ನಡೆದು ಸಾಗುತ್ತಿದ್ದ ಮಕ್ಕಳ ಗುಂಪಿನ ಮೇಲೆ ಲಾರಿ ನುಗ್ಗಿ ನಾಲ್ವರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ
ಜನರ ಗುಂಪಿನ ಮಧ್ಯೆ ಲಾರಿ ನುಗ್ಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಗಂಭೀರಗೊಂಡಿದೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ
ಆಂಧ್ರ ಪ್ರದೇಶ: ನಡೆದು ಹೋಗುತ್ತಿದ್ದ ಜನರ ಗುಂಪಿನ ಮೇಲೆ ಲಾರಿ ನುಗ್ಗಿ ಭೀಕರ ಅಪಘಾತ ಸಂಭವಿಸಿದೆ. ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕಗೊಂಡಿದೆ. ಈ ಭೀಕರ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಘಟನೆ ಸಂಭವಿಸಿದೆ. ಮತ ಪ್ರಚಾರ ಮಾಡಲೆಂದು ಪ್ರಾರ್ಥನೆ ಮಾಡುತ್ತಾ 40 ಜನರ ಕ್ರಿಶ್ಚಿಯನ್ ಗುಂಪೊಂದು ನಡೆದುಕೊಂಡು ಹೊರಟಿತ್ತು. ಅಚಾನಕ್ ಆಗಿ ಬಂದ ಲಾರಿ ಜನರ ಗುಂಪಿನ ಮಧ್ಯೆ ನುಗ್ಗಿದೆ. ಸುಶ್ಮಿತಾ(10), ಝಾನ್ಸಿ(11), ವಂಶಿ(12), ಹರ್ಷವರ್ಧನ(12) ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರನ್ನು ನಂದ್ಯಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
14 ವಾಹನಗಳಿಗೆ ಅಪ್ಪಳಿಸಿದ ಲಾರಿ; ನಾಲ್ಕು ಮಂದಿ ಸಾವು, 13 ಜನರಿಗೆ ಗಂಭೀರ ಗಾಯ