ಜಮ್ಮು-ಕಾಶ್ಮೀರದ ಪುಲ್ವಾಮಾ( Pulwama)ದಲ್ಲಿ ಉಗ್ರರು ಮತ್ತೊಮ್ಮೆ ಭದ್ರತಾ ಸಿಬ್ಬಂದಿ (Security Forces)ಯನ್ನು ಟಾರ್ಗೆಟ್ ಮಾಡಿದ್ದಾರೆ. ಇಲ್ಲಿನ ಪೊಲೀಸ್ ಪೋಸ್ಟ್ ಸಮೀಪವೇ ಇರುವ ಅಂಚೆ ಕಚೇರಿ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪುಲ್ವಾಮಾದಲ್ಲಿ ಈ ಬಾರಿಯೂ ಉಗ್ರರು ಸಿಆರ್ಪಿಎಫ್ ಸಿಬ್ಬಂದಿಯನ್ನು ಕೊಲ್ಲುವ ದುರುದ್ದೇಶದಿಂದಲೇ ದಾಳಿ ನಡೆಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಪೊಲೀಸ್ ಪೋಸ್ಟ್ನಲ್ಲಿ ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದರಲ್ಲಿ ಸಿಆರ್ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿಯೇ ದಾಳಿ ನಡೆದಿತ್ತು. ಆದರೆ ಅದೃಷ್ಟವಶಾತ್ ಯಾರಿಗೂ ಹೆಚ್ಚೇನೂ ತೊಂದರೆಯಾಗಿಲ್ಲ. ಇಬ್ಬರು ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗ್ರೆನೇಡ್ ದಾಳಿ ಬೆನ್ನಲ್ಲೇ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
Jammu & Kashmir | Terrorists hurl grenade towards police post near Post Office, Pulwama
Details awaited.
— ANI (@ANI) December 26, 2021
ಪ್ರತ್ಯೇಕ ಎನ್ಕೌಂಟರ್ನಲ್ಲಿ ಐವರು ಉಗ್ರರ ಹತ್ಯೆ
ನಿನ್ನೆ ಒಂದೇ ದಿನ ಭದ್ರತಾ ಸಿಬ್ಬಂದಿ ಐವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಪ್ರತ್ಯೇಕ ಎನ್ಕೌಂಟರ್ನಲ್ಲಿ ಉಗ್ರರ ಹತ್ಯೆಯಾಗಿದೆ. ಭದ್ರತಾ ಸಿಬ್ಬಂದಿಯ ಗುಂಡಿನ ದಾಳಿಗೆ ಮೃತಪಟ್ಟ ಐವರಲ್ಲಿ ಒಬ್ಬಾತ ಐಇಡಿ ತಜ್ಞನಾಗಿದ್ದ. ಇಬ್ಬರು ಲಷ್ಕರ್ ಇ ತೊಯ್ಬಾದ ಉಗ್ರರಾಗಿದ್ದು, ಅವರನ್ನು ಶೋಪಿಯಾನಾದಲ್ಲಿ ಹತ್ಯೆ ಮಾಡಲಾಗಿದೆ. ಇನ್ನಿಬ್ಬರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೊಲ್ಲಲಾಗಿದ್ದು, ಅನ್ಸರ್ ಘಜ್ವತ್ ಉಲ್ ಹಿಂದ್ ಸಂಘಟನೆಗೆ ಸೇರಿದವರಾಗಿದ್ದರು. ಇನ್ನೊಬ್ಬಾತನನ್ನು ಅನಂತ್ನಾಗ್ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ. ನಿನ್ನೆ ಶೋಪಿಯಾನ್ದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊದಲು ಭಯೋತ್ಪಾದಕರಿಗೆ ಶರಣಾಗಲು ಎಲ್ಲ ರೀತಿಯ ಅವಕಾಶ ನೀಡಲಾಗಿತ್ತು. ಆದರೆ ಅವರು ತಿರುಗಿ ದಾಳಿಯನ್ನೇ ನಡೆಸಿದರು ಹೊರತು, ಶರಣಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಫೈರಿಂಗ್ ನಡೆಸಬೇಕಾಯಿತು ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ಎಎಫ್‌ಎಸ್‌ಪಿಎ ರದ್ದುಪಡಿಸುವ ಬೇಡಿಕೆಯನ್ನು ಪರಿಶೀಲಿಸಲು ಸಮಿತಿ ರಚಿಸಿದ ಕೇಂದ್ರ