ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ: ರಿಷಿಗೆ ಭಾರತ ಬೇರೆ ದೇಶದಂತೆ, ನೋಡಿ ಖುಷಿಪಡಬೇಕು ಎಂದ ಪೈ
ಭಾರತದ ಅಳಿಯನಿಗೆ ಬ್ರಿಟನ್ ಪ್ರಧಾನಿ ಪಟ್ಟ ಒಲಿದಿದ್ದು, ಇದು ಭಾರತೀಯ ಸಂತೋಷಕ್ಕೆ ಕಾರಣವಾಗಿದೆ. ಇನ್ನು ಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆrಉವ ಬಗ್ಗೆ ಮೋಹನ್ ದಾಸ್ ಪೈ ಹೇಳಿದ್ದಿಷ್ಟು.
ಬೆಂಗಳೂರು: ಬ್ರಿಟನ್ನಲ್ಲಿ ನಡೆದ ಸಿನಿಮೀಯ ರೀತಿಯ ರಾಜಕೀಯ ಬೆಳವಣಿಗೆ ಬಳಿಕ ರಿಷಿ ಸುನಕ್(Rishi Sunak) ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್ ಇನ್ಮುಂದೆ ಬ್ರಿಟನ್ ಪ್ರಧಾನಿ. ಇನ್ನು ಈ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ(mohandas pai )ಪ್ರತಿಕ್ರಿಯಿಸಿದ್ದು, ಎಲ್ಲಾ ಭಾರತೀಯರು ಖುಷಿಪಡುವಂತಹ ಸಂದರ್ಭವಿದು ಎಂದಿದ್ದಾರೆ.
ಇಂದು(ಅ.24) ಅತ್ತ ಭಾರತದ ಅಳಿಯ ರಿಷಿಗೆ ಬ್ರಿಟನ್ ಪಟ್ಟ ಒಲಿಯುತ್ತಿದ್ದಂತೆಯೇ ಇತ್ತ ಟಿವಿ9ಗೆ ಉದ್ಯಮಿ ಮೋಹನ್ ದಾಸ್ ಪೈ ಮಾತನಾಡಿ, ಒಬ್ಬ ಭಾರತೀಯ ಬ್ರಿಟನ್ ಪ್ರಧಾನಮಂತ್ರಿಯಾಗಿದ್ದಾರೆ. ರಿಷಿ ನಿಷ್ಠೆ ಬ್ರಿಟನ್ಗೆ ಮಾತ್ರ, ಬ್ರಿಟನ್ಗಾಗಿ ಕೆಲಸ ಮಾಡುತ್ತಾರೆ. ರಿಷಿ ಸುನಕ್ಗೆ ಭಾರತ ಬೇರೆ ದೇಶದಂತೆ ಇರುತ್ತದೆ. ಭಾರತಕ್ಕೆ ಏನೋ ಆಗುತ್ತೆ ಎಂದು ಅಂದುಕೊಳ್ಳಬಾರದು. ಭಾರತೀಯನೊಬ್ಬ ಬ್ರಿಟನ್ ಪ್ರಧಾನಿಯಾದ ಎಂದು ಖುಷಿಪಡಬೇಕು ಎಂದು ಹೇಳಿದರು.
ಯುಕೆ ಪ್ರಧಾನಿ ರಿಷಿ ಸುನಕ್ ಯಾರು?, ಭಾರತದೊಂದಿಗೆ ಅವರಿಗಿರುವ ಸಂಬಂಧ ಏನು?
ರಿಷಿ ಸುನಕ್ ಯುನೈಟೆಡ್ ಕಿಂಗ್ಡಮ್ ಪ್ರಜೆಯಾಗಿದ್ದಾರೆ. ನಾವು ಅದನ್ನು ನೋಡಬೇಕು. ನಮಸ್ಕಾರ ಮಾಡಿ ಸುಮ್ಮನಿರಬೇಕು ಎಂದು ಅಭಿಪ್ರಾಯಪಟ್ಟರು.
ಬ್ರಿಟನ್ ಪ್ರಧಾನಿಯಾಗಿ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ರಾಜೀನಾಮೆ ನೀಡಿದ್ದರಿಂದ, ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ನೂತನ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ರಿಷಿ ಸುನಕ್ ಜೊತೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ನಿಂತಿದ್ದ ಪೆನ್ನಿ ಮೊರ್ಡೌಂಟ್ ಸಂಸದರ ಬೆಂಬಲದ ಬಹುಮತ ಸಿಗದೆ, ರೇಸ್ನಿಂದ ಹೊರ ಬಿದ್ದಿದ್ದಾರೆ. ಹೀಗಾಗಿ ರಿಷಿ ಸುನಕ್ 100ಕ್ಕೂ ಹೆಚ್ಚು ಸಂಸದರ ಬೆಂಬಲದೊಂದಿಗೆ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಭಾರತದ ಅಳಿಯ ಬ್ರಿಟನ್ ಪ್ರಧಾನಿಯಾಗಿದ್ದು, ಉಭಯ ದೇಶಗಳ ನಡುವಿನ ಸಂಬಂಧದ ಬಗ್ಗೆ hಲವು ನಿರೀಕ್ಷೆಗಳು ಇವೆ.
Published On - 7:27 pm, Mon, 24 October 22