12ನೇ ತರಗತಿಯ ಪಠ್ಯ ಪುಸ್ತಕಗಳಿಂದ ಗಾಂಧಿ ಕುರಿತ ವಿಷಯ, ಆರ್‌ಎಸ್‌ಎಸ್ ಮೇಲಿನ ನಿಷೇಧ ವಿಚಾರ ಕೈಬಿಟ್ಟ ಎನ್‌ಸಿಇಆರ್‌ಟಿ

|

Updated on: Apr 05, 2023 | 6:34 PM

ಕಳೆದ ವರ್ಷ ತನ್ನ ಸಿಲಬಸ್ ಸುಧಾರಿಸುವ ಪ್ರಕ್ರಿಯೆ ಭಾಗವಾಗಿ, ಎನ್‌ಸಿಇಆರ್‌ಟಿ ಮತ್ತೆ ಮತ್ತೆ ಬರುವ ಮತ್ತು "ಅಪ್ರಸ್ತುತ" ಕಾರಣಗಳನ್ನು ಉಲ್ಲೇಖಿಸಿ, ಗುಜರಾತ್ ಗಲಭೆಗಳು, ಮೊಘಲ್ ನ್ಯಾಯಾಲಯಗಳು, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲೀಯ ಚಳವಳಿಯ ಪಾಠಗಳನ್ನು ಒಳಗೊಂಡಂತೆ ಕೆಲವು ಪಠ್ಯ ಪುಸ್ತಕಗಳಿಂದ ಕೆಲವು ಭಾಗಗಳನ್ನು ಕೈ ಬಿಟ್ಟಿತ್ತು

12ನೇ ತರಗತಿಯ ಪಠ್ಯ ಪುಸ್ತಕಗಳಿಂದ ಗಾಂಧಿ ಕುರಿತ ವಿಷಯ, ಆರ್‌ಎಸ್‌ಎಸ್ ಮೇಲಿನ ನಿಷೇಧ ವಿಚಾರ ಕೈಬಿಟ್ಟ ಎನ್‌ಸಿಇಆರ್‌ಟಿ
ಎನ್‌ಸಿಇಆರ್‌ಟಿ
Follow us on

ದೆಹಲಿ: ದೇಶದ ಕೋಮು ಪರಿಸ್ಥಿತಿಯ ಮೇಲೆ ಗಾಂಧೀಜಿ (Mahatma Gandhi) ಸಾವು ಪರಿಣಾಮ ಬೀರಿದೆ. ಗಾಂಧಿಯವರ ಹಿಂದೂ-ಮುಸ್ಲಿಂ ಐಕ್ಯತೆಯ ಅನ್ವೇಷಣೆಯು ಹಿಂದೂ ಉಗ್ರಗಾಮಿಗಳನ್ನು ಪ್ರಚೋದಿಸಿತು. ಆರ್‌ಎಸ್‌ಎಸ್‌ನಂತಹ  (RSS)ಸಂಘಟನೆಗಳನ್ನು ಸ್ವಲ್ಪ ಸಮಯದವರೆಗೆ ನಿಷೇಧಿಸಲಾಯಿತು ಎಂಬ ಪಠ್ಯಗಳು ಹೊಸ ಶೈಕ್ಷಣಿಕ ಅವಧಿಗೆ 12 ನೇ ತರಗತಿಯ ರಾಜಕೀಯ ವಿಜ್ಞಾನ (Political Science) ಪಠ್ಯಪುಸ್ತಕದಿಂದ ಕೈ ಬಿಡಲಾಗಿದೆ. ಆದಾಗ್ಯೂ, ಈ ವರ್ಷ ಯಾವುದೇ ಪಠ್ಯಕ್ರಮವನ್ನು ಕಡಿಮೆ ಮಾಡಲಾಗಿಲ್ಲ ಮತ್ತು ಕಳೆದ ವರ್ಷ ಜೂನ್‌ನಲ್ಲಿ ಪಠ್ಯಕ್ರಮವನ್ನು ಸುಧಾರಿಸಲಾಗಿದೆ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಹೇಳಿಕೊಂಡಿದೆ.

ಕಳೆದ ವರ್ಷ ತನ್ನ ಸಿಲಬಸ್ ಸುಧಾರಿಸುವ ಪ್ರಕ್ರಿಯೆ ಭಾಗವಾಗಿ, ಎನ್‌ಸಿಇಆರ್‌ಟಿ ಮತ್ತೆ ಮತ್ತೆ ಬರುವ ಮತ್ತು “ಅಪ್ರಸ್ತುತ” ಕಾರಣಗಳನ್ನು ಉಲ್ಲೇಖಿಸಿ, ಗುಜರಾತ್ ಗಲಭೆಗಳು, ಮೊಘಲ್ ನ್ಯಾಯಾಲಯಗಳು, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲೀಯ ಚಳವಳಿಯ ಪಾಠಗಳನ್ನು ಒಳಗೊಂಡಂತೆ ಕೆಲವು ಪಠ್ಯ ಪುಸ್ತಕಗಳಿಂದ ಕೆಲವು ಭಾಗಗಳನ್ನು ಕೈ ಬಿಟ್ಟಿತ್ತು.  ಈ ಬಗ್ಗೆ ನೀಡಿದ ಟಿಪ್ಪಣಿಯಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ.

ಕಳೆದ ವರ್ಷ ಸಂಪೂರ್ಣ ಸುಧಾರಿಸುವ ಪ್ರಕ್ರಿಯೆ ಮಾಡಲಾಗಿದೆ, ಈ ವರ್ಷ ಹೊಸದೇನೂ ಸಂಭವಿಸಿಲ್ಲ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಹೇಳಿದ್ದಾರೆ. ಆದಾಗ್ಯೂ, ಪರಿಷ್ಕರಣೆ ಸಮಯದಲ್ಲಿ ಹೀಗೆ ಕಾಣೆಯಾದ ಆಯ್ದ ಭಾಗಗಳ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.

ಎನ್‌ಸಿಇಆರ್‌ಟಿ ತನ್ನ ವೆಬ್‌ಸೈಟ್‌ನಲ್ಲಿನ ಟಿಪ್ಪಣಿಯಲ್ಲಿ ಕೋವಿಡ್ ಸಾಂಕ್ರಾಮಿಕದ ದೃಷ್ಟಿಯಿಂದ, ವಿದ್ಯಾರ್ಥಿಗಳ ಮೇಲಿನ ವಿಷಯದ ಹೊರೆ ಕಡಿಮೆ ಮಾಡುವುದು ಕಡ್ಡಾಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಸಹ ವಿಷಯದ ಹೊರೆ ಕಡಿಮೆ ಮಾಡಲು ಮತ್ತು ಅನುಭವದ ಕಲಿಕೆಗೆ ಅವಕಾಶಗಳನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ, ಎನ್​​ಸಿಇಆರ್​​ಟಿ ಎಲ್ಲಾ ತರಗತಿಗಳು ಮತ್ತು ಎಲ್ಲಾ ವಿಷಯಗಳ ಪಠ್ಯಪುಸ್ತಕಗಳನ್ನು ಸುಧಾರಿಸುವ ಪ್ರಕ್ರಿಯೆ ಕೈಗೊಂಡಿದೆ ಎಂದು ಹೇಳಿದೆ.

ಇದನ್ನೂ ಓದಿ: Travel: ಅಯೋಧ್ಯೆ ರಾಮ ಮಂದಿರ, ಸರಯೂ ನದಿಯ ದರ್ಶನಕ್ಕೆ ಹೆಲಿಕಾಪ್ಟರ್ ಸೇವೆ

ಪ್ರಸ್ತುತ ಆವೃತ್ತಿಯು ಬದಲಾವಣೆಗಳನ್ನು ಮಾಡಿದ ನಂತರ ಮರು ಫಾರ್ಮ್ಯಾಟ್ ಮಾಡಲಾದ ಆವೃತ್ತಿಯಾಗಿದೆ. ಪ್ರಸ್ತುತ ಪಠ್ಯಪುಸ್ತಕಗಳು ಸುಧಾರಿಸಿದ ಪಠ್ಯಪುಸ್ತಕಗಳಾಗಿವೆ. ಇವುಗಳನ್ನು 2022-23 ಅವಧಿಗೆ ಸುಧಾರಿಸಲಾಗಿದ್ದು 2023-24 ರಲ್ಲಿಯೂ ಇದು ಮುಂದುವರಿಯುತ್ತದೆ ಎಂದು ಅದು ಹೇಳಿದೆ.

ಗಾಂಧಿ ವಿಷಯವನ್ನು ಪಠ್ಯಪುಸ್ತಕದಿಂದ ಕೈಬಿಡಬಾರದಿತ್ತು: ಸಕ್ಲಾನಿ

ಮಹಾತ್ಮಾ ಗಾಂಧಿಯವರ ಹತ್ಯೆಗೆ ಸಂಬಂಧಿಸಿದ ಕೆಲವು ವಿಷಯವನ್ನು ಯಾವುದೇ ಅಧಿಸೂಚನೆಯಿಲ್ಲದೆ ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ ಎಂಬ ವಿವಾದ ಬಗ್ಗೆ ಎನ್‌ಸಿಇಆರ್‌ಟಿ ಮುಖ್ಯಸ್ಥ ದಿನೇಶ್ ಸಕ್ಲಾನಿ ಬುಧವಾರ ಪ್ರತಿಕ್ರಿಯಿಸಿದ್ದಾರೆ,. ಕಳೆದ ವರ್ಷ ಪಠ್ಯಕ್ರಮ ಸುಧಾರಿಸುವ ಪ್ರಕ್ರಿಯೆಯಲ್ಲಿ ಕೆಲವು ಭಾಗ ಕೈಬಿಡುವ ಬಗ್ಗೆ  ಘೋಷಿಸದಿರುವುದು ಅಜಾಗರೂಕತೆ ಎಂದಿದ್ದಾರೆ. ಸುಧಾರಣೆ ಸಮಯದಲ್ಲಿ ಕೆಲವೊಂದು ಪಠ್ಯಭಾಗಗಳಿಗೆ ಕೊಕ್ ನೀಡಿದ್ದರೂ ಎಲ್ಲಾ ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ ಸಕ್ಲಾನಿ ಹೇಳಿದ್ದು. ಅದೇ ವೇಳೆ ಮಹಾತ್ಮಾ ಗಾಂಧಿಯವರ ಹತ್ಯೆ ವಿಚಾರವನ್ನು  ಪಠ್ಯಪುಸ್ತಕದಿಂದ ತೆಗೆದುಹಾಕಬಾರದಿತ್ತು ಎಂದಿದ್ದಾರೆ. ಹೊಸ ಪಠ್ಯಪುಸ್ತಕಗಳಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳನ್ನು ಒಂದು ಅಥವಾ ಎರಡು ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Wed, 5 April 23