India Covid-19 Update: ಮಹಾರಾಷ್ಟ್ರದಲ್ಲಿ ಇಂದು 27,918 ಮಂದಿಗೆ ಕೊರೊನಾ ದೃಢ; ನೆರೆಯ ರಾಜ್ಯಗಳ ಕೊವಿಡ್ ಮಾಹಿತಿ ಇಲ್ಲಿದೆ
ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ಕೆಲವು ಜಿಲ್ಲೆಗಳು, ಬೆಂಗಳೂರಿನಲ್ಲೂ ಕೊರೊನಾ ಕೇಸ್ಗಳು ಹೆಚ್ಚಾಗಿವೆ. ದೇಶದ ಪ್ರಮುಖ ರಾಜ್ಯಗಳು ಹಾಗೂ ನಮ್ಮ ನೆರೆಯ ರಾಜ್ಯಗಳ ಇಂದಿನ (ಮಾರ್ಚ್ 30) ಕೊವಿಡ್-19 ಮಾಹಿತಿ ಇಲ್ಲಿದೆ.
ದೆಹಲಿ: ಕಳೆದ ವರ್ಷ ಅಂದಾಜು ಇದೇ ಅವಧಿಯಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದವು. ಲಾಕ್ಡೌನ್ ಕೂಡ ಜಾರಿಯಾಗಿತ್ತು. ಆ ಬಳಿಕ ಕೊರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆಯೂ ಆಗಿತ್ತು. ಜನಸಾಮಾನ್ಯರು ಸಹಜ ಬದುಕಿಗೆ ಮರಳಿ ಇನ್ನೇನು ಜನಜೀವನ ಚೇತರಿಕೆ ಕಾಣಬೇಕು ಎಂಬಷ್ಟರಲ್ಲಿ ಮತ್ತೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ಕೆಲವು ಜಿಲ್ಲೆಗಳು, ಬೆಂಗಳೂರಿನಲ್ಲೂ ಕೊರೊನಾ ಕೇಸ್ಗಳು ಹೆಚ್ಚಾಗಿವೆ. ದೇಶದ ಪ್ರಮುಖ ರಾಜ್ಯಗಳು ಹಾಗೂ ನಮ್ಮ ನೆರೆಯ ರಾಜ್ಯಗಳ ಇಂದಿನ (ಮಾರ್ಚ್ 30) ಕೊವಿಡ್-19 ಮಾಹಿತಿ ಇಲ್ಲಿದೆ.
ದೇಶದಲ್ಲಿ ಇಂದು 56,211 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. 37,028 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ 271 ಸಾವು ಸಂಭವಿಸಿದೆ. ಈ ಮೂಲಕ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,20,95,855 ಆಗಿದೆ. ಆ ಪೈಕಿ 1,13,93,021 ಜನರು ಗುಣಮುಖರಾಗಿದ್ದಾರೆ. ಸದ್ಯ 5,40,720 ಪ್ರಕರಣಗಳು ಸಕ್ರಿಯವಾಗಿದ್ದು, 6,11,13,354 ಮಂದಿಗೆ ಲಸಿಕೆ ನೀಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 992 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತನ್ಮೂಲಕ ಕೊರೊನಾ ಪೀಡಿತರ ಸಂಖ್ಯೆ 6,60,611ಕ್ಕೆ ಏರಿಕೆಯಾಗಿದೆ. ಆ ಪೈಕಿ 6,42,166 ಜನ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,591 ಸೋಂಕಿತರು ಗುಣಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ ಸೋಂಕಿಗೆ 4 ಜನ ಬಲಿಯಾಗಿದ್ದು, ಈವರೆಗೆ ಕೊರೊನಾದಿಂದ 11,016 ಜನ ಸಾವು ಸಂಭವಿಸಿದೆ. 7,429 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ನೆರೆಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೇಗಿವೆ? ಮಹಾರಾಷ್ಟ್ರದಲ್ಲಿ ಇಂದು 27,918 ಜನರಿಗೆ ಕೊರೊನಾ ದೃಢವಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಕಂಡುಬರುತ್ತಿದೆ. ಈ ಮೂಲಕ, ಸೋಂಕಿತರ ಸಂಖ್ಯೆ 27,73,436ಕ್ಕೆ ಏರಿಕೆಯಾಗಿದೆ. ಅದರಲ್ಲಿ 23,77,127 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 23,820 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಇಂದು ಕೊರೊನಾ ಸೋಂಕಿಗೆ 139 ಜನರು ಬಲಿಯಾಗಿದ್ದು, ಇದುವರೆಗೆ ಕೊರೊನಾ ಸೋಂಕಿನಿಂದ 54,422 ಜನರ ಸಾವು ಸಂಭವಿಸಿದೆ. 3,40,542 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಕೊರೊನಾ ಸ್ಫೋಟ ಕಂಡುಬಂದ ಮತ್ತೊಂದು ರಾಜ್ಯ ಕೇರಳದಲ್ಲಿ ಇಂದು 2,389 ಜನರಿಗೆ ಕೊರೊನಾ ದೃಢವಾಗಿದೆ. ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 1,946 ಜನ ಗುಣಮುಖರಾಗಿದ್ದಾರೆ. ಆ ಮೂಲಕ, ಈವರೆಗೆ 10,92,365 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 16 ಜನರ ಸಾವು ಸಂಭವಿಸಿದೆ. ಈವರೆಗೆ ಕೊರೊನಾ ಸೋಂಕಿಗೆ 4,606 ಜನ ಬಲಿಯಾಗಿದ್ದಾರೆ.
ತಮಿಳುನಾಡು ರಾಜ್ಯದಲ್ಲಿ 2,342 ಜನರಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 8,84,094ಕ್ಕೆ ಏರಿಕೆಯಾಗಿದೆ. ಆ ಪೈಕಿ 8,56,548 ಜನ ಗುಣಮುಖರಾಗಿದ್ದಾರೆ. ಇಂದು 1,463 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಕೊರೊನಾ ಸೋಂಕಿಗೆ 16 ಜನರ ಬಲಿಯಾಗಿದ್ದು, ಈವರೆಗೆ ಕೊರೊನಾಗೆ 12,700 ಜನ ಸಾವನ್ನಪ್ಪಿದ್ದಾರೆ. ಒಟ್ಟು 14,846 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ಪರಿಸ್ಥಿತಿ ಹದಗೆಡುತ್ತಿದೆ: ಕೇಂದ್ರ ಆರೋಗ್ಯ ಸಚಿವಾಲಯ
ಕೊರೊನಾ ಎರಡನೇ ಅಲೆಯ ಹೊಸರೂಪ ಜನರಿಗೆ ತಲೆನೋವು ತಂದಿದೆ | Tv9 Digital Live
Published On - 11:12 pm, Tue, 30 March 21