ಕೊಯಮತ್ತೂರಿನ ಕಾರಿನ ಸಿಲಿಂಡರ್ ಸ್ಫೋಟಕ್ಕೂ ಶ್ರೀಲಂಕಾದ ಬಾಂಬ್ ಸ್ಫೋಟಕ್ಕೂ ಏನು ಸಂಬಂಧ?
ತಮಿಳುನಾಡಿನ ಕೊಯಮತ್ತೂರಿನ ಉಕ್ಕಡಮ್ ಎಂಬಲ್ಲಿ ಕಾರಿನಲ್ಲಿರುವ ಸಿಲಿಂಡರ್ ಸ್ಫೋಟಗೊಂಡು ಜೆಮಿಶಾ ಮುಬೀನ್ ಎಂಬ ಎಂಜಿನಿಯರ್ ಮೃತಪಟ್ಟ ಪ್ರಕರಣದಲ್ಲಿ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ.
ತಮಿಳುನಾಡಿನ ಕೊಯಮತ್ತೂರಿನ ಉಕ್ಕಡಮ್ ಎಂಬಲ್ಲಿ ಕಾರಿನಲ್ಲಿರುವ ಸಿಲಿಂಡರ್ ಸ್ಫೋಟಗೊಂಡು ಜೆಮಿಶಾ ಮುಬೀನ್ ಎಂಬ ಎಂಜಿನಿಯರ್ ಮೃತಪಟ್ಟ ಪ್ರಕರಣದಲ್ಲಿ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ. 2019ರಲ್ಲಿ ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ನಡೆದಿದ್ದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಮುಬೀನ್ ತನಿಖೆಯನ್ನೂ ನಡೆಸಿತ್ತು ಎನ್ನುವ ಅಂಶ ಬೆಳಕಿಗೆ ಬಂದಿದೆ.
ಸ್ಫೋಟಗೊಂಡಿರುವ ಕಾರಿನಲ್ಲಿ ಮೊಳೆಗಳು, ಅಮೃತಶಿಲೆ ಕಲ್ಲುಗಳು ಸಿಕ್ಕಿವೆ, ಮುಬೀನ್ ಮನೆಯನ್ನೂ ಪೊಲೀಸರು ತಪಾಸಣೆ ನಡೆಸಿದ್ದು ಆ ಸಂದರ್ಭದಲ್ಲಿ ಪೊಟ್ಯಾಸಿಯಂ ನೈಟ್ರೇಟ್, ಅಲ್ಯೂಮಿನಿಯಂ ಪುಡಿ, ಸಲ್ಫರ್, ಇದ್ದಿಲುಗಳು ಸಿಕ್ಕಿವೆ. ಇವು ನಾಡಬಾಂಬುಗಳ ತಯಾರಿಕೆಗೆ ಬಳಸುವ ವಸ್ತುಗಳಾಗಿದ್ದು, ಇದು ಆತ್ಮಹತ್ಯಾ ಬಾಂಬ್ ಸ್ಫೋಟವಾಗಿರಬಹುದು ಎನ್ನುವ ಅನುಮಾನ ಮೂಡಿದೆ.
ಶನಿವಾರ ರಾತ್ರಿ 11.25ರ ಸುಮಾರಿಗೆ ಮುಬೀನ್ ಮನೆಯಿಂದ ಐವರು ವ್ಯಕ್ತಿಗಳು, ಗನ್ಗಳನ್ನು ಹೊತ್ತೊಯ್ಯುವ ಬ್ಯಾಗ್ಗಳೊಂದಿಗೆ ಹೋಗಿದ್ದರು. ಈ ಪೈಕಿ ಮುಬೀನ್ ಮೃತಪಟ್ಟಿದ್ದಾರೆ.
ಈ ಪ್ರಕರಣ ಕುರಿತು ಪೊಲೀಸರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ, ಇದು ಭಯೋತ್ಪಾದನಾ ಕೃತ್ಯವಲ್ಲ ಎಂದಷ್ಟೇ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಮುಹಮ್ಮದ್ ರಿಯಾಜ್, ಫಿರೋಜ್ ಇಸ್ಮಾಯಿಲ್, ಮುಹಮ್ಮದ್ ತಲ್ಕಾ, ಮುಹಮ್ಮದ್ ಅಜರುದ್ದೀನ್ ಹಾಗೂ ಮುಹಮ್ಮದ್ ನವಾಜ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಎಲ್ಲರೂ 20 ವರ್ಷ ವಯಸ್ಸಿನವರಾಗಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ