Petrol Price Today: ಪ್ರಯಾಣಿಕರ ಗಮನಕ್ಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ!
Petrol Diesel Price Today in Bengaluru: ಮಂಗಳವಾರ ಪೆಟ್ರೋಲ್, ಡೀಸೆಲ್ ದರ ಇಳಿಕೆಯ ನಂತರ ಇಂದು ಬುಧವಾರ ಇಂಧನ ದರದಲ್ಲಿ ಬದಲಾವಣೆಗಳಿಲ್ಲ. ಪೆಟ್ರೋಲ್, ಡೀಸೆಲ್ ಮಾರುಕಟ್ಟೆಯಲ್ಲಿ ಯಾವ ದರ ಕಾಯ್ದಿರಿಸಿಕೊಂಡಿದೆ ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ನಿನ್ನೆ(ಮಾರ್ಚ್30)ರಂದು ಪೆಟ್ರೋಲ್, ಡೀಸೆಲ್ ಇಳಿಕೆಯ ನಂತರ ಇಂದು ಬುಧವಾರ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮಂಗಳವಾರ, ಕಚ್ಚಾ ತೈಲದ ಬೆಲೆ ಕಡಿತದಿಂದಾಗಿ ದೇಶಾದ್ಯಂತ ಇಂಧನ ದರ ಇಳಿಕೆ ಕಂಡಿತು. ಮಂಗಳವಾರಕ್ಕಿಂತ ಮೊದಲು ಸತತ ನಾಲ್ಕು ದಿನಗಳ ಕಾಲ ಇಂಧನ ದರ ಸ್ಥಿರತೆಯನ್ನು ಕಾಪಾಡಿಕೊಂಡಿತ್ತು. ಬುಧವಾರದ ಮಾಹಿತಿ ಪ್ರಕಾರ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ 90.56 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ 87.96 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಅನ್ನು ಗ್ರಾಹಕರು 93.59 ರೂಪಾಯಿಗೆ ಹಾಗೂ ಪ್ರತಿ ಲೀಟರ್ ಡೀಸೆಲ್ಅನ್ನು 85.75 ರೂಪಾಯಿಗೆ ಕೊಳ್ಳುತ್ತಿದ್ದಾರೆ.
ಇನ್ನು, ಮುಂಬೈನಲ್ಲಿ ಇಂಧನ ದರವನ್ನು ಗಮನಿಸಿದಾಗ ಪ್ರತಿ ಲೀಟರ್ ಪೆಟ್ರೋಲ್ ದರ 99.98 ಮತ್ತು ಪ್ರತಿ ಲೀಟರ್ ಡೀಸೆಲ್ ದರ 87.96 ರೂಪಾಯಿ ಇದೆ. ಮಾರಚ್ ತಿಂಗಳ ಪ್ರಾರಂಭದಿಂದ ಮಾರ್ಚ್ 25ನೇ ತಾರೀಕಿನವರೆಗೆ ಪೆಟ್ರೋಲ್, ಡೀಸೆಲ್ ದರ ಬದಲಾಗದೇ ಸ್ಥಿರತೆ ಕಾಪಾಡಿಕೊಂಡಿತ್ತು. ದರ ಇಳಿಕೆಯತ್ತ ಸಾಗುವುದು ಯಾವಾಗ ಎಂಬುದು ಗ್ರಾಹಕರ ಮುಂದಿದ್ದ ಪ್ರಶ್ನೆಯಾಗಿತ್ತು.
ತದನಂತರ ಮಾರ್ಚ್ 25ನೇ ತಾರೀಕಿನಂದು ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿದ್ದು ಗ್ರಾಹಕರಿಗೆ ನೆಮ್ಮದಿ ತಂದುಕೊಟ್ಟಿತು. ಆಗ ಪ್ರತಿ ಲೀಟರ್ ಪೆಟ್ರೋಲ್ ದರ 21 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 20 ಪೈಸೆ ಇಳಿಕೆ ಕಂಡಿತು. ಸರಕುಗಳ ಶುಲ್ಕಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸುವ ತೆರಿಗೆಯಿಂದಾಗಿ ಇಂಧನ ದರ ಬದಲಾಗುತ್ತದೆ. ಅಂತರಾಷ್ಟ್ರೀಯ ದರ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪ್ರತಿದಿನವೂ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲಾಗುತ್ತದೆ.
ನಗರ ಪೆಟ್ರೋಲ್ ದರ (ಪ್ರತಿ ಲೀಟರ್) ಡೀಸೆಲ್ ದರ (ಪ್ರತಿ ಲೀಟರ್)
ದೆಹಲಿ 90.56 80.87 ಮುಂಬೈ 96.98 87.96 ಕೋಲ್ಕತ್ತಾ 90.77 83.75 ಚೆನ್ನೈ 92.58 85.88 ಬೆಂಗಳೂರು 93.59 85.75 ಹೈದರಾಬಾದ್ 94.16 88.20 ಭೂಪಾಲ್ 98.58 89.13 ಪಾಟ್ನಾ 92.89 86.12 ಲಕ್ನೋ 92.89 86.12 ನೋಯ್ಡಾ 88.91 81.33
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
Published On - 9:26 am, Wed, 31 March 21