Kannada News National Bank Holidays in April 2021: ಕರ್ನಾಟಕದಲ್ಲಿ ಬ್ಯಾಂಕ್ಗಳಿಗೆ ಏಪ್ರಿಲ್ನಲ್ಲಿ 9 ದಿನ ರಜಾ; ಯಾವ್ಯಾವಾಗ?.. ಪಟ್ಟಿ ಇಲ್ಲಿದೆ ನೋಡಿ
Bank Holidays in April 2021: ಕರ್ನಾಟಕದಲ್ಲಿ ಬ್ಯಾಂಕ್ಗಳಿಗೆ ಏಪ್ರಿಲ್ನಲ್ಲಿ 9 ದಿನ ರಜಾ; ಯಾವ್ಯಾವಾಗ?.. ಪಟ್ಟಿ ಇಲ್ಲಿದೆ ನೋಡಿ
ಕರ್ನಾಟಕದಲ್ಲಿ ಇಂದೂ ಕೂಡ ಬ್ಯಾಂಕ್ಗಳಿಗೆ ವಾರ್ಷಿಕ ವ್ಯವಹಾರ ಕ್ಲೋಸ್ ದಿನದ ನಿಮಿತ್ತ ರಜಾ ಇತ್ತು. ಇನ್ನು ನಾಲ್ಕು ಭಾನುವಾರಗಳಿವೆ. ಉಳಿದಂತೆ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿಗಳ ನಿಮಿತ್ತ ರಜಾ ಇರಲಿದೆ.
ವಿವಿಧ ಹಬ್ಬ-ಆಚರಣೆಗಳ ನಿಮಿತ್ತ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ಗಳಿಗೆ ಭರ್ಜರಿ ರಜಾದಿನಗಳಿವೆ. ಒಟ್ಟು 15ದಿನ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಈ ಹದಿನೈದೂ ದಿನಗಳು ದೇಶದ ಎಲ್ಲ ಭಾಗಗಳಲ್ಲೂ ಅನ್ವಯ ಆಗುವುದಿಲ್ಲ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ನಲ್ಲಿ ಒಟ್ಟು 9 ರಜಾದಿನಗಳಿವೆ. ಇಂದೂ ಕೂಡ ವಾರ್ಷಿಕ ವ್ಯವಹಾರ ಕ್ಲೋಸ್ ದಿನದ ನಿಮಿತ್ತ ರಜಾ ಇತ್ತು. ಇನ್ನು ನಾಲ್ಕು ಭಾನುವಾರಗಳಿವೆ. ಉಳಿದಂತೆ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿಗಳ ನಿಮಿತ್ತ ರಜಾ ಇರಲಿದೆ. ಇಲ್ಲಿದೆ ನೋಡಿ, ಕರ್ನಾಟಕದಲ್ಲಿ ಬ್ಯಾಂಕ್ಗಳಿಗೆ ಏಪ್ರಿಲ್ನಲ್ಲಿ ಇರುವ ರಜಾದಿನಗಳ ಸಮಗ್ರ ವಿವರ..
ಏಪ್ರಿಲ್ 2, ಶುಕ್ರವಾರ- ಗುಡ್ ಫ್ರೈಡೇ: ಯೇಸುಕ್ರಿಸ್ತ ಶಿಲುಬೆಗೆ ಏರಿದ ದಿನದ ಸ್ಮರಣಾರ್ಥ ಈ ಹಬ್ಬವನ್ನು ಕ್ರಿಶ್ಚಿಯನ್ ಸಮುದಾಯದವರು ಆಚರಿಸುತ್ತಾರೆ. ಪ್ರತಿವರ್ಷವೂ ಗುಡ್ ಫ್ರೈಡೇ ದಿನ ರಾಷ್ಟ್ರಾದ್ಯಂತ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಕರ್ನಾಟಕದಲ್ಲೂ ಸಹ ನಾಳೆ (ಏಪ್ರಿಲ್ 2) ಬ್ಯಾಂಕ್ಗಳಿಗೆ ರಜಾ ಇರುತ್ತದೆ.
ಏಪ್ರಿಲ್ 4, ಭಾನುವಾರ
ಏಪ್ರಿಲ್ 10, ಎರಡನೇ ಶನಿವಾರದ ರಜಾ
ಏಪ್ರಿಲ್ 11, ಭಾನುವಾರ
ಏಪ್ರಿಲ್ 13, ಮಂಗಳವಾರ-ಯುಗಾದಿ: ಏಪ್ರಿಲ್ 13ರಂದು ಯುಗಾದಿ ನಿಮಿತ್ತ ರಾಜ್ಯದಲ್ಲಿ ಯಾವ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ. ಹಿಂದುಗಳ ಹೊಸವರ್ಷದ ಹಬ್ಬ ಇದಾಗಿದ್ದು, ಚೈತ್ರ ಮಾಸದ ಮೊದಲ ದಿನವಾಗಿದೆ. ಈ ಹಬ್ಬದಂದು ಜನರು ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡುತ್ತಾರೆ. ಮನೆಗೆಲ್ಲ ತೋರಣ ಕಟ್ಟಿ, ಹೊಸ ಬಟ್ಟೆ ತೊಟ್ಟು, ಸಿಹಿ ಹೋಳಿಗೆ ಮಾಡಿ ಹಬ್ಬದೂಟ ಮಾಡುತ್ತಾರೆ.
ಏಪ್ರಿಲ್ 14, ಬುಧವಾರ-ಅಂಬೇಡ್ಕರ್ ಜಯಂತಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹುಟ್ಟಿದ ದಿನದ ನಿಮಿತ್ತ ರಾಷ್ಟ್ರಾದ್ಯಂತ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಕರ್ನಾಟಕದಲ್ಲೂ ಸಹ ಎಲ್ಲ ಬ್ಯಾಂಕ್ಗಳಿಗೂ ರಜಾ.
ಏಪ್ರಿಲ್ 18, ಭಾನುವಾರ
ಏಪ್ರಿಲ್ 24, ನಾಲ್ಕನೇ ಶನಿವಾರದ ರಜಾ
ಏಪ್ರಿಲ್ 25, ಭಾನುವಾರ: ಈ ದಿನ ಭಾನುವಾರದ ರಜಾವೂ ಹೌದು, ಮಹಾವೀರ ಜಯಂತಿ ನಿಮಿತ್ತದ ರಜೆಯೂ ಹೌದು.