ಕ್ರಿಸ್​ಮಸ್​ ಮರುದಿನವೇ ಯೇಸು ಪ್ರತಿಮೆ ಧ್ವಂಸ; ದುಷ್ಕೃತ್ಯದಿಂದ ನೊಂದ ಚರ್ಚ್​ ಪಾದ್ರಿ

ಮಧ್ಯಾಹ್ನ 12.30ರ ಹೊತ್ತಿಗೆ ಈ ಚರ್ಚ್​​ನ ದೊಡ್ಡ ಗೋಡೆಯನ್ನು ಹಾರಿದ್ದು, ಸಿಸಿಟಿವಿ ಫೂಟೇಜ್​ನಲ್ಲಿ ಕಾಣಿಸುತ್ತಿದೆ. ನಂತರ ಮಧ್ಯಾಹ್ನ 1.40ರ ಹೊತ್ತಿಗೆ ಯೇಸು ಪ್ರತಿಮೆ ಧ್ವಂಸಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಸ್​ಮಸ್​ ಮರುದಿನವೇ ಯೇಸು ಪ್ರತಿಮೆ ಧ್ವಂಸ; ದುಷ್ಕೃತ್ಯದಿಂದ ನೊಂದ ಚರ್ಚ್​ ಪಾದ್ರಿ
ಚರ್ಚ್​ ಹೊರಗೆ ಇದ್ದ ಯೇಸು ಪ್ರತಿಮೆ ಧ್ವಂಸ
Follow us
| Updated By: Lakshmi Hegde

Updated on: Dec 26, 2021 | 6:43 PM

ಹರ್ಯಾಣದ ಅಂಬಾಲಾದಲ್ಲಿ ಇರುವ ಬ್ರಿಟಿಷ್​ ಕಾಲದ ಹೋಲಿ ರಿಡೀಮರ್​ ಚರ್ಚ್​​ನ ಹೊರಭಾಗದಲ್ಲಿದ್ದ ಯೇಸು ಪ್ರತಿಮೆಯನ್ನು ಇಂದು ಮಧ್ಯಾಹ್ನ ಧ್ವಂಸಗೊಳಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯೇಸು ಪ್ರತಿಮೆಯನ್ನು ಹಾಳು ಮಾಡಿದ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಈ ಕೃತ್ಯ ಮಾಡಿದವರು ಯಾರು ಎಂದು ಗೊತ್ತಾಗಲಿಲ್ಲ. ಸ್ಥಳೀಯ ಸರ್ದಾರ್​ ಪೊಲೀಸ್ ಠಾಣೆಯ ಅಧಿಕಾರಿ ನರೇಶ್​ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.  ಕ್ರಿಸ್​ಮಸ್​ ಹಬ್ಬದ ಮರುದಿನವೇ ಯೇಸು ಪ್ರತಿಮೆ ಧ್ವಂಸವಾಗಿದೆ. ಇಂದು ಮುಂಜಾನೆ ಕ್ರಿಶ್ಚಿಯನ್ ಸಮುದಾಯದವರ ಪವಿತ್ರ ಪ್ರಾರ್ಥನೆ ಇತ್ತು. ಅದನ್ನು ಮುಗಿಸಿ ತೆರಳುತ್ತಿದ್ದಂತೆ ಇತ್ತ, ಪ್ರತಿಮೆ ಹಾಳಾಗಿದೆ.

ಚರ್ಚ್​ ಸುತ್ತಮುತ್ತಲಿನ ಸ್ಥಳಗಳನ್ನೂ ಪರಿಶೀಲನೆ ನಡೆಸಿದ್ದೇವೆ. ಮಧ್ಯಾಹ್ನ 12.30ರ ಹೊತ್ತಿಗೆ ಈ ಚರ್ಚ್​​ನ ದೊಡ್ಡ ಗೋಡೆಯನ್ನು ಹಾರಿದ್ದು, ಸಿಸಿಟಿವಿ ಫೂಟೇಜ್​ನಲ್ಲಿ ಕಾಣಿಸುತ್ತಿದೆ. ನಂತರ ಮಧ್ಯಾಹ್ನ 1.40ರ ಹೊತ್ತಿಗೆ ಯೇಸು ಪ್ರತಿಮೆ ಧ್ವಂಸಗೊಂಡಿದೆ. ಅಲ್ಲದೆ, ಅಲ್ಲಿದ್ದ ಲೈಟ್​​ಗಳನ್ನು ಒಡೆಯಲಾಗಿದೆ. ಆದರೆ ಅವರು ಯಾರೆಂಬ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಖಂಡಿತವಾಗಿಯೂ ಪತ್ತೆ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ  ಅಂಬಾಲಾ ಪೊಲೀಸ್​ ಹೆಚ್ಚುವರಿ ಎಸ್​ಪಿ ಪೂಜಾ ಡಾಬ್ಲಾ, ಡಿಎಸ್​ಪಿ, ರಾಮ್​ ಕುಮಾರ್​, ಅಂಬಾಲಾ ಕಂಟೋನ್ಮೆಂಟ್​ ಪೊಲೀಸ್​ ಠಾಣೆ ಅಧಿಕಾರಿಗಳು, ಕ್ರೈಂ ಮತ್ತು ತನಿಖಾ ಏಜೆನ್ಸಿ ಸಿಬ್ಬಂದಿ ಚರ್ಚ್​ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.  ಮಾಧ್ಯಮದವರೊಂದಿಗೆ ಮಾತನಾಡಿದ ಚರ್ಚ್​ ಪಾದ್ರಿ, ಪತ್ರಾಸ್​ ಮುಂಡು, ಈ ಹೋಲಿ ರಿಡೀಮರ್​ ಚರ್ಚ್​  ಅತ್ಯಂತ ಹಳೆಯ ಮತ್ತು ಐತಿಹಾಸಿಕ ಪ್ರಸಿದ್ಧವಾಗಿದೆ. 1840ರಲ್ಲಿ ಸ್ಥಾಪನೆಯಾಗಿದ್ದು. ಆಗಿನಿಂದ ಇಲ್ಲಿಯವರೆಗೂ ಇಂಥ ಯಾವುದೇ ಘಟನೆ ನಡೆದ ಉದಾಹರಣೆ ಇಲ್ಲ. ಆದರೆ ಈ ಘಟನೆಯಿಂದ ತುಂಬ ಬೇಸರವಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಎಎಸ್​ಪಿ ಪೂಜಾ ಮಾತನಾಡಿ, ಯೇಸು ಪ್ರತಿಮೆ ಧ್ವಂಸ ಮಾಡಿದವರಲ್ಲಿ ಇಬ್ಬರಿದ್ದಾರೆ ಎಂಬುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಇವರು ಯೇಸು ಪ್ರತಿಮೆ ಧ್ವಂಸ ಮಾಡುವ ಮೂಲಕ ಆ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.  ಚರ್ಚ್​ ಆಡಳಿತ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಪರಾಧಿಗಳನ್ನು ಶೀಘ್ರವೇ ಪತ್ತೆ ಹಚ್ಚಿ, ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ; ಡೆತ್​​ನೋಟ್ ಬರೆದು ಗುಂಡು ಹಾರಿಸಿಕೊಂಡು ಬಿಇಒ ಟಿಎನ್ ಕಮಲಾಕರ್ ಆತ್ಮಹತ್ಯೆ