಗೆ ಖ್ಯಾತ ಪರ್ವತಾರೋಹಿ ಸಂತೋಷ್ ಯಾದವ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ.

ವಾಸ್ತವವಾಗಿ, ವಿಜಯದಶಮಿಯ ಸಂದರ್ಭದಲ್ಲಿ ನಾಗ್ಪುರದಲ್ಲಿ ವಾರ್ಷಿಕ ಉತ್ಸವವನ್ನು ಆಯೋಜಿಸಲಾಗಿದೆ. ಈ ವಿಷಯವನ್ನು ಆರ್‌ಎಸ್‌ಎಸ್ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ವಿಜಯದಶಮಿ ಉತ್ಸವವನ್ನು ಅಕ್ಟೋಬರ್ 5, 2022 ರಂದು ನಾಗ್ಪುರದಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ ಪರ್ವತಾರೋಹಿ ಪದ್ಮಶ್ರೀ ಸಂತೋಷ್ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಡಾ.ಮೋಹನ್ ಭಾಗವತ್ ಭಾಷಣ ಮಾಡಲಿದ್ದಾರೆ ಎಂದು ಆರೆಸ್ಸೆಸ್ ತಿಳಿಸಿದೆ. ಮೌಂಟ್ ಎವರೆಸ್ಟ್ ಅನ್ನು ಎರಡು ಬಾರಿ ಏರಿದ ಮೊದಲ ಮಹಿಳಾ ಆರೋಹಿ ಸಂತೋಷ್ ಯಾದವ್.

ಇದಕ್ಕೂ ಮುನ್ನ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಜಯದಶಮಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಂತೋಷ್ ಯಾದವ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿರುವ ಕುರಿತು ಟ್ವೀಟ್ ಮಾಡುವ ಮೂಲಕ ಆರ್ ಎಸ್ ಎಸ್ ಮಾಹಿತಿ ನೀಡಿದೆ. ಪದ್ಮಶ್ರೀ ಸಂತೋಷ್ ಯಾದವ್ ಅವರು ಅಕ್ಟೋಬರ್ 5 ರಂದು ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ದಸರಾ ಭಾಷಣ ಮಾಡಲಿದ್ದಾರೆ ಎಂದು ಆರ್‌ಎಸ್‌ಎಸ್ ಟ್ವೀಟ್‌ನಲ್ಲಿ ತಿಳಿಸಿದೆ. ಬಹುನಿರೀಕ್ಷಿತ ಕಾರ್ಯಕ್ರಮಕ್ಕೆ ಆರ್‌ಎಸ್‌ಎಸ್ ಸಾಂಪ್ರದಾಯಿಕವಾಗಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದೆ ಎಂಬುದು ಗಮನಾರ್ಹ. ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇತ್ತೀಚಿನ ವರ್ಷಗಳಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ.

ಸಂತೋಷ್ ಯಾದವ್ ಎರಡು ಬಾರಿ ಮೌಂಟ್ ಎವರೆಸ್ಟ್ ಏರಿದ್ದಾರೆ ಹರಿಯಾಣ ಮೂಲದ 54 ವರ್ಷದ ಸಂತೋಷ್ ಯಾದವ್ ಅವರು ಮೌಂಟ್ ಎವರೆಸ್ಟ್ ಅನ್ನು ಎರಡು ಬಾರಿ (ಮೇ 1992 ಮತ್ತು ಮೇ 1993) ಏರಿದ ವಿಶ್ವದ ಮೊದಲ ಮಹಿಳೆ ಮತ್ತು ಕಾಂಗ್‌ಶುಂಗ್ ಫೇಸ್‌ನಿಂದ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ ಮೊದಲ ಮಹಿಳೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು