Britain PM ರಿಷಿ ಸುನಕ್‌ಗೆ ಅಭಿನಂದನೆ ತಿಳಿಸಿದ ಮೋದಿ, ಬೊಮ್ಮಾಯಿ, ಕುಮಾರಸ್ವಾಮಿ ಹೇಳಿದ್ದಿಷ್ಟು
ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ ಒಲಿದಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಎಚ್ಡಿ ಕುಮಾರಸ್ವಾಮಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ನವದೆಹಲಿ/ಬೆಂಗಳೂರು: ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ ಒಲಿದಿದೆ. ಪ್ರಧಾನಿಯಾಗಿ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರಿಂದ ಎರಡನೇ ಬಾರಿ ಅಗ್ನಿ ಪರೀಕ್ಷೆಗೆ ಇಳಿದ ರಿಷಿ ಸುನಕ್, ಸಂಸದರ ಭರ್ಜರಿ ಬಹುಮತದ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೇರಿದ್ದಾರೆ. ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್ ಇನ್ಮುಂದೆ ಬ್ರಿಟನ್ ಪ್ರಧಾನಿಯಾಗಿ ಬ್ರಿಟಿಷರ ರಾಷ್ಟ್ರದಲ್ಲಿ ದರ್ಬಾರ್ ನಡೆಸಲಿದ್ದು, ಇವರಿಗೆ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಅಳಿಯ ರಿಷಿ ಸುನಕ್ ಆಯ್ಕೆ: ಬೆಂಗಳೂರಿನ ಸುಧಾಮೂರ್ತಿ ನಿವಾಸದಲ್ಲಿ ಸಂಭ್ರಮಾಚರಣೆ
ಶಭಾಶಯ ತಿಳಿಸಿದ ನರೇಂದ್ರ ಮೋದಿ
ಬ್ರಿಟನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಭಾರತೀಯ ಅಳಿಯ ರಿಷಿ ಸುನಕ್ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರಿಗೆ ಅಭಿನಂದನೆ. ಭಾರತ-ಬ್ರಿಟನ್ ಒಗ್ಗೂಡಿ ಜಾಗತಿಕ ಸಮಸ್ಯೆಗಳು ಹಾಗೂ 2030ರ ವರೆಗೆ ಜಾರಿಗೊಳಿಸುವ ಯೋಜನೆಗಳಿಗೆ ಕ್ರಿಯಾಯೋಜನೆ ರೂಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಉದ್ದೇಶವಿದೆ. ಹಾಗೇ ನಮ್ಮ ಐತಿಹಾಸಿಕ ಒಪ್ಪಂದಗಳು ಆಧುನಿಕ ಸಹಭಾಗಿತ್ವವಾಗಿ ಮಾರ್ಪಾಡಾಗಲಿ ಎಂದು ಮೋದಿ ಟ್ವೀಟ್ ಮಾಡಿ ಬ್ರಿಟನ್ನಲ್ಲಿರುವ ಎಲ್ಲಾ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
Warmest congratulations @RishiSunak! As you become UK PM, I look forward to working closely together on global issues, and implementing Roadmap 2030. Special Diwali wishes to the ‘living bridge’ of UK Indians, as we transform our historic ties into a modern partnership.
— Narendra Modi (@narendramodi) October 24, 2022
ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ: ರಿಷಿಗೆ ಭಾರತ ಬೇರೆ ದೇಶದಂತೆ, ನೋಡಿ ಖುಷಿಪಡಬೇಕು ಎಂದ ಪೈ
ಸಿಎಂ ಬೊಮ್ಮಾಯಿ ಶುಭಾಶಯ
ಇನ್ನು ಕರ್ನಾಟಕದ ಸುಧಾಮೂರ್ತಿ ಅವರ ಅಳಿಯ ಅಂದ್ರೆ ಮಗಳ ಗಂಡ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಶುಭಾಶಯಕೋರಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಸುನಕ್ ಆಯ್ಕೆ ಆಗಿದ್ದಕ್ಕೆ ಸಂತಸವಾಗಿದೆ. ಭಾರತೀಯ ಮೂಲದ ರಿಷಿ ಆಯ್ಕೆ ಆಗಿದ್ದಕ್ಕೆ ಸಂತಸ, ಹೆಮ್ಮೆ ಆಗ್ತಿದೆ. ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದ್ದರು. ಭಾರತೀಯ ಮೂಲದವರು ಪ್ರಧಾನಿ ಆಗ್ತಾರೆಂದು ನಿರೀಕ್ಷಿಸಿರಲಿಲ್ಲ. ಕನಸು, ಮನಸ್ಸಿನಲ್ಲೂ ನಿರೀಕ್ಷಿಸಿರಲಿಲ್ಲ, ಈಗ ಕಾಲ ಚಕ್ರ ತಿರುಗಿದೆ. ಬ್ರಿಟನ್‌ನಲ್ಲಿ ಭಾರತೀಯರು ಎಲ್ಲಾ ರಂಗಗಳಲ್ಲೂ ಮುಂದಿದ್ದಾರೆ. ಈಗ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗಿರೋದು ವಿಶೇಷ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Congratulations to Conservative Party leader Shri Rishi Sunak as being elected Britain’s Prime Minister, the first person of Indian-origin to hold this august office. Best wishes for a successful tenure. #RishiSunak pic.twitter.com/wJKSGFVLQw
— Basavaraj S Bommai (@BSBommai) October 24, 2022
ಟ್ವೀಟ್ ಮೂಲಕ ಶುಭಾಶಯ ಕೋರಿದ ಕುಮಾರಸ್ವಾಮಿ
ಟ್ವೀಟ್ ಮಾಡಿ ರಿಷಿ ಸುನಕ್‌ಗೆ ಹೆಚ್‌ಡಿಕೆ ಶುಭಾಶಯ ಕೋರಿದ್ದು, ರಿಷಿ ಸುನಕ್ ಕನ್ನಡ ನೆಲದ ನಂಟು ಹೊಂದಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿದ್ದಕ್ಕೆ ರಿಷಿ ಸುನಕ್‌ಗೆ ಅಭಿನಂದನೆ. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ-ಸುಧಾಮೂರ್ತಿ ಅಳಿಯ ಸುನಕ್ ಆಯ್ಕೆ ಅತೀವ ಸಂತಸ ತಂದಿದೆ. ಆರ್ಥಿಕ ಸಂಕಷ್ಟ ಕಾಲದಲ್ಲಿ ಬ್ರಿಟನ್ ಚುಕ್ಕಾಣಿ ಹಿಡಿಯುತ್ತಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆಂಬ ವಿಶ್ವಾಸ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಎನ್.ಆರ್.ನಾರಾಯಣ ಮೂರ್ತಿ ಹಾಗೂ ಶ್ರೀಮತಿ ಸುಧಾಮೂರ್ತಿ ಅವರ ಅಳಿಯಂದಿರಾಗಿರುವ ಶ್ರೀ ರಿಷಿ ಸುನಕ್ ಅವರ ಆಯ್ಕೆ ನನಗೆ ಅತೀವ ಸಂತಸ ತಂದಿದೆ. 2/3
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 24, 2022
ಆರ್ಥಿಕ ಸಂಕಷ್ಟ ಕಾಲದಲ್ಲಿ ಶ್ರೀ ರಿಷಿ ಸುನಕ್ ಅವರು ಬ್ರಿಟನ್ ದೇಶದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ. 3/3
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 24, 2022