Covid-19 India Update: ಕಳೆದ 24 ಗಂಟೆಗಳಲ್ಲಿ 72,330 ಹೊಸ ಕೊವಿಡ್ ಪ್ರಕರಣ ಪತ್ತೆ, 459 ಮಂದಿ ಸಾವು
Coronavirus India Update ಕಳೆದ 24 ಗಂಟೆಗಳಲ್ಲಿ 72,330 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು, 459 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 6,51,17,896 ಮಂದಿಗೆ ಕೊವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು ಕಳೆದ 24 ಗಂಟೆಗಳಲ್ಲಿ 72,330 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದೆ. 459 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇಲ್ಲಿಯವರೆಗೆ 24, 47,98, 621 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳ ಪೈಕಿ ಬುಧವಾರ 11, 25, 681 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ. ಮಹಾರಾಷ್ಟ್ರದಲ್ಲಿ 227 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 54, 549ಕ್ಕೆ ತಲುಪಿದೆ. 39,544 ಹೊಸ ಕೊವಿಡ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿ ಆಗಿದ್ದು, ಈವರೆಗೆ ಕೊವಿಡ್ ರೋಗ ತಗುಲಿರುವ ರೋಗಿಗಳ ಸಂಖ್ಯೆ 28, 12,980 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಏಪ್ರಿಲ್ 1ರ ವರೆಗೆ ಕೊವಿಡ್ ದೃಢಪಟ್ಟವರ ಸಂಖ್ಯೆ-1,22,21,665, ಚೇತರಿಸಿಕೊಂಡವರ ಸಂಖ್ಯೆ 1,14,74,683 (ಶೇಕಡಾ 93.89), ಸಕ್ರಿಯ ಪ್ರಕರಣಗಳ ಸಂಖ್ಯೆ- 5,84,055 (4.78%) ಮತ್ತು ಸಾವಿನ ಸಂಖ್ಯೆ 1,62,927 (ಶೇ1.33) ಆಗಿದೆ.
ಮೂರನೇ ಹಂತದ ಕೊವಿಡ್ ಲಸಿಕೆ ವಿತರಣೆ ಇಂದು ಆರಂಭವಾಗಿದ್ದು 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಲ್ಲಿಯವರೆಗೆ 6,51,17,896 ಮಂದಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 58,4055 ಆಗಿದೆ. ಈವರೆಗೆ 1,14,74,683 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಬಪ್ಪಿ ಲಹಿರಿಗೆ ಕೊವಿಡ್ ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಪ್ಪಿ ಲಹಿರಿಗೆ ಕೊವಿಡ್ ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಪುತ್ರಿ ರೇಮಾ ಲಹಿರಿ ಬನ್ಸಾಲ್ ಹೇಳಿದ್ದಾರೆ. 68ರ ಹರೆಯದ ಬಪ್ಪಿ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪಕ್ರೆಗೆ ದಾಖಲಿಸಲಾಗಿದೆ.
ಕೊವಿಡ್-19 ಲಸಿಕೆಯ ಮೊದಲ ಡೋಸ್ ಪಡೆದ ಪೀಯೂಷ್ ಗೋಯಲ್ ಕೇಂದ್ರ ಸಚಿವ ಪೀಯೂಷ್ ಗೋಯಲ್ ಗುರುವಾರ ಬೆಳಗ್ಗೆ ದೆಹಲಿಯ ಏಮ್ಸ್ ನಲ್ಲಿ ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆಯಲು ಅರ್ಹರಾಗಿರುವ ಎಲ್ಲ ನಾಗರಿಕರು ಲಸಿಕೆ ಪಡೆಯಬೇಕು ಮತ್ತು ನಿಮ್ಮ ಸುತ್ತಮುತ್ತ ಇರುವ ಜನರನ್ನು ಲಸಿಕೆ ಪಡೆಯಲು ಹುರಿದುಂಬಿಸಬೇಕು ಎಂದು ಪೀಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
Took my first dose of the COVID-19 vaccine at AIIMS today.
I appeal to all citizens who are eligible to take the vaccine and request everyone to encourage people around you to get vaccinated.
Together, let us build a safe & healthy nation and make India COVID-19 free! pic.twitter.com/Mazjx0C9Lm
— Piyush Goyal (@PiyushGoyal) April 1, 2021
ಒಂದು ವಾರದಲ್ಲಿ ಪರಿಸ್ಥಿತಿ ಸುಧಾರಣೆ ಆಗದಿದ್ದರೆ ಕಠಿಣ ಕ್ರಮ: ಪಂಜಾಬ್ ಸಿಎಂ ಮುಂದಿನ ಒಂದು ವಾರದಲ್ಲಿ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಕೊವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುಲವುದು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ. ಪಂಜಾಬ್ ರಾತ್ರಿ ಕರ್ಫ್ಯೂ ಇದ್ದರೂ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಈ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.
ಪುಣೆಯಲ್ಲಿ ಒಂದೇ ದಿನ ಅತೀ ಹೆಚ್ಚು ಪ್ರಕರಣ ದಾಖಲು ಪುಣೆಯಲ್ಲಿ ಬುಧವಾರ 8,553 ಸೋಂಕಿತರು ಪತ್ತೆಯಾಗಿದ್ದು, ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ . ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 8,593 ಪ್ರಕರಣಗಳು ವರದಿಯಾಗಿತ್ತು. ಗುಜರಾತಿನಲ್ಲಿ ಒಂದೇ ದಿನ 2,360 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದೆ.
ಇದನ್ನೂ ಓದಿ: Karnataka Covid-19 Update: ಕರ್ನಾಟಕದಲ್ಲಿ 4225 ಮಂದಿಗೆ ಕೊರೊನಾ ಸೋಂಕು, 26 ಸಾವು
Published On - 10:36 am, Thu, 1 April 21