ವಿಶ್ವವಿಖ್ಯಾತ ನೇಪಾಳದ ಪಶುಪತಿನಾಥ ದೇಗುಲದಲ್ಲಿ 10 ಕೆಜಿ ಚಿನ್ನ ಕಳವು, ತನಿಖೆಗಾಗಿ ದೇವಸ್ಥಾನ ತಾತ್ಕಾಲಿಕ ಬಂದ್​​

|

Updated on: Jun 26, 2023 | 6:58 AM

ಕಳೆದ ವರ್ಷ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ಪಶುಪತಿನಾಥ ದೇಗುಲದ ಗರ್ಭಗುಡಿಯ ಶಿವಲಿಂಗದ ಸುತ್ತ 103 ಕೆಜಿ ಚಿನ್ನದ ಜಲಹರಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಈ 100 ಕೆಜಿ ಚಿನ್ನದ ಪೈಕಿ 10 ಕೆಜಿ ಚಿನ್ನ ನಾಪತ್ತೆಯಾಗಿದೆ.

ವಿಶ್ವವಿಖ್ಯಾತ ನೇಪಾಳದ ಪಶುಪತಿನಾಥ ದೇಗುಲದಲ್ಲಿ 10 ಕೆಜಿ ಚಿನ್ನ ಕಳವು, ತನಿಖೆಗಾಗಿ ದೇವಸ್ಥಾನ ತಾತ್ಕಾಲಿಕ ಬಂದ್​​
ನೇಪಾಳದ ಪಶುಪತಿನಾಥ ದೇಗುಲ
Follow us on

ಕಠ್ಮಂಡು: ಐತಿಹಾಸಿಕ ವಿಶ್ವವಿಖ್ಯಾತ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ(Nepal Pashupatinath Temple) 10 ಕೆಜಿ ಚಿನ್ನ ಕಳವಾಗಿದೆ(Gold Theft). ಶಿವಲಿಂಗದ ಮೇಲಿನ 100 ಕೆ.ಜಿ. ತೂಕದ ಚಿನ್ನದ ಆಭರಣದಲ್ಲಿ 10 ಕೆ.ಜಿ. ಚಿನ್ನ ನಾಪತ್ತೆಯಾಗಿದೆ. ಈ ಸಂಬಂಧ ನೇಪಾಳದ ತನಿಖಾ ಸಂಸ್ಥೆ ತನಿಖೆ ಆರಂಭಿಸಿದ್ದು ದೇವಸ್ಥಾನ ತಾತ್ಕಾಲಿಕ ಬಂದ್​​ ಆಗಿರಲಿದೆ.

ಕಳೆದ ವರ್ಷ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ದೇಗುಲದ ಗರ್ಭಗುಡಿಯ ಶಿವಲಿಂಗದ ಸುತ್ತ 103 ಕೆಜಿ ಚಿನ್ನದ ಜಲಹರಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಈ 100 ಕೆಜಿ ಚಿನ್ನದ ಪೈಕಿ 10 ಕೆಜಿ ಚಿನ್ನ ನಾಪತ್ತೆಯಾಗಿದೆ. ಹೀಗಾಗಿ ನೇಪಾಳದ ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ದೇವಾಲಯವನ್ನು ತನಿಖೆಗಾಗಿ ವಶಕ್ಕೆ ಪಡೆದಿದೆ. ದೇವರ ಚಿನ್ನದ ಆಭರಣವು ಕಾಣೆಯಾದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದ ಬಳಿಕ ಸರ್ಕಾರವು ತನಿಖೆಗೆ ನಿರ್ದೇಶನ ನೀಡಿದೆ. ಇನ್ನು ದೇವಸ್ಥಾನದ ಆವರಣದಲ್ಲಿ ನೇಪಾಳ ಸೇನೆಯ ಯೋಧರು, ಹತ್ತಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತನಿಖಾ ಪ್ರಕ್ರಿಯೆಯು ಪ್ರಗತಿಯಲ್ಲಿದೆ.

ಇದನ್ನೂ ಓದಿ: Gold Silver Price on 26 June: ಬೆಳ್ಳಿ ಬೆಲೆ ಇಳಿಕೆ ಮಧ್ಯೆ ಚಿನ್ನದ ಬೆಲೆ ಸ್ವಲ್ಪ ಹೆಚ್ಚಳ; ಇಲ್ಲಿದೆ ಚಿನ್ನ ಮತ್ತು ಬೆಳ್ಳಿ ರೇಟು ವಿವರ

ನೇಪಾಳದ ಕಾಠ್ಮಂಡುವಿನ ಪೂರ್ವ ಭಾಗದ ಭಾಗವತಿ ನದಿಯ ದಡದಲ್ಲಿರುವ ಪಶುಪತಿನಾಥ ದೇವಾಲಯವು ವಿಶ್ವದ ಅತ್ಯಂತ ಮಹತ್ವ ಹಾಗೂ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಒಳಗೆ ಪ್ರವೇಶಿಸಲು ಕೇವಲ ಹಿಂದೂಗಳಿಗೆ ಮಾತ್ರ ಅವಕಾಶವಿತ್ತಂತೆ. ಉಳಿದವರು ದೇವಸ್ಥಾನದ ಇನ್ನೊಂದು ಭಾಗದಲ್ಲಿ ನಿಂತು ನೋಡಬಹುದಿತ್ತು. ಈ ದೇವಸ್ಥಾನವು ಅತ್ಯಂತ ಹಳೆಯ ದೇವಸ್ಥಾನವಾಗಿದ್ದು ಇದು ಯಾವಾಗ ನಿರ್ಮಾಣವಾಯಿತು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದ್ರೆ ಕೆಲವು ಕುರುಹುಗಳ ಅಂದಾಜಿನ ಆಧಾರದ ಮೇಲೆ 400 ವರ್ಷಗಳಷ್ಟು ಹಳೆಯ ದೇವಸ್ಥಾನ ಎಂದು ಹೇಳಲಾಗುತ್ತೆ. ಈ ದೇವಸ್ಥಾನಕ್ಕೆ ಶಿವರಾತ್ರಿ ವೇಳೆ ಲಕ್ಷಾಂತರ ಶಿವ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ