ಪುಲ್ವಾಮಾದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ; ಸಿಆರ್​ಪಿಎಫ್​ ಸಿಬ್ಬಂದಿ ಟಾರ್ಗೆಟ್​, ಇಬ್ಬರು ಪೊಲೀಸರಿಗೆ ಗಾಯ

ಪುಲ್ವಾಮಾದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ; ಸಿಆರ್​ಪಿಎಫ್​ ಸಿಬ್ಬಂದಿ ಟಾರ್ಗೆಟ್​, ಇಬ್ಬರು ಪೊಲೀಸರಿಗೆ ಗಾಯ
ಘಟನೆ ನಡೆದ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ

ನಿನ್ನೆ ಒಂದೇ ದಿನ ಭದ್ರತಾ ಸಿಬ್ಬಂದಿ ಐವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಪ್ರತ್ಯೇಕ ಎನ್​​ಕೌಂಟರ್​​ನಲ್ಲಿ ಉಗ್ರರ ಹತ್ಯೆಯಾಗಿದೆ. ಭದ್ರತಾ ಸಿಬ್ಬಂದಿಯ ಗುಂಡಿನ ದಾಳಿಗೆ ಮೃತಪಟ್ಟ ಐವರಲ್ಲಿ ಒಬ್ಬಾತ ಐಇಡಿ ತಜ್ಞನಾಗಿದ್ದ.

TV9kannada Web Team

| Edited By: Lakshmi Hegde

Dec 26, 2021 | 6:05 PM

ಜಮ್ಮು-ಕಾಶ್ಮೀರದ ಪುಲ್ವಾಮಾ( Pulwama)ದಲ್ಲಿ ಉಗ್ರರು ಮತ್ತೊಮ್ಮೆ ಭದ್ರತಾ ಸಿಬ್ಬಂದಿ (Security Forces)ಯನ್ನು ಟಾರ್ಗೆಟ್​ ಮಾಡಿದ್ದಾರೆ. ಇಲ್ಲಿನ ಪೊಲೀಸ್​ ಪೋಸ್ಟ್ ಸಮೀಪವೇ ಇರುವ ಅಂಚೆ ಕಚೇರಿ ಮೇಲೆ ಗ್ರೆನೇಡ್​ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್​ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪುಲ್ವಾಮಾದಲ್ಲಿ ಈ ಬಾರಿಯೂ ಉಗ್ರರು ಸಿಆರ್​ಪಿಎಫ್​ ಸಿಬ್ಬಂದಿಯನ್ನು ಕೊಲ್ಲುವ ದುರುದ್ದೇಶದಿಂದಲೇ ದಾಳಿ ನಡೆಸಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಪೊಲೀಸ್ ಪೋಸ್ಟ್​ನಲ್ಲಿ ಪೊಲೀಸರು ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅದರಲ್ಲಿ ಸಿಆರ್​ಪಿಎಫ್​ ಸಿಬ್ಬಂದಿಯನ್ನು ಗುರಿಯಾಗಿಸಿಯೇ ದಾಳಿ ನಡೆದಿತ್ತು.  ಆದರೆ ಅದೃಷ್ಟವಶಾತ್​ ಯಾರಿಗೂ ಹೆಚ್ಚೇನೂ ತೊಂದರೆಯಾಗಿಲ್ಲ. ಇಬ್ಬರು ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗ್ರೆನೇಡ್​ ದಾಳಿ ಬೆನ್ನಲ್ಲೇ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.  

ಪ್ರತ್ಯೇಕ ಎನ್​ಕೌಂಟರ್​​ನಲ್ಲಿ ಐವರು ಉಗ್ರರ ಹತ್ಯೆ  ನಿನ್ನೆ ಒಂದೇ ದಿನ ಭದ್ರತಾ ಸಿಬ್ಬಂದಿ ಐವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಪ್ರತ್ಯೇಕ ಎನ್​​ಕೌಂಟರ್​​ನಲ್ಲಿ ಉಗ್ರರ ಹತ್ಯೆಯಾಗಿದೆ. ಭದ್ರತಾ ಸಿಬ್ಬಂದಿಯ ಗುಂಡಿನ ದಾಳಿಗೆ ಮೃತಪಟ್ಟ ಐವರಲ್ಲಿ ಒಬ್ಬಾತ ಐಇಡಿ ತಜ್ಞನಾಗಿದ್ದ. ಇಬ್ಬರು ಲಷ್ಕರ್​ ಇ ತೊಯ್ಬಾದ ಉಗ್ರರಾಗಿದ್ದು, ಅವರನ್ನು ಶೋಪಿಯಾನಾದಲ್ಲಿ ಹತ್ಯೆ ಮಾಡಲಾಗಿದೆ. ಇನ್ನಿಬ್ಬರನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೊಲ್ಲಲಾಗಿದ್ದು, ಅನ್ಸರ್​ ಘಜ್ವತ್​ ಉಲ್​ ಹಿಂದ್​ ಸಂಘಟನೆಗೆ ಸೇರಿದವರಾಗಿದ್ದರು. ಇನ್ನೊಬ್ಬಾತನನ್ನು ಅನಂತ್​ನಾಗ್​ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ.  ನಿನ್ನೆ ಶೋಪಿಯಾನ್​​ದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊದಲು ಭಯೋತ್ಪಾದಕರಿಗೆ ಶರಣಾಗಲು ಎಲ್ಲ ರೀತಿಯ ಅವಕಾಶ ನೀಡಲಾಗಿತ್ತು. ಆದರೆ ಅವರು ತಿರುಗಿ ದಾಳಿಯನ್ನೇ ನಡೆಸಿದರು ಹೊರತು, ಶರಣಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಫೈರಿಂಗ್​ ನಡೆಸಬೇಕಾಯಿತು ಎಂದು ಪೊಲೀಸ್​ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ಎಎಫ್‌ಎಸ್‌ಪಿಎ ರದ್ದುಪಡಿಸುವ ಬೇಡಿಕೆಯನ್ನು ಪರಿಶೀಲಿಸಲು ಸಮಿತಿ ರಚಿಸಿದ ಕೇಂದ್ರ

Follow us on

Related Stories

Most Read Stories

Click on your DTH Provider to Add TV9 Kannada