ಮಣಿಪುರದಲ್ಲಿ ಉಗ್ರರ ದಾಳಿ: ನಾಲ್ವರು ಪೊಲೀಸ್​​​ ಕಮಾಂಡೋಗಳು, ಬಿಎಸ್‌ಎಫ್ ಯೋಧರಿಗೆ ಗಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2024 | 2:01 PM

ಇಂದು ಬೆಳಿಗ್ಗೆ ಮಣಿಪುರದ ಮೊರೆಹ್‌ನಲ್ಲಿ ಉಗ್ರರರು ದಾಳಿ ನಡೆಸಿದ್ದಾರೆ. ದಾಳಿ ಪರಿಣಾಮ ನಾಲ್ವರು ಪೊಲೀಸ್​​​ ಕಮಾಂಡೋಗಳು ಮತ್ತು ಬಿಎಸ್‌ಎಫ್ ಜವಾನ ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಅವರನ್ನು ಚಿಕಿತ್ಸೆಗಾಗಿ ಇಂಫಾಲ್‌ನ ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಹೇಳಿದೆ.

ಮಣಿಪುರದಲ್ಲಿ ಉಗ್ರರ ದಾಳಿ: ನಾಲ್ವರು ಪೊಲೀಸ್​​​ ಕಮಾಂಡೋಗಳು, ಬಿಎಸ್‌ಎಫ್ ಯೋಧರಿಗೆ ಗಾಯ
Follow us on

ಮೊರೆಹ್‌, ಜ.2: ಇಂದು ಬೆಳಿಗ್ಗೆ ಮಣಿಪುರದ (Manipur) ಮೊರೆಹ್‌ನಲ್ಲಿ ಉಗ್ರರರು ದಾಳಿ ನಡೆಸಿದ್ದಾರೆ. ದಾಳಿ ಪರಿಣಾಮ ನಾಲ್ವರು ಪೊಲೀಸ್​​​ ಕಮಾಂಡೋಗಳು ಮತ್ತು ಬಿಎಸ್‌ಎಫ್ ಜವಾನ ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಅವರನ್ನು ಚಿಕಿತ್ಸೆಗಾಗಿ ಇಂಫಾಲ್‌ನ ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಹೇಳಿದೆ.

ಈ ಘಟನೆಗೂ ಮುನ್ನ ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಉಗ್ರದ ದಾಳಿಯಿಂದ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಈ ಘಟನೆಯಿಂದ ನಾಲ್ವರಿಗೆ ಗಾಯಗಳಾಗಿವೆ. ಕಳೆದ ವರ್ಷ ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 200 ಜನರು ಸಾವನ್ನಪ್ಪಿದ್ದಾರೆ. ಈ ಕಾರಣಕ್ಕೆ ಈ ಪ್ರದೇಶದಲ್ಲಿ ಪೊಲೀಸರು ಕರ್ಫ್ಯೂ ಹಾಕಲಾಗಿತ್ತು. ಈ ಬಗ್ಗೆ ಸರ್ಕಾರವೂ ಕೂಡ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು.

ಇದನ್ನೂ ಓದಿ: ಮಣಿಪುರ: 2 ಗುಂಪುಗಳ ನಡುವಿನ ಘರ್ಷಣೆಯಲ್ಲಿ 13 ಸಾವು: ವರದಿ

ರಾಜ್ಯದಲ್ಲಿ ನಡೆದ ಅಹಿತಕರ ಘಟನೆಯಿಂದ ರಾಜ್ಯದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರವು ಹೆಚ್ಚಿನ ಗಮನ ನೀಡಿ. ಎಲ್ಲ ರೀತಿ ಕ್ರಮಗಳನ್ನು ಅನುಸರಿಸಿದೆ. ಇದೀಗ ಮಣಿಪುರದಲ್ಲಿ ಉಗ್ರರ ದಾಳಿ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಭದ್ರತಾ ಪಡೆಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಲು ಮುಂದಾಗಿದೆ. ಇಂದು ನಡೆದ ದಾಳಿಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ದಾಳಿಯಿಂದ ಪೊಲೀಸರು ಸೇರಿದಂತೆ ನ್ವಾಲವರು ಭದ್ರತಾ ಪಡೆಯ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಅವರು ಆಸ್ಪತ್ರೆ ಸಾಗಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜತೆಗೆ ದಾಳಿ ನಡೆದ ಪ್ರದೇಶದಲ್ಲಿ ಹೆಚ್ಚಿನ ಕಟ್ಟೆಚ್ಚರವನ್ನು ವಹಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Tue, 2 January 24