AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays In April 2021: ವ್ಯವಹಾರಕ್ಕೆ ಹೋಗುವ ಮುನ್ನ ಗ್ರಾಹಕರೇ ಗಮನಿಸಿ- ಏಪ್ರಿಲ್​ನಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜಾ..

ಏಪ್ರಿಲ್​ನಲ್ಲಿ ಒಟ್ಟು 15ದಿನ ರಜಾ ಇದ್ದರೂ, ಎಲ್ಲ ರಾಜ್ಯಗಳಲ್ಲೂ ಇದು ಅನ್ವಯ ಆಗುವುದಿಲ್ಲ. ನಾಳೆ ಏಪ್ರಿಲ್ 1ರಂದು ಹಣಕಾಸು ವರ್ಷದ ಪ್ರಾರಂಭವಾಗಿದ್ದು ದೇಶಾದ್ಯಂತ ಎಲ್ಲ ಬ್ಯಾಂಕ್​ಗಳಿಗೂ ರಜಾ. ಹಾಗೇ ಏಪ್ರಿಲ್​ 2 ಗುಡ್​ಫ್ರೈಡೇ ನಿಮಿತ್ತ ಯಾವ ಬ್ಯಾಂಕ್​ಗಳೂ ಕಾರ್ಯ ನಿರ್ವಹಿಸುವುದಿಲ್ಲ.

Bank Holidays In April 2021: ವ್ಯವಹಾರಕ್ಕೆ ಹೋಗುವ ಮುನ್ನ ಗ್ರಾಹಕರೇ ಗಮನಿಸಿ- ಏಪ್ರಿಲ್​ನಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜಾ..
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Mar 31, 2021 | 12:32 PM

Share

ಪ್ರತಿವರ್ಷವೂ ಆರ್​ಬಿಐ ದೇಶದ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್​ಗಳ ರಜಾದಿನದ ಕ್ಯಾಲೆಂಡರ್​ನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಹೊಸ ಹಣಕಾಸು ವರ್ಷವಾದ ಏಪ್ರಿಲ್​​​ನಲ್ಲಿ ಒಟ್ಟಾರೆ 15 ದಿನ ಬ್ಯಾಂಕ್​ಗಳಿಗೆ ರಜಾ ಇರಲಿದೆ. ಈ ತಿಂಗಳಲ್ಲಿ ರಾಮನವಮಿ, ಗುಡ್​ ಫ್ರೈಡೇ, ಬಿಹು ಹಬ್ಬ, ಅಂಬೇಡ್ಕರ್ ಜಯಂತಿ ಸೇರಿ ಹಲವು ಹಬ್ಬ-ಆಚರಣೆಗಳು ಇರುವುದರಿಂದ ದೇಶಾದ್ಯಂತ ರಜೆ ತುಸು ಜಾಸ್ತಿಯೇ ಇದೆ. ಇನ್ನು ಇದರೊಂದಿಗೆ ಎರಡನೇ, ನಾಲ್ಕನೇ ಶನಿವಾರ, ಭಾನುವಾರಗಳೂ ಸೇರಿಕೊಂಡಿವೆ.

ಏಪ್ರಿಲ್​ನಲ್ಲಿ ಒಟ್ಟು 15ದಿನ ರಜಾ ಇದ್ದರೂ, ಎಲ್ಲ ರಾಜ್ಯಗಳಲ್ಲೂ ಇದು ಅನ್ವಯ ಆಗುವುದಿಲ್ಲ. ನಾಳೆ ಏಪ್ರಿಲ್ 1ರಂದು ಹಣಕಾಸು ವರ್ಷದ ಪ್ರಾರಂಭವಾಗಿದ್ದು ದೇಶಾದ್ಯಂತ ಎಲ್ಲ ಬ್ಯಾಂಕ್​ಗಳಿಗೂ ರಜಾ. ಹಾಗೇ ಏಪ್ರಿಲ್​ 2 ಗುಡ್​ಫ್ರೈಡೇ ನಿಮಿತ್ತ ಯಾವ ಬ್ಯಾಂಕ್​ಗಳೂ ಕಾರ್ಯ ನಿರ್ವಹಿಸುವುದಿಲ್ಲ. ಅದಾದ ಬಳಿಕ ಆಸ್ಸಾಂನಲ್ಲಿ ಏಪ್ರಿಲ್​ 14ರಿಂದ 16ರವರೆಗೆ ಅವರ ಬಿಹು ಹಬ್ಬದ ನಿಮಿತ್ತ ಬ್ಯಾಂಕ್​ಗಳಿಗೆ ರಜಾ ಇದ್ದು, ಉಳಿದ ರಾಜ್ಯಗಳಿಗೆ ಇದು ಅನ್ವಯ ಆಗುವುದಿಲ್ಲ.

ಇನ್ನು ಗ್ರಾಹಕರ ಅನುಕೂಲಕ್ಕಾಗಿ ನಾವಿಲ್ಲಿ ಏಪ್ರಿಲ್​ ತಿಂಗಳಲ್ಲಿ ಯಾವ್ಯಾವಾಗ ರಜಾ ಎಂಬ ಪಟ್ಟಿಯನ್ನು ನೀಡಿದ್ದೇವೆ. ಒಮ್ಮೆ ನೋಡಿಕೊಳ್ಳಿ:

  • ಏಪ್ರಿಲ್​ 1-ಬ್ಯಾಂಕ್​ಗಳ ವಾರ್ಷಿಕ ವ್ಯವಹಾರ ಮುಕ್ತಾಯದ ದಿನ (ಎಲ್ಲ ಬ್ಯಾಂಕ್​ಗಳಿಗೂ ರಜಾ)
  • ಏಪ್ರಿಲ್​ 2- ಗುಡ್ ಫ್ರೈಡೇ (ದೇಶಾದ್ಯಂತ ಯಾವ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವುದಿಲ್ಲ)
  • ಏಪ್ರಿಲ್​ 4- ಭಾನುವಾರ
  • ಏಪ್ರಿಲ್​ 5 -ಬಾಬು ಜಗಜೀವನ್ ರಾಮ್​ ಜಯಂತಿ (ದೇಶದ ಎಲ್ಲ ಬ್ಯಾಂಕ್​ಗಳಿಗೂ ರಜಾ)
  • ಏಪ್ರಿಲ್​ 6-ತಮಿಳುನಾಡಿನ ವಿಧಾನಸಭಾ ಚುನಾವಣೆ (ಚುನಾವಣೆಗೆ ಸಂಬಂಧಪಟ್ಟ ರಾಜ್ಯಗಳಲ್ಲಿ ಮಾತ್ರ)
  • ಏಪ್ರಿಲ್​ 10-ಎರಡನೇ ಶನಿವಾರ
  • ಏಪ್ರಿಲ್​ 11-ಭಾನುವಾರ
  • ಏಪ್ರಿಲ್​ 13-ಯುಗಾದಿ/ ಗುಡಿ ಪಡ್ವಾ/ ತೆಲುಗು ಹೊಸ ವರ್ಷ/ ( ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ.
  • ಏಪ್ರಿಲ್​ 14-ಡಾ. ಬಾಬಾ ಸಾಹೇಬ್​ ಅಂಬೇಡ್ಕರ್ ಜಯಂತಿ/ ತಮಿಳು ಹೊಸವರ್ಷ, ವಿಶು, ಬಿಜು, ಬೋಹಾಗ್​ ಬಿಹು (ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜಾ)
  • ಏಪ್ರಿಲ್​ 15- ಹಿಮಾಚಲ್ ಡೇ/ ಬೆಂಗಾಳಿ ಹೊಸ ವರ್ಷ/ ಬೋಹಾಗ್​ ಬಿಹು/ ಸರ್​ಹುಲ್​ (ಹಬ್ಬಗಳಿರುವ ರಾಜ್ಯಗಳಲ್ಲಿ ಮಾತ್ರ ಬ್ಯಾಂಕ್​ ರಜಾ
  • ಏಪ್ರಿಲ್​ 16- ಬೋಹಾಗ್​ ಬಿಹು (ಆಸ್ಸಾಂನಲ್ಲಿ ರಜಾ)
  • ಏಪ್ರಿಲ್​ 18-ಭಾನುವಾರ
  • ಏಪ್ರಿಲ್ 21- ಶ್ರೀರಾಮ ನವಮಿ (ದೇಶದ ಯಾವುದೇ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ)
  • ಏಪ್ರಿಲ್​ 24-ನಾಲ್ಕನೇ ಶನಿವಾರ
  • ಏಪ್ರಿಲ್​ 25- ಭಾನುವಾರ

ಇದನ್ನೂ ಓದಿ: ಸಿಎಂ ನಿವಾಸ ಕಾವೇರಿ ಬಳಿ ಅಪಘಾತ; ಮಹಿಳಾ ಸಬ್​ಇನ್ಸ್​ಪೆಕ್ಟರ್​ಗೆ ಡಿಕ್ಕಿ ಹೊಡೆದ ಕಾರು

Rakshita Prem: ‘ನಿಮ್ಮಂತಹ ಸ್ನೇಹಿತರು ಒಮ್ಮೆ ಮಾತ್ರ ಬರುತ್ತಾರೆ’: ರಕ್ಷಿತಾ ಜನ್ಮದಿನಕ್ಕೆ ದರ್ಶನ್​ ವಿಶೇಷ ಮಾತು!

Published On - 11:53 am, Wed, 31 March 21

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ