ಪ್ರಿಯಕರನನ್ನು ಮರಕ್ಕೆ ಕಟ್ಟಿ ಥಳಿಸಿ ಕೊಂದ ಗೆಳತಿಯ ಕುಟುಂಬಸ್ಥರು, ನ್ಯಾಯಾಲಯ ನೀಡಿತು ಸಂಚಲನದ ತೀರ್ಪು!

ಮಗಳ ಸಾವಿಗೆ ನೀನೇ ಕಾರಣ ಎಂದು ಜಾಸ್ಮಿನ್ ಕುಟುಂಬಸ್ಥರು ಶ್ರೀಸಾಯಿ ಹಾಗೂ ಪವನಕುಮಾರ್ ಎಂಬಾತನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಅವರಿಬ್ಬರ ಕಣ್ಣಿಗೆ ಮೆಣಸಿನ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದರು.

ಪ್ರಿಯಕರನನ್ನು ಮರಕ್ಕೆ ಕಟ್ಟಿ ಥಳಿಸಿ ಕೊಂದ ಗೆಳತಿಯ ಕುಟುಂಬಸ್ಥರು, ನ್ಯಾಯಾಲಯ ನೀಡಿತು ಸಂಚಲನದ ತೀರ್ಪು!
ಪ್ರಿಯಕರನ ಕೊಂದ ಗೆಳತಿಯ ಕುಟುಂಬಸ್ಥರು, ನ್ಯಾಯಾಲಯ ಸಂಚಲನದ ತೀರ್ಪು!
Follow us
ಸಾಧು ಶ್ರೀನಾಥ್​
|

Updated on: Jun 22, 2023 | 12:23 PM

ಗುಂಟೂರು ಜಿಲ್ಲೆಯಲ್ಲಿ 2016ರಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ವೇಮುಲ ಶ್ರೀಸಾಯಿ ಷಣ್ಮುಖ ಎಂಬ ಯುವಕನನ್ನು ನಿಜಾಂಪಟ್ನಂ ಮಂಡಲದ ಮೊಹಮ್ಮದೀಯ ಪಾಲೆಂನಲ್ಲಿ ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಂದಿದ್ದರು. ಏಳು ವರ್ಷಗಳ ನಂತರ, ಕೋರ್ಟ್ (Tenali court)​​ ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ತೆನಾಲಿ ನ್ಯಾಯಾಲಯ 13 ಮಂದಿಗೆ ಜೀವಾವಧಿ ಶಿಕ್ಷೆ (life imprisonment) ವಿಧಿಸಿ ಸಂಚಲನ ಮೂಡಿಸಿದೆ. ಷಣ್ಮುಖನನ್ನು ಕೊಂದಿದ್ದು ಏಕೆ? ಎಂದರೆ ಪ್ರೀತಿಸಿದ್ದು (love relationship) ಅವನ ಮಾಡಿದ ತಪ್ಪಾಗಿತ್ತು. ಹೌದು.. ಶ್ರೀಸಾಯಿ ಮಾಡಿದ ಕೆಟ್ಟ ತಪ್ಪು ಎಂದರೆ ಜಾಸ್ಮಿನ್ ಳನ್ನು ಪ್ರೀತಿಸಿದ್ದು.

ಜುಲೈ 17, 2016 ರಂದು ಜಾಸ್ಮಿನ್ ಕರೆ ಮಾಡಿದಳು ಎಂದು… ಅವನು ಅವಳ ಮನೆಗೆ ಹೋಗಿದ್ದಾನೆ. ಸ್ವಲ್ಪ ಹೊತ್ತು ಜಾಸ್ಮಿನ್​ ಜೊತೆ ಮಾತಾಡಿ ವಾಪಸಾಗಿದ್ದ. ಅದನ್ನು ತಿಳಿದ ಕುಟುಂಬಸ್ಥರು ಜಾಸ್ಮಿನ್ ಳನ್ನು ನಿಂದಿಸಿದ್ದಾರೆ. ಇದರಿಂದ ಮನನೊಂದ ಆಕೆ.. ಕೋಪದಲ್ಲಿ ನೇಣು ಹಾಕಿಕೊಂಡಿದ್ದಾಳೆ. ಅದಕ್ಕೂ ಮೊದಲು ತನ್ನ ಪ್ರಿಯತಮ ಶ್ರೀಸಾಯಿ ಜಾಸ್ಮಿನ್ ಗೆ ದೂರವಾಣಿ ಕರೆ ಮಾಡಿ, ತಾನು ಸಾಯುತ್ತಿರುವುದಾಗಿ ಹೇಳಿದ್ದಳು. ಅವನು ತಕ್ಷಣ ಜಾಸ್ಮಿನ್ ಮನೆಗೆ ಧಾವಿಸಿದ್ದಾನೆ. ಆದರೆ ಜಾಸ್ಮಿನ್ ಆ ವೇಳೆಗಾಗಲೇ ಸಾವನ್ನಪ್ಪಿದ್ದಳು.

ಇದರಿಂದಾಗಿ ಮಗಳ ಸಾವಿಗೆ ನೀನೇ ಕಾರಣ ಎಂದು ಜಾಸ್ಮಿನ್ ಕುಟುಂಬಸ್ಥರು ಶ್ರೀಸಾಯಿ ಹಾಗೂ ಪವನಕುಮಾರ್ ಎಂಬಾತನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಅವರಿಬ್ಬರ ಕಣ್ಣಿಗೆ ಮೆಣಸಿನ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ. ಅವರ ಬಟ್ಟೆಗಳನ್ನು ಬಿಚ್ಚಿ, ಇಬ್ಬರನ್ನೂ ಮರಕ್ಕೆ ಕಟ್ಟಿ ಹಾಕಿದ್ದಾರೆ. ಪೊಲೀಸರು ಬಂದರೂ ಹಿಂದೆ ಸರಿಯಲಿಲ್ಲ. ಗಂಭೀರವಾಗಿ ಗಾಯಗೊಂಡವರಿಗೆ ಜೀವಾನಾಧಾರಕ್ಕೆ ಕನಿಷ್ಠ ನೀರು ಸಹ ಕೊಡಲಿಲ್ಲ. ಹೆಚ್ಚುವರಿ ಪೊಲೀಸ್ ಪಡೆಗಳ ಆಗಮನದ ನಂತರ, ಆ ಇಬ್ಬರೂ ಯುವಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆ ವೇಳೆಗೆ ಶ್ರೀಸಾಯಿ ಸಾವನ್ನಪ್ಪಿದ್ದಾನೆ. ಈ ಘಟನೆ ಅಂದು ಭಾರೀ ಸಂಚಲನ ಮೂಡಿಸಿತ್ತು.

Also read:  ಅಧಿಕಾರದಲ್ಲಿದ್ದಾಗ 6ರ ಬದಲು 66 ಮರ ಕಡಿಯಲು ಅಕ್ರಮವಾಗಿ ಅನುಮತಿ ನೀಡಿದ್ದ ಐಎಫ್​ಎಸ್​ ಅಧಿಕಾರಿ ಸಸ್ಪೆಂಡ್

ಶ್ರೀಸಾಯಿ ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತೆನಾಲಿಯ 11ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಧೀಶೆ ಮಾಲತಿ ಅಂತಿಮ ತೀರ್ಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಆರೋಪಿಗಳ ಪೈಕಿ ನಾಲ್ವರು ಈಗಾಗಲೇ ಮೃತಪಟ್ಟಿದ್ದು, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಇನ್ನೂ ನಾಲ್ವರು ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ. ಆದರೆ ನ್ಯಾಯಾಲಯ 13 ಮಂದಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಆದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದರೂ ಪೊಲೀಸರು ಯುವಕರ ಮೇಲಿನ ಹಲ್ಲೆಯನ್ನು ತಡೆದು ಅವರ ಪ್ರಾಣ ಉಳಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಟೀಕೆಗಳನ್ನು ಎದುರಿಸಬೇಕಾಯಿತು. ಆ ವೇಳೆ ಅರಣ್ಯ ಇಲಾಖೆ ಎಸ್‌ಐ ವಿರುದ್ಧವೂ ಕ್ರಮ ಕೈಗೊಳ್ಳಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್