ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮೂರನೇ ಹಂತದಲ್ಲಿ ಶೇ 78.64 ಮತದಾನ
ಸೋಮವಾರ ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಮತದಾನ ನಡೆದಿದೆ. 273 ಗ್ರಾಮ ಪಂಚಾಯ್ತಿ, 44 ಮಂಡಲ ಪಂಚಾಯ್ತಿ, ನಾಲ್ಕು ಜಿಲ್ಲಾ ಪಂಚಾಯ್ತಿ 31 ಮುನ್ಸಿಪಲ್ ಪಂಚಾಯ್ತಿ ಹಾಗೂ 2 ಕಾರ್ಪೋರೇಷನ್ಗಳಿಗೆ ಮತದಾನ ಆಗಿದೆ.
ಕಾಸರಗೋಡು: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಪೂರ್ಣಗೊಂಡಿದ್ದು, ಶೇ. 78.64 ಮತದಾನವಾಗಿದೆ.
ಸೋಮವಾರ ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಮತದಾನ ನಡೆದಿದೆ. 273 ಗ್ರಾಮ ಪಂಚಾಯ್ತಿ, 44 ಮಂಡಲ ಪಂಚಾಯ್ತಿ, ನಾಲ್ಕು ಜಿಲ್ಲಾ ಪಂಚಾಯ್ತಿ 31 ಮುನ್ಸಿಪಲ್ ಪಂಚಾಯ್ತಿ ಹಾಗೂ 2 ಕಾರ್ಪೋರೇಷನ್ಗಳಿಗೆ ಮತದಾನ ಆಗಿದೆ.
ಈ ಪೈಕಿ ಮಲಪ್ಪುರಂನಲ್ಲಿ ಶೇ.78.10, ಕೋಯಿಕ್ಕೋಡ್-ಶೇ.77.95, ಕಣ್ಣೂರು ಶೇ.77.49, ಕಾಸರಗೋಡು ಶೇ.76.27 ಮತದಾನ ನಡೆದಿದೆ. ಕೋಯಿಕ್ಕೋಡ್ ಕಾರ್ಪೋರೇಷನ್ ಶೇ.69.07 ಹಾಗೂ ಕಣ್ಣೂರು ಕಾರ್ಪೋರೇಷನ್ ಶೇ.69.51 ಮತದಾನ ನಡೆದಿದೆ.
ಮೊದಲ ಹಂತದ ಮತದಾನದಲ್ಲಿ ಶೇ. 73.12 ಹಾಗೂ ಎರಡನೇ ಹಂತದಲ್ಲಿ ಶೇ.76.78 ಮತದಾನ ನಡೆದಿತ್ತು. ಇದಕ್ಕೆ ಹೋಲಿಕೆ ಮಾಡಿದರೆ, ಮೂರನೇ ಹಂತದಲ್ಲಿ ಹೆಚ್ಚು ಮತದಾನ ಆದಂತಾಗಿದೆ.
ಇನ್ನು, ಕೆಲವೆಡೆ ಘರ್ಷಣೆ ಆದ ಬಗ್ಗೆಯೂ ವರದಿ ಆಗಿದೆ. ಯುಡಿಎಫ್ ಹಾಗೂ ಎಲ್ಡಿಎಫ್ ಕಾರ್ಯಕರ್ತರ ನಡುವೆ ಮಲಪ್ಪುರಂನಲ್ಲಿ ಮಾತಿನ ಚಕಮಕಿ ಏರ್ಪಟ್ಟಿದೆ. ಉಳಿದಂತೆ, ಬಹುತೇಕ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.