ಕೃತ್ಯ ರಾವಣನಂತೆ, ಅವರು ಭಗವದ್ಗೀತೆ ಬಗ್ಗೆ ಮಾತನಾಡುತ್ತಾರೆ: ಮನೀಶ್ ಸಿಸೋಡಿಯಾ

| Updated By: ರಶ್ಮಿ ಕಲ್ಲಕಟ್ಟ

Updated on: Mar 18, 2022 | 5:56 PM

ಖಂಡಿತವಾಗಿಯೂ ಇದು ಉತ್ತಮ ಹೆಜ್ಜೆ. ಆದರೆ ಅದನ್ನು ಪರಿಚಯಿಸುವ ಜನರು ಮೊದಲು ಗೀತೆಯ ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗಿದೆ. ಕೃತ್ಯ ರಾವಣನಂತೆ, ಅವರು ಅವರು ಗೀತೆಯ ಬಗ್ಗೆ ಮಾತನಾಡುತ್ತಾರೆ ಎಂದು ಸಿಸೋಡಿಯಾ ಲೇವಡಿ ಮಾಡಿದ್ದಾರೆ.

ಕೃತ್ಯ ರಾವಣನಂತೆ, ಅವರು ಭಗವದ್ಗೀತೆ ಬಗ್ಗೆ ಮಾತನಾಡುತ್ತಾರೆ: ಮನೀಶ್ ಸಿಸೋಡಿಯಾ
ಮನೀಷ್ ಸಿಸೋಡಿಯಾ
Follow us on

ದೆಹಲಿ: ಗುಜರಾತ್ ಸರ್ಕಾರವು 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು  ಸೇರಿಸುವ ಬಗ್ಗೆ ಘೋಷಿಸಿದ ಒಂದು ದಿನದ ನಂತರ, ದೆಹಲಿ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ (Manish Sisodia) ಗುರುವಾರ ಗುಜರಾತ್ (Gujarat)  ರಾಜ್ಯ ಸಚಿವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. “ಖಂಡಿತವಾಗಿಯೂ ಇದು ಉತ್ತಮ ಹೆಜ್ಜೆ. ಆದರೆ ಅದನ್ನು ಪರಿಚಯಿಸುವ ಜನರು ಮೊದಲು ಗೀತೆಯ ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗಿದೆ. ಕೃತ್ಯ ರಾವಣನಂತೆ, ಅವರು ಅವರು ಗೀತೆಯ ಬಗ್ಗೆ ಮಾತನಾಡುತ್ತಾರೆ ಎಂದು ಸಿಸೋಡಿಯಾ ಲೇವಡಿ ಮಾಡಿದ್ದಾರೆ.  2022-23ರ ಶೈಕ್ಷಣಿಕ ವರ್ಷದಿಂದ ಗುಜರಾತ್‌ನಲ್ಲಿ 6 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಗುರುವಾರ ಹೇಳಿದ್ದಾರೆ. ಸಿಸೋಡಿಯಾ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಹೋಳಿ ಆಚರಿಸಿದ್ದಾರೆ. “ದೇಶದ ಎಲ್ಲಾ ಜನರಿಗೆ ನಾನು ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ವಾಸ್ತವವು ಕೇವಲ ಒಂದಲ್ಲ ಆದರೆ ಎಲ್ಲಾ ಬಣ್ಣಗಳಲ್ಲಿ ಅಡಗಿದೆ ಎಂಬುದನ್ನು ಹೋಳಿ ನಮಗೆ ಕಲಿಸುತ್ತದೆ” ಎಂದು ಅವರು ಹೇಳಿದರು.

ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಅವರು 2022/23 ಶೈಕ್ಷಣಿಕ ವರ್ಷದಿಂದ 6 ನೇ ತರಗತಿಯಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಗೀತಾ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಹೇಳಿದರು. ಶ್ರೀಮದ್ ಭಗವದ್ಗೀತೆಯ ಮೌಲ್ಯಗಳು, ತತ್ವಗಳು ಮತ್ತು ಮಹತ್ವವನ್ನು ಎಲ್ಲಾ ಧರ್ಮದ ಜನರು ಒಪ್ಪಿಕೊಂಡಿದ್ದಾರೆ, 6 ನೇ ತರಗತಿಯಲ್ಲಿ ಶ್ರೀಮದ್ ಭಗವದ್ಗೀತೆಯಲ್ಲಿ ಆಸಕ್ತಿಯನ್ನು ಬೆಳೆಸುವ ರೀತಿಯಲ್ಲಿ ಶ್ರೀಮದ್ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಭಗವದ್ಗೀತೆಯನ್ನು ಕಥೆಗಳ ರೂಪದಲ್ಲಿ ಮತ್ತು ಪಠ್ಯಪುಸ್ತಕಗಳಲ್ಲಿ ಬೋಧಿಸಲಾಗುವುದು ವಿವರಿಸಲಾಗಿದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಆಳವಾದ ಪರಿಚಯವನ್ನು ನೀಡಲಾಗುವುದು ಎಂದು ಅದು ತಿಳಿಸಿದೆ.

ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ‘ತಜ್ಞರು’ ಅನುಮೋದಿಸಿದರೆ ದಕ್ಷಿಣ ರಾಜ್ಯದಲ್ಲೂ ಗೀತೆಯನ್ನು ಪರಿಚಯಿಸಲಾಗುವುದು ಎಂದು ಹೇಳಿದರು. ಕರ್ನಾಟಕದಲ್ಲೂ ಬಿಜೆಪಿ ಸರ್ಕಾರವಿದೆ. “ಭಗವದ್ಗೀತೆ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸಂಬಂಧಿಸಿದ್ದು. ತಜ್ಞರು ಹೇಳಿದರೆ, ಅದನ್ನು ಖಂಡಿತವಾಗಿ ಪರಿಚಯಿಸಲಾಗುವುದು. ಆದರೆ, ಇದನ್ನು ಈ ವರ್ಷಕ್ಕೆ ಮಾಡಲಾಗುವುದಿಲ್ಲ, ಆದರೆ ಮುಂದಿನ ವರ್ಷದಿಂದ ಮಾಡಲಾಗುವುದು ಎಂದು ನಾಗೇಶ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: Bhagavad Gita: 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ; ಗುಜರಾತ್​ ಸರ್ಕಾರ ಆದೇಶ

Published On - 5:43 pm, Fri, 18 March 22