Delhi Chalo ಅರವಿಂದ್ ಕೇಜ್ರಿವಾಲ್ ಮತ್ತು ಅಮರೀಂದರ್ ಸಿಂಗ್ ನಡುವೆ ಕಚ್ಚಾಟ

|

Updated on: Dec 15, 2020 | 12:30 PM

ನೂತನ ಕೃಷಿ ಕಾಯ್ದೆಗಳ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ನಡುವೆ ಜಟಾಪಟಿ ಆರಂಭವಾಗಿದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಟ್ವಿಟ್ಟರ್​ನಲ್ಲಿ ಪರಸ್ಪರ ಕೆಸರೆರೆಚಾಟ ನಡೆಸಿದ್ದಾರೆ.

Delhi Chalo ಅರವಿಂದ್ ಕೇಜ್ರಿವಾಲ್ ಮತ್ತು ಅಮರೀಂದರ್ ಸಿಂಗ್ ನಡುವೆ ಕಚ್ಚಾಟ
ಅರವಿಂದ್ ಕೇಜ್ರಿವಾಲ್ (ಎಡ) ಅಮರೀಂದರ್ ಸಿಂಗ್ (ಬಲ)
Follow us on

ದೆಹಲಿ: ನೂತನ ಕೃಷಿ ಕಾಯ್ದೆಗಳ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ನಡುವೆ ಜಟಾಪಟಿ ಆರಂಭವಾಗಿದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಟ್ವಿಟ್ಟರ್​ನಲ್ಲಿ ಪರಸ್ಪರ ಕೆಸರೆರೆಚಾಟ ನಡೆಸಿದ್ದಾರೆ.

ಪಂಜಾಬ್ ರೈತರಿಗೆ ಬೆಂಬಲ ಸೂಚಿಸಿ ನಿನ್ನೆ ಅರವಿಂದ್ ಕೇಜ್ರಿವಾಲ್ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಲ್ಲದೇ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರಿಗೂ ಉಪವಾಸದ ಕರೆ ನೀಡಿದ್ದರು. ಇದನ್ನು ಮೂಲವಾಗಿಟ್ಟುಕೊಂಡ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್, ರಾಜಕೀಯ ಲಾಭಕ್ಕಾಗಿ ಕೇಜ್ರಿವಾಲ್ ತಮ್ಮ ಆತ್ಮವನ್ನೇ ಮಾರಲೂಬಹುದು. ಪಂಜಾಬಿನ ರೈತರನ್ನೂ ರಾಜಕೀಯ ನಾಟಕಕ್ಕೆ ಬಳಸಿಕೊಳ್ಳಬಹುದು ಎಂದು ಯೋಚಿಸಿದ್ದರೆ ನಿಮ್ಮ ಆಸೆ ತ್ಯಜಿಸುವುದೊಳಿತು..’ ಎಂದು ಟೀಕಿಸಿದ್ದರು.

ಇದಕ್ಕೆ ನಾಟಕೀಯವಾಗಿ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್, ‘ ಮಾನ್ಯ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರೇ, ನೀವೂ ಸಹ ನೂತನ ಕೃಷಿ ಮಸೂದೆಗಳನ್ನು ರೂಪಿಸಿದ ಸಮೀತಿಯ ಭಾಗವಾಗಿದ್ದಿರಲ್ಲವೇ? ಕೃಷಿ ಕಾಯ್ದೆಗಳನ್ನು ರೂಪಿಸಿ ದೇಶಕ್ಕೆ ಅತ್ಯಂತ ಒಳ್ಳೆಯ ಕೊಡುಗೆಯನ್ನೇ ನೀಡಿದ್ದೀರಿ..ಇದಕ್ಕಿಂತ ಒಳ್ಳೆಯ ಕೊಡುಗೆ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಕೃಷಿ ಕಾಯ್ದೆಗಳ ವಿಚಾರದಲ್ಲಿ ಬಿಜೆಪಿ ನಿಮ್ಮನ್ನು ಟೀಕಿಸುವುದಿಲ್ಲವೇಕೆ? ’ಎಂದು ಛೇಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ , ‘ನಾನು ಕೃಷಿ ಕಾಯ್ದೆಗಳ ಸಮೀತಿಯ ಭಾಗವಾಗಿರಲೇ ಇಲ್ಲ. ನನ್ನ ಬಳಿ ಕೃಷಿ ಕಾಯ್ದೆಗಳನ್ನು ರೂಪಿಸುವಾಗ ಬಿಜೆಪಿ ಅಥವಾ ಕೇಂದ್ರ ಸರ್ಕಾರ ಚರ್ಚಿಸಲೂ ಇಲ್ಲ. ಹೀಗಾಗಿ, ಬಿಜೆಪಿ ಬಳಿ ನನ್ನನ್ನು ದೂಷಿಸಲು ಯಾವ ಅಸ್ತ್ರವೂ ಇಲ್ಲ. ನಿಮ್ಮಂತೆ ನಾನು ಕೃಷಿ ಕಾಯ್ದೆಗಳ ಕುರಿತು ದ್ವಂದ್ವ ನೀತಿ ಹೊಂದಿಲ್ಲ’ ಎಂದಿದ್ದಾರೆ.  ಈ ಮೂಲಕ ದೆಹಲಿ ಚಲೋ ಈ ಎರಡೂ ಮುಖ್ಯಮಂತ್ರಿಗಳ ನಡುವೆ ಗಲಾಟೆ ಹುಟ್ಟುಹಾಕಿರುವುದಂತೂ ಸತ್ಯ.