ದೇಶ ಬಿಟ್ಟು ತೊಲಗುವಂತೆ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತ ಡೆಡ್​ಲೈನ್!

ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಇದೀಗ ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿದೆ. ಭಾರತ ಸರ್ಕಾರದ ಏಜೆಂಟರೇ ನಿಜ್ಜರ್‌ನನ್ನು ಹತ್ಯೆ ಮಾಡಿದರು ಎಂದು ಕೆನಡಾ ಪ್ರಧಾನಿ ಹೇಳಿಕೆ ನೀಡಿದ ಬಳಿಕ, ಈ ವಿಚಾರ ಜಾಗತಿಕವಾಗಿ ಭಾರೀ ಚರ್ಚೆಗೀಡಾಗಿದೆ. ಇದರ ಬೆನ್ನಲ್ಲೇ ಭಾರತ ಸರ್ಕಾರ, ಕೆನಾಡದಲ್ಲಿರವ ಭಾರತದ ರಾಜತಾಂತ್ರಿಕರನ್ನು ವಾಪಸ್ ಕರೆಯಿಸಿಕೊಂಡಿದೆ. ಅಲ್ಲದೇ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಭಾರತದಲ್ಲಿರುವ ಕೆನಡಾದ 6 ರಾಜತಾಂತ್ರಿಕರನ್ನು ದೇಶದಿಂದ ವಾಪಸ್ ಕಳುಹಿಸಲು ತೀರ್ಮಾನಿಸಿದೆ.

ದೇಶ ಬಿಟ್ಟು ತೊಲಗುವಂತೆ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತ ಡೆಡ್​ಲೈನ್!
ಕೆನಡಾ-ಭಾರತ
Follow us
|

Updated on:Oct 14, 2024 | 10:42 PM

ನವದೆಹಲಿ, (ಅಕ್ಟೋಬರ್ 14): ಖಲಿಸ್ತಾನ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಿತೂರಿಯಿದೆ ಎಂದು ಕೆನಡಾ ಆರೋಪಿಸಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ. ಸೋಮವಾರ ಈ ಹೇಳಿಕೆ ಪ್ರಕಟಗೊಂಡ ಬೆನ್ನಲ್ಲೇ ಭಾರತ ಅದನ್ನು ಖಂಡಿಸಿತ್ತು. ಇದೀಗ ಅಲ್ಲಿರುವ ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಯಿಸಿಕೊಂಡಿದೆ. ಅಲ್ಲದೇ ಇದೀಗ ಭಾರತದಲ್ಲಿರುವ ಆರು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ದೇಶದಿಂದ ಹೊರಹಾಕಲು ನಿರ್ಧಿರಿಸಿದೆ. ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಸೂಚಿಸಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸ್ಟೀವರ್ಟ್ ರಾಸ್ ವೀಲರ್ (ಹಂಗಾಮಿ ಹೈ ಕಮಿಷನರ್) , ಪ್ಯಾಟ್ರಿಕ್ ಹೆಬರ್ಟ್ (ಡೆಪ್ಯುಟಿ ಹೈ ಕಮಿಷನರ್), ಮೇರಿ ಕ್ಯಾಥರೀನ್ ಜೋಲಿ, (ಫಸ್ಟ್ ಸೆಕ್ರೆಟರಿ) ಲ್ಯಾನ್ ರಾಸ್ ಡೇವಿಡ್ ಟ್ರೈಟ್ಸ್ (ಫಸ್ಟ್ ಸೆಕ್ರೆಟರಿ), ಆಡಮ್ ಜೇಮ್ಸ್ ಚುಪ್ಕಾ((ಫಸ್ಟ್ ಸೆಕ್ರೆಟರಿ) ಪೌಲಾ ಒರ್ಜುಯೆಲಾ (ಫಸ್ಟ್ ಸೆಕ್ರೆಟರಿ) ಈ ಆರು ಅಧಿಕಾರಿಗಳಿಗೆ ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಭಾರತ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: ರಾಜತಾಂತ್ರಿಕ ಕಲಹ ಉಲ್ಬಣ; ಕೆನಡಾದಲ್ಲಿರುವ ರಾಯಭಾರಿಯನ್ನು ವಾಪಸ್ ಕರೆಸಲು ಭಾರತ ನಿರ್ಧಾರ 

ರಾಜತಾಂತ್ರಿಕರನ್ನು ವಾಪಸ್ ಕರೆಯಿಸಿಕೊಂಡ ಭಾರತ

ಸಿಖ್ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಗೆ ರಾಯಭಾರಿಯನ್ನು ಸಂಪರ್ಕಿಸುವ ಕೆನಡಾದ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ ನಂತರ ಭಾರತ, ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ಈ ವೇಳೆ ನಮ್ಮವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಕೆನಡಾ ಸರ್ಕಾರದ ಬದ್ಧತೆಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದೆ.

ಉಗ್ರವಾದ ಮತ್ತು ಹಿಂಸಾಚಾರದ ವಿಚಾರದಲ್ಲಿ ಕೆನಡಾ ಪ್ರಧಾನಿ ಟ್ರುಡೊ ಸರ್ಕಾರದ ಕ್ರಮಗಳು ಅವರ ಸುರಕ್ಷತೆಗೆ ಅಪಾಯ ಎಂಬುದನ್ನು ಭಾರತ ಒತ್ತಿ ಹೇಳಿದೆ. ನಮ್ಮ ರಾಜತಾಂತ್ರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆನಡಾ ಸರ್ಕಾರದ ಬದ್ಧತೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಆದ್ದರಿಂದ, ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಕರೆಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Mon, 14 October 24

ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ