Video Viral: ಮುಖ್ಯಮಂತ್ರಿ ಕೈಗೆ ಕಬ್ಬಿಣದ ರಾಡ್​ನಿಂದ ಹೊಡೆಯುವ ವಿಡಿಯೋ ವೈರಲ್, ರಾಜ್ಯದ ಏಳಿಗೆಗೆ ಈ ಸೇವೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 25, 2022 | 12:00 PM

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ವೀಡಿಯೊ. ಈ ವೀಡಿಯೋದಲ್ಲಿ ಸಿಎಂ ಭೂಪೇಶ್ ಬಘೇಲ್ ಕೈಗೆ ಒಂದು ಕಬ್ಬಿಣದ ರಾಡ್​ನಿಂದ ಹೊಡೆಯುತ್ತಿರುವುದುನ್ನು ಕಾಣಬಹುದು.

Video Viral: ಮುಖ್ಯಮಂತ್ರಿ ಕೈಗೆ ಕಬ್ಬಿಣದ ರಾಡ್​ನಿಂದ ಹೊಡೆಯುವ ವಿಡಿಯೋ ವೈರಲ್, ರಾಜ್ಯದ ಏಳಿಗೆಗೆ ಈ ಸೇವೆ
Chief Minister
Follow us on

ಛತ್ತೀಸ್‌ಗಢ: ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ವೀಡಿಯೊ. ಈ ವೀಡಿಯೋದಲ್ಲಿ ಸಿಎಂ ಭೂಪೇಶ್ ಬಘೇಲ್ ಕೈಗೆ ಒಂದು ಕಬ್ಬಿಣದ ರಾಡ್​ನಿಂದ ಹೊಡೆಯುತ್ತಿರುವುದುನ್ನು ಕಾಣಬಹುದು. ಈ ವೀಡಿಯೋ ದುರ್ಗ್ ಜಿಲ್ಲೆಯಲ್ಲಿ ದೀಪಾವಳಿ ಪ್ರಯುಕ್ತ ನಡೆಯುತ್ತಿರುವ ‘ಗೌರಿ-ಗೌರ ಪೂಜೆ’ ಸಂದರ್ಭದಲ್ಲಿ ಸಿಎಂ ಭೂಪೇಶ್ ಬಘೇಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಈ ಸಮಯದಲ್ಲಿ ಕೈಗೆ ಕಬ್ಬಿಣದ ರಾಡ್ ಹೊಡೆಯುವ ಪದ್ಧತಿ ಇದೆ. ಈ ಆಚರಣೆಯಲ್ಲಿ ಅವರ ಕೈ ಮಣಿಕಟ್ಟಿನ ಮೇಲೆ ಭಾರಿ ಪೆಟ್ಟು ಬಿದ್ದಿದೆ.

ಈ ಆಚರಣೆ ಭಾರಿ ಜನರು ಸೇರಿದ್ದರು. ಇದರ ಮಧ್ಯೆ ಸಿಎಂ ಭೂಪೇಶ್ ಬಘೇಲ್ ಕೈ ಎತ್ತಿ ನಿಂತಿದ್ದರು, ಮತ್ತೊಬ್ಬ ವ್ಯಕ್ತಿ ವೇಗವಾಗಿ ಮಣಿಕಟ್ಟಿಗೆ ಹೊಡೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವ್ಯಕ್ತಿ ಸಿಎಂ ಭೂಪೇಶ್ ಬಘೇಲ್‌ಗೆ ಒಂದಲ್ಲ ಐದು ರಾಡ್‌ಗಳನ್ನು ಒಂದರ ಹಿಂದೆ ಒಂದರಂತೆ ಬಾರಿಸುತ್ತಾನೆ. ಸಿಎಂ ಬಾಘೆಲ್ ಪ್ರತಿ ವರ್ಷ ಈ ಸಂಪ್ರದಾಯದ ಭಾಗಿಯಾಗುತ್ತಾರೆ. ಇಂದು ದುರ್ಗದಲ್ಲಿ ಗೌರ ಗೌರಿ ಪೂಜೆಯಲ್ಲಿ ಸಿಎಂ ಭೂಪೇಶ್ ಬಾಘೇಲ್ ಪಾಲ್ಗೊಂಡಿದ್ದರು. ಗೌರ ಗೌರಿ ಪೂಜೆಯ ಸಂದರ್ಭದಲ್ಲಿ ಈ ಕಬ್ಬಿಣದ ರಾಡ್​ನಿಂದ ಕೈಗೆ ಹೊಡೆದರೆ ಕಷ್ಟಗಳು ದೂರವಾಗುತ್ತದೆ ಮತ್ತು ರಾಜ್ಯವೂ ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಸಂಪ್ರದಾಯದ ಪ್ರಕಾರ ಸಿಎಂ ಬಘೇಲ್ ಅವರು ನೋವು ಅನಿಭವಿಸಿದರು ರಾಜ್ಯ ಒಳಿತಿಗಾಗಿ ನೋವನ್ನು ಸಹಿಸಿಕೊಂಡರು. ರಾಜ್ಯದ ಏಳಿಗೆಗಾಗಿ ಸಿಎಂ ಬಘೇಲ್ ಪ್ರತಿ ವರ್ಷ ಈ ಸಂಪ್ರದಾಯದಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರತಿ ವರ್ಷ ಗೌರಿ-ಗೌರ ಪೂಜೆ ಸಂದರ್ಭದಲ್ಲಿ ಇಲ್ಲಿಗೆ ಬರಲು ಸಂತೋಷ- ಬಾಘೇಲ್

ದುರ್ಗಕ್ಕೆ ಆಗಮಿಸಿದ ಸಿಎಂ ಭೂಪೇಶ್ ಬಘೇಲ್ ಕೂಡ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಸಿ.ಎಂ.ಬಘೇಲ್ ಮಾತನಾಡಿ, ದೇವರು ನಿಮ್ಮ ಜೀವನದಲ್ಲಿ ಪ್ರತಿ ವರ್ಷ ಇಂತಹ ಸಂತೋಷವನ್ನು ತರಲಿ, ನಿಮ್ಮ ಜೀವನವು ಹೀಗೆಯೇ ಬೆಳಗಲಿ. ಪ್ರತಿ ವರ್ಷ ‘ಗೌರಿ–ಗೌರ ಪೂಜೆ’ಯಂದು ಇಲ್ಲಿಗೆ ಬರುವುದರಿಂದ ಸಂತಸವಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಗೌರ ಗೌರಿ ಪೂಜೆಯ ಜತೆಗೆ ಸಿಎಂ ನಗರ ಪ್ರದಕ್ಷಿಣೆಯನ್ನೂ ಮಾಡಿದರು. ಇದಕ್ಕೂ ಮುನ್ನ ದುರ್ಗದಲ್ಲಿ ಕಾರ್ಯಕ್ರಮದ ಆಯೋಜಕರು ಸಿಎಂ ಬಘೇಲ್ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.

Published On - 12:00 pm, Tue, 25 October 22