ಗೋವಿನ ಮೇಲೆ ಕ್ರೌರ್ಯ ಆರೋಪ: ಯೂಟ್ಯೂಬ್, ಫೇಸ್ಬುಕ್ನಲ್ಲಿರುವ ವಿಡಿಯೊ ತೆಗೆಯಲು ಅಮೂಲ್ ಒತ್ತಾಯ
ಜಿಸಿಎಂಎಂಎಫ್ ಅಥವಾ ಅಲ್ಲಿನ ಸದಸ್ಯರು ಯಾವ ರೀತಿಯಲ್ಲಿ ಹಸುವಿನ ಮೇಲೆ ಕೌರ್ಯ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ವಿವರಣೆ ನೀಡಬೇಕು ಮತ್ತು ವಿಡಿಯೊಗಳಲ್ಲಿ ಅಮೂಲ್ ಚಿಹ್ನೆಯನ್ನು ಯಾಕೆ ಬಳಸಿದ್ದೀರಿ ಎಂದು ನ್ಯಾಯಾಲಯ ಜೈನ್ ಅವರಲ್ಲಿ ಪ್ರಶ್ನಿಸಿದೆ.
ನವದೆಹಲಿ: ಹಸುಗಳ ಮೇಲೆ ‘ಅಮೂಲ್’ ಕ್ರೌರ್ಯ ನಡೆಸುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಫೇಸ್ಬುಕ್ ಮತ್ತು ಯುಟ್ಯೂಬ್ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೊವನ್ನು ಅಲ್ಲಿಂದ ತೆಗೆಯಲು ಆದೇಶಿಸಬೇಕು ಎಂದು ಕೋರಿ ಅಮೂಲ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಗುಜರಾತ್ ಸಹಕಾರಿ ಹಾಲು ಮಾರಾಟಗಾರರ ಒಕ್ಕೂಟ (ಜಿಸಿಎಂಎಂಎಫ್) ಲಿಮಿಟೆಡ್ ‘ಅಮೂಲ್’ ಟ್ರೇಡ್ಮಾರ್ಕ್ನೊದಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಖ್ಯಾತ ಸಂಸ್ಥೆಯಾಗಿದೆ.
ಯೂಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ನಿತಿನ್ ಜೈನ್ ಎಂಬ ವ್ಯಕ್ತಿ ‘Unholy Cattle of India: Exposing Cruelty in the Indian Dairy Industry’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರು. ವಿಡಿಯೊ ಅಪ್‌ಲೋಡ್ ಮಾಡಿದ ವ್ಯಕ್ತಿಯಿಂದ ಪ್ರತಿಕ್ರಿಯೆ ಕೋರಿ ಎರಡು ಸಾಮಾಜಿಕ ಮಾಧ್ಯಮಗಳ ವಿರುದ್ಧ ಜಿಸಿಎಂಎಂಎಫ್ ನೋಟಿಸ್ ನೀಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ವಿಡಿಯೊಗಳನ್ನು ತೆಗೆದುಹಾಕುವಂತೆ ಮಧ್ಯಂತರ ಆದೇಶ ನೀಡಿದ್ದಾರೆ.
ಜಿಸಿಎಂಎಂಎಫ್ ಅಥವಾ ಅಲ್ಲಿನ ಸದಸ್ಯರು ಯಾವ ರೀತಿಯಲ್ಲಿ ಹಸುವಿನ ಮೇಲೆ ಕೌರ್ಯ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ವಿವರಣೆ ನೀಡಬೇಕು ಮತ್ತು ವಿಡಿಯೊಗಳಲ್ಲಿ ಅಮೂಲ್ ಚಿಹ್ನೆಯನ್ನು ಯಾಕೆ ಬಳಸಿದ್ದೀರಿ ಎಂದು ನ್ಯಾಯಾಲಯ ಜೈನ್ ಅವರಲ್ಲಿ ಪ್ರಶ್ನಿಸಿದೆ.
ಈ ಪ್ರಕರಣದ ಮುಂದಿನ ವಿಚಾರಣೆ 2021 ಜನವರಿ 15ರಂದು ನಡೆಯಲಿದೆ. ಜೈನ್ ಪರ ವಾದಿಸಿದ ಹಿರಿಯ ವಕೀಲ ರಾಜ್ ಪಂಜ್ವಾನಿ, ಸುಪ್ರಿಯಾ ಜುನೇಜಾ ಮತ್ತು ಪ್ರಿಯಾಂಕಾ ಬಂಗಾರಿ ತಮ್ಮ ಕಕ್ಷಿದಾರ ವ್ಯಾಪಾರದ ಉದ್ದೇಶದಿಂದ ಅಮೂಲ್ ಟ್ರೇಡ್ ಮಾರ್ಕ್ ಬಳಸಿಲ್ಲ ಎಂದು ಹೇಳಿದ್ದಾರೆ.
ಪ್ರತ್ಯುತ್ತರದ ಅಫಿಡವಿಟ್ ಜೊತೆಗೆ, ಪ್ರತಿವಾದಿ 1 (ಜೈನ್) ಅಪ್‌ಲೋಡ್ ಮಾಡಿದ ವಿಡಿಯೊಗಳಿಂದ ಯಾವುದೇ ರೀತಿಯಲ್ಲಿ ಲಾಭವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ತಿಳಿಸಬೇಕು. ಒಂದು ವೇಳೆ ಹೌದು ಎಂದಾದರೆ ಆ ಖಾತೆಗಳ ವಿವರ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರತಿವಾದಿ ಅಪ್‌ಲೋಡ್ ಮಾಡಿರುವ ವಿಡಿಯೊಗಳು 2018ರಿಂದ ಪಬ್ಲಿಕ್ ಡೊಮೇನ್ನಲ್ಲಿದೆ. ಅವರ ನಿಲುವನ್ನು ಗಮನದಲ್ಲಿರಿಸಿ ನ್ಯಾಯಾಲಯವು ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ಒಪ್ಪುತ್ತಿಲ್ಲ. ಜೈನ್‌ಗೆ ತನ್ನ ಉತ್ತರವನ್ನು ಸಲ್ಲಿಸಲು ಅವಕಾಶವನ್ನು ನೀಡುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
‘ಗೋ ಹತ್ಯೆ ಪ್ರಹಸನ! ಗೋ ಹತ್ಯೆ ಮಾಡಿ ಅದನ್ನು ವಿದೇಶಕ್ಕೆ ರಫ್ತು ಮಾಡ್ತಿರೋರು ಯಾರು?’
Published On - 8:42 pm, Mon, 14 December 20