IBPS Clerk Mains Result 2020: ಐಬಿಪಿಎಸ್ ಕ್ಲರ್ಕ್ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ; ಆನ್ಲೈನ್ನಲ್ಲಿ ರಿಸಲ್ಟ್ ವೀಕ್ಷಿಸಲು ಹೀಗೆ ಮಾಡಿ..
IBPS Clerk Mains Result | ibps.in ನಲ್ಲಿ ಆನ್ಲೈನ್ ಮುಖ್ಯಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಪರೀಕ್ಷೆ ಬರೆದಿದ್ದವರು ಈ ವೆಬ್ಸೈಟ್ಗೆ ಹೋಗಿ ರಿಸಲ್ಟ್ ವೀಕ್ಷಿಸಬಹುದು.
ನವದೆಹಲಿ: ಸಿಆರ್ಪಿ-ಕ್ಲರ್ಕ್-X ಮುಖ್ಯ ಪರೀಕ್ಷಾ ಫಲಿತಾಂಶವನ್ನು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (ಐಬಿಪಿಎಸ್) ಇಂದು ಘೋಷಿಸಿದೆ. https://ibps.in/. ನಲ್ಲಿ ಆನ್ಲೈನ್ ಮುಖ್ಯಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಪರೀಕ್ಷೆ ಬರೆದಿದ್ದವರು ಈ ವೆಬ್ಸೈಟ್ಗೆ ಹೋಗಿ ರಿಸಲ್ಟ್ ವೀಕ್ಷಿಸಬಹುದು. ಫಲಿತಾಂಶ ವೀಕ್ಷಿಸುವ ವಿಧಾನ ಇಲ್ಲಿದೆ ನೋಡಿ:
- ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (ಐಬಿಪಿಎಸ್)ಯ ಅಧಿಕೃತಕ ವೆಬ್ಸೈಟ್ ibps.in. ಭೇಟಿ ನೀಡಿ
- ಅಲ್ಲಿ Click here to view your result of online main examination for CRP-CLERK-X ಎಂದು ಬರೆದುಕೊಂಡಿರುವಲ್ಲಿ ಕ್ಲಿಕ್ ಮಾಡಿ.
- ಆಗ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಲಾಗಿನ್ ಕೇಳುತ್ತದೆ. ಕ್ರೆಡೆನ್ಷಿಯಲ್ಸ್ಗಳನ್ನು ಹಾಕಿ ಲಾಗಿನ್ ಆಗಿ.
- ಅದಾದ ಬಳಿಕ ನಿಮ್ಮ ರಿಜಿಸ್ಟರ್ ನಂಬರ್/ ರೋಲ್ ನಂಬರ್ ಮತ್ತು ಪಾಸ್ವರ್ಡ್/ ಹುಟ್ಟಿದ ದಿನ (DD-MM-YY)ಗಳನ್ನು ನಮೂದಿಸಿ. ಬಳಿಕ captcha ಕೋಡ್ ಹಾಕಿ. submit ಎಂಬಲ್ಲಿ ಕ್ಲಿಕ್ ಮಾಡಿ.
- ಆಗ ಸಿಆರ್ಪಿ-ಕ್ಲರ್ಕ್-x ಫಲಿತಾಂಶ ಸ್ಕ್ರೀನ್ ಮೇಲೆ ಕಾಣಿಸುತ್ತದೆ
ಐಬಿಪಿಎಸ್ ಸಿಆರ್ಪಿ-ಕ್ಲರ್ಕ್-X ಮುಖ್ಯ ಪರೀಕ್ಷೆ 2021ರ ಫೆಬ್ರವರಿ 28ರಂದು ನಡೆದಿತ್ತು. ಹಾಗೇ ಇದರ ಪೂರ್ವಭಾವಿ ಪರೀಕ್ಷೆಗಳು 2020 ರ ನವೆಂಬರ್ 23ರಿಂದ ಡಿಸೆಂಬರ್ 13ರವರೆಗೆ ನಡೆದಿದ್ದವು. ಮುಖ್ಯ ಪರೀಕ್ಷೆ 160 ನಿಮಿಷಗಳದ್ದಾಗಿದ್ದು, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ನಡೆದಿತ್ತು. ಸಾರ್ವಜನಿಕ ವಲಯದ ವಿವಿಧ ಬ್ಯಾಂಕ್ಗಳಲ್ಲಿರುವ ಕ್ಲರ್ಕ್ ಪೋಸ್ಟ್ಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ: ಸೂಕ್ತ ಸಮಯದಲ್ಲಿ ಇನ್ನುಳಿದ 9 ಆಡಿಯೋ ಸಾಕ್ಷ್ಯ ಬಿಡುಗಡೆ ಮಾಡ್ತೇವೆ; ಅದರಲ್ಲಿ ಶಿವಕುಮಾರ್ ಹೆಸರೂ ಇದೆ -ಸಂತ್ರಸ್ತೆ ಸಹೋದರ
Gold Rate Today: ಚಿನ್ನ ಕೊಳ್ಳಲು ಸುಸಮಯ.. ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ!
Published On - 11:52 am, Thu, 1 April 21