AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಏಪ್ರಿಲ್​ 1ರಂದು ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ!

Petrol Diesel Price Today in Bengaluru: ಹೊಸ ತಿಂಗಳ ಮೊದಲನೇ ದಿನ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ಅನ್ನು 93.59 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ಅನ್ನು 85.75 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

Petrol Price Today: ಏಪ್ರಿಲ್​ 1ರಂದು ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ!
ಪ್ರಾತಿನಿಧಿಕ ಚಿತ್ರ
shruti hegde
| Edited By: |

Updated on:Apr 01, 2021 | 12:27 PM

Share

ಬೆಂಗಳೂರು: ಇಂದು ಗುರವಾರ ಪೆಟ್ರೋಲ್​, ಡೀಸೆಲ್​ ಬೆಲೆಯನ್ನು ಗಮನಿಸಿದಾಗ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೆಹಲಿಯಲ್ಲಿ ಇಂದು ಪ್ರತಿ ಲೀಟರ್​ ಪೆಟ್ರೋಲ್​ ದರ 90.56 ರೂಪಾಯಿಇದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ಅನ್ನು 80.87 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಹಾಗೆಯೇ ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 96.98 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ 87.96 ರೂಪಾಯಿಗೆ ಮಾರಾಟವಾಗುತ್ತಿದೆ.

ಇನ್ನು, ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 92.58 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ಅನ್ನು 85.88 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 90.77 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 83.75 ರೂಪಾಯಿ ಇದೆ.

ಹೈದರಾಬಾದ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.16 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 88.20 ರೂಪಾಯಿ ಇದೆ. ಹಾಗೆಯೇ ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.85 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ 81.27 ರೂಪಾಯಿಗೆ ಮಾರಾಟವಾಗುತ್ತಿದೆ. ನೋಯ್ಡಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88.91 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್​ ಡೀಸೆಲ್​ ದರ 81.33 ರೂಪಾಯಿಗೆ ಮಾರಾಟವಾಗುತ್ತಿದೆ.

ಫೆಬ್ರವರಿ ತಿಂಗಳಿನಲ್ಲಿ ಪೆಟ್ರೀಲ್​, ಡೀಸೆಲ್​ ದರ ಏರಿಕೆಯಿಂದಾಗಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್​ ಬೆಲೆ 100 ಗಡೆ ದಾಟಿತ್ತು. ಗರಿಷ್ಠ ಮಟ್ಟದಲ್ಲಿ ಇಂಧನ ದರ ಏರಿರುವುದನ್ನು ಗಮನಿಸುತ್ತಿದ್ದ ಗ್ರಾಹಕರ ಕೆಂಗಣ್ಣಿಗೆ ಕಾರಣವಾಗಿತ್ತು. ಇನ್ನು, ಕಳೆದ ವರ್ಷ ಮಾರ್ಚ್​ ತಿಂಗಳಿನಲ್ಲಿ ಸರ್ಕಾರ ಸುಂಕವನ್ನು ಹೆಚ್ಚಿಸಿ ಪೆಟ್ರೋಲ್​ ಪ್ರತಿ ಲೀಟರ್​ಗೆ 21.58 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ 19.18 ರೂಪಾಯಿಗೆ ಏರಿಕೆಯಾಗಿತ್ತು.

ಸುಯೆಜ್​ ಕಾಲುವೆಯಲ್ಲಿ ಸರಕು ಸಾಗಣೆಯು ಮತ್ತೆ ಪ್ರಾರಂಭವಾಗಿದ್ದು, ಇದರ ನಂತರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೊಂಚ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ಅನ್ನು 93.59 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ಅನ್ನು 85.75 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

ವಿವಿಧ ನಗರದ ಪೆಟ್ರೋಲ್​ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.htmlವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/diesel-price-today.html

Published On - 10:02 am, Thu, 1 April 21

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?