ವೈ20 ಭಾರತ ಶೃಂಗಸಭೆಯ ಲೊಗೋ ಅನಾವರಣಗೊಳಿಸಿ ವೆಬ್ ಸೈಟ್ ಲಾಂಚ್ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 07, 2023 | 10:51 AM

ಮುಂಬರುವ 3 ದಿನಗಳ ಯುವ-20 ಗ್ರೂಪ್ ಲಾಂಚ್ ಸಭೆಯು ಈ ನಿಟ್ಟಿನಲ್ಲಿ ಮೊಟ್ಟಮೊದಲ ಸಭೆಯಾಗಲಿದ್ದು ಬೇರೆ ಬೇರೆ ರಾಜ್ಯಗಳ ನಾನಾ ವಿಶ್ವವಿದ್ಯಾಲಯಗಳಲ್ಲಿ ಫೆಬ್ರುವರಿ 6 ರಿಂದ ಸಭೆಗಳು ನಡೆಯಲಿವೆ. ಅದಾದ ಬಳಿಕ ವೈ20 ಶೃಂಗಸಭೆ ಆಯೋಜನೆಗೊಳ್ಳಲಿದೆ.

ವೈ20 ಭಾರತ ಶೃಂಗಸಭೆಯ ಲೊಗೋ ಅನಾವರಣಗೊಳಿಸಿ ವೆಬ್ ಸೈಟ್ ಲಾಂಚ್ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್
ಅನುರಾಗ್ ಠಾಕೂರ್, ಕೇಂದ್ರ ಸಚಿವ
Image Credit source: twitter
Follow us on

ನವದೆಹಲಿ: ಶುಕ್ರವಾರ ನವದೆಹಲಿಯಲ್ಲಿ ಯುವ 20 ಭಾರತ ಶೃಂಗಸಭೆ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ಲೋಗೋ (logo) ಮತ್ತು ವೆಬ್‌ಸೈಟ್ ಬಿಡುಗಡೆ ಮಾಡಿ ಮಾತಾಡಿದ ಯುವ ಜನಸೇವೆ ಮತ್ತು ಕ್ರೀಡಾ ಸಚಿವ (Youth Affairs and Sports minister) ಅನುರಾಗ್ ಠಾಕೂರ್ (Anurag Thakur) ಅವರು, ವೈ20 ಭಾರತ ಶೃಂಗಸಭೆಯು ಜಿ20 ದೇಶಗಳ ಭವಿಷ್ಯದ ಪೀಳಿಗೆ ಪ್ರತಿನಿಧಿಗಳನ್ನು ಒಂದುಗೂಡಿಸುತ್ತದೆ; ವಿಶೇಷವಾಗಿ ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರದಲ್ಲಿ ನವೀನ, ಸುಸ್ಥಿರ ಮತ್ತು ಕಾರ್ಯಸಾಧು ಪರಿಹಾರಗಳನ್ನು ಮುಕ್ತವಾಗಿ ಚರ್ಚಿಸಲು ಮತ್ತು ನಿರ್ಣಯಿಸಲು ವೇದಿಕೆ ಒದಗಿಸಲಿದೆ ಎಂದು ಹೇಳಿದರು.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ

‘ನಿಮ್ಮ ದೃಷ್ಟಿಕೋನ, ವಿಚಾರ ಮತ್ತು ಸಲಹೆಗಳನ್ನು ಮಂಡಿಸಲು ಮತ್ತು ಹಂಚಿಕೊಳ್ಳಲು ವೈ20 ಇಂಡಿಯ ಶೃಂಗಸಭೆ ಒಂದು ಅಪೂರ್ವವಾದ ಅವಕಾಶವನ್ನು ಒದಗಿಸಲಿದೆ. ನಿಮ್ಮ ವಿಚಾರಧಾರೆ, ಸಲಹೆಗಳನ್ನು ಜಿ20 ನಾಯಕರ ಮುಂದಿಡಲಾಗುವುದು. ಇವತ್ತಿನ ಎಲ್ಲಾ ಆಯಾಮಗಳಲ್ಲಿ ನಾಡಿನ ಯುವಕರು ಪಾಲುದಾರರಾಗಿದ್ದಾರೆ ಮತ್ತು ನಾಳಿನ ರಾಷ್ಟ್ರನಿರ್ಮಾಣಿಕರಾಗಿದ್ದಾರೆ. ಯುವಕರು ಮುಂದೆ ಸಾಧಿಸಲಿರುವುದು ಇಲ್ಲಿ ಮೂರ್ತರೂಪಗೊಳ್ಳಲಿದೆ,’ ಎಂದು ಠಾಕೂರ್ ಹೇಳಿದರು.

ನೈಜ್ಯಸ್ಥಿತಿಯನ್ನು ಅರ್ಥಮಾಡಿಕೊಳ್ಣಬೇಕಿದೆ

‘ನಮ್ಮ ದೇಶ ವೈವಿಧ್ಯಮಯ ಮತ್ತು ಪ್ರಜಾತಂತ್ರ ಒಕ್ಕೂಟವಾಗಿದ್ದು ಜನ ದೇಶದ ನಾನಾ ಭಾಗಗಳಲ್ಲಿ ವಾಸವಾಗಿದ್ದಾರೆ. ಎಲ್ಲರೂ ಸಾಮಾಜಿಕ, ಆರ್ಥಿಕ, ಪರಿಸರ ಮತ್ತು ತಾಂತ್ರಿಕ ಉನ್ನತಿ ಮತ್ತು ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ,’ ಎಂದು ಸಚಿವರು ಹೇಳಿದರು.
‘ಬದಲಾಗುತ್ತಿರುವ ಇಂದಿನ ಯುಗದಲ್ಲಿ ನಮ್ಮ ಉಳಿವು ಮತ್ತು ಪ್ರಗತಿಗಾಗಿ ವೈ20 ಶೃಂಗಸಭೆಯ ಪ್ರಾಶಸ್ತ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶ್ವವು ನೈಜ್ಯಸ್ಥಿತಿಯನ್ನು ಅರ್ಥಮಾಡಿಕೊಂಡು ಅದರೊಂದಿಗೆ ಏಗಬೇಕಿದೆ. ನಾವು ಮುಂದೆಸಾಗಿ ವಿಕಸನ ಹೊಂದಲು ಯುವಕರು ಹಾಗೂ ಮತ್ತು ವಿಶ್ವಕ್ಕೆ ಒಂದು ಅಮೋಘವಾದ ಅವಕಾಶವನ್ನು ಈ ಶೃಂಗಸಭೆ ಕಲ್ಪಿಸುತ್ತದೆ,’ ಎಂದು ಅನುರಾಗ್ ಠಾಕೂರ್ ಹೇಳಿದರು.

ಇದನ್ನೂ ಓದಿ: Foreign Universities: ಭಾರತದಲ್ಲಿ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಒಂದು ಹೆಜ್ಜೆ ಮುಂದಿಟ್ಟ ಪ್ರಧಾನಿ ಮೋದಿ 

ಮುಂಬರುವ 3 ದಿನಗಳ ಯುವ-20 ಗ್ರೂಪ್ ಲಾಂಚ್ ಸಭೆಯು ಈ ನಿಟ್ಟಿನಲ್ಲಿ ಮೊಟ್ಟಮೊದಲ ಸಭೆಯಾಗಲಿದ್ದು ಬೇರೆ ಬೇರೆ ರಾಜ್ಯಗಳ ನಾನಾ ವಿಶ್ವವಿದ್ಯಾಲಯಗಳಲ್ಲಿ ಫೆಬ್ರುವರಿ 6 ರಿಂದ ಸಭೆಗಳು ನಡೆಯಲಿವೆ. ಅದಾದ ಬಳಿಕ ವೈ20 ಶೃಂಗಸಭೆ ಆಯೋಜನೆಗೊಳ್ಳಲಿದೆ.

ಯುವಕರ ಪಾಲುದಾರಿಕೆ ಅತ್ಯವಶ್ಯಕವಾಗಿದೆ

ಇದಕ್ಕೂ ಮೊದಲು ಕೇಂದ್ರ ಸಚಿವರು ಐಐಟಿ ಗುವಹಾಟಿ ಮತ್ತ್ತು ಸಂಕರದೇವ್ ಕಲಾಕ್ಷೇತ್ರ ಸೇರಿದಂತೆ ವೈ20 ಕಾರ್ಯಕ್ರಮಗಳು ನಡೆಯಲಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರಗಳು, ಸಂಭವನೀಯ ಪಾಲುದಾರರು ಮತ್ತು ಅಧಿಕಾರಗಳೊಂದಿಗೆ ಮಾತುಕತೆ ನಡೆಸಿದರು. ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಚಿವರೂ ಆಗಿರುವ ಠಾಕೂರ್ ಕಾರ್ಯಕ್ರಮಗಳಲ್ಲಿ ಯುವಕರ ಪಾಲುದಾರಿಕೆ ಅತ್ಯವಶ್ಯವಾಗಿದೆ ಎನ್ನುವುದನ್ನು ಒತ್ತಿ ಹೇಳಿದರು. ಸಭೆಗಳಲ್ಲಿ ಸಂಸ್ಕೃತಿ ಮತ್ತು ಪರಂಪರೆಗಳ ವಿನಿಮಯದ ಜೊತೆಗೆ ಯುದ್ಧವಲಯಗಳಲ್ಲಿ ಶಾಂತಿ ಪ್ರಕ್ರಿಯೆ ಆರಂಭಿಸುವ ಮತ್ತು ಇತರ ಮಹತ್ವದ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ಹೇಳಿದರು.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ