Rajasthan: ಕೇವಲ 17 ನಿಮಿಷಗಳಲ್ಲಿ 26 ಲಕ್ಷ ರೂ. ಇದ್ದ ಎಟಿಎಂ ಯಂತ್ರವನ್ನೇ ಕದ್ದೊಯ್ದ ಕಳ್ಳರು

|

Updated on: Apr 21, 2024 | 11:27 AM

ಕಳ್ಳರು 26 ಲಕ್ಷ ರೂ. ಇದ್ದ ಎಟಿಎಂ ಯಂತ್ರವನ್ನು ಕೇವಲ 17ನಿಮಿಷಗಳಲ್ಲಿ ಕದ್ದೊಯ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಖೈರ್ತಾಲ್‌ನ ಇಸ್ಮಾಯಿಲ್‌ಪುರ ರಸ್ತೆಯಲ್ಲಿರುವ ಇಂಡಸ್ ಕಂಪನಿ ಬಳಿ ಇರುವ ಪಿಎನ್‌ಬಿ ಎಟಿಎಂನಲ್ಲಿ ಈ ಘಟನೆ ನಡೆದಿದೆ.

Rajasthan: ಕೇವಲ 17 ನಿಮಿಷಗಳಲ್ಲಿ 26 ಲಕ್ಷ ರೂ. ಇದ್ದ ಎಟಿಎಂ ಯಂತ್ರವನ್ನೇ ಕದ್ದೊಯ್ದ ಕಳ್ಳರು
ಎಟಿಎಂ
Image Credit source: News 18
Follow us on

ಕೇವಲ 17 ನಿಮಿಷಗಳಲ್ಲಿ ಕಳ್ಳರು(Thief) ತಮ್ಮ ಕೈ ಚಳಕ ತೋರಿಸಿದ್ದಾರೆ. 26 ಲಕ್ಷ ರೂ. ಇದ್ದ ಎಟಿಯಂ ಯಂತ್ರವನ್ನೇ ಕದ್ದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಶೋಧ ನಡೆಸಲಾಗುತ್ತಿದೆ. ಆದರೆ ಅವರ ಯಾವುದೇ ಕುರುಹು ಇನ್ನೂ ಪತ್ತೆಯಾಗಿಲ್ಲ. ಪೊಲೀಸರ ಪ್ರಕಾರ, ಖೈರ್ತಾಲ್‌ನ ಇಸ್ಮಾಯಿಲ್‌ಪುರ ರಸ್ತೆಯಲ್ಲಿರುವ ಇಂಡಸ್ ಕಂಪನಿ ಬಳಿ ಇರುವ ಪಿಎನ್‌ಬಿ ಎಟಿಎಂನಲ್ಲಿ ಈ ಘಟನೆ ನಡೆದಿದೆ.

ಎಟಿಎಂ ಬಳಿ ರಾಜ್‌ಕುಮಾರ್ ಟೀ ಸ್ಟ್ಯಾಂಡ್ ಇದೆ. ಭಾನುವಾರ ಮುಂಜಾನೆ 4 ಗಂಟೆಗೆ ರಾಜ್‌ಕುಮಾರ್ ಅಲ್ಲಿಗೆ ಬಂದು ಟೀ ಸ್ಟಾಲ್​ ತೆರೆಯಲು ನೋಡಿದಾಗ ಎಟಿಎಂ ಗಾಜು ಒಡೆದಿರುವುದನ್ನು ನೋಡಿದ್ದಾರೆ. ಎಟಿಎಂ ಯಂತ್ರದ ಶೆಲ್ ಬದಿಯಲ್ಲಿ ಬಿದ್ದಿತ್ತು. ಅಲ್ಲಿನ ಪರಿಸ್ಥಿತಿ ನೋಡಿ ಸಮೀಪದಲ್ಲೇ ಇದ್ದ ದೀಪಕ್ ಹಾಗೂ ಇತರರಿಗೆ ಮಾಹಿತಿ ನೀಡಿದರು.

ಡಿಎಸ್‌ಪಿ ರಾಜೇಂದ್ರ ಸಿಂಗ್ ತಕ್ಷಣವೇ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದರು. ಅಕ್ಕಪಕ್ಕದ ಜನರು ಹಾಗೂ ಬ್ಯಾಂಕ್ ಆಡಳಿತ ಮಂಡಳಿಯಿಂದ ಸಂಪೂರ್ಣ ಮಾಹಿತಿ ಪಡೆದರು. ಭಾನುವಾರ ರಜಾ ದಿನವಾದ ಕಾರಣ ಶನಿವಾರವೇ ಎಟಿಎಂ ಯಂತ್ರದಲ್ಲಿ 28.5 ಲಕ್ಷ ರೂಪಾಯಿ ಹಣ ಜಮೆಯಾಗಿದೆ ಎಂದು ಪಿಎನ್ ಬಿ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮತ್ತಷ್ಟು ಓದಿ:ಚಿಕ್ಕಬಳ್ಳಾಪುರ: ಎಸ್​ಬಿಐ ಎಟಿಎಂಗೆ ಬೆಂಕಿ ಹಾಕಿ 20 ಲಕ್ಷ ರೂ. ಕಳ್ಳತನ; ಸ್ಥಳಕ್ಕೆ ಎಸ್ಪಿ ಭೇಟಿ

ಈ ಪೈಕಿ ಸುಮಾರು 2.5 ಲಕ್ಷ ಮೌಲ್ಯದ ನಗದನ್ನು ಹೊರ ತೆಗೆಯಲಾಗಿದೆ. ಎಟಿಎಂ ಯಂತ್ರದಲ್ಲಿ ಸುಮಾರು 26 ಲಕ್ಷ ರೂಪಾಯಿ ನಗದು ಇದೆ ಎನ್ನಲಾಗಿದೆ. ಮಧ್ಯರಾತ್ರಿ 2.17ರ ಸುಮಾರಿಗೆ ಕಾರೊಂದು ಅಲ್ಲಿಗೆ ಬಂದು ನಿಂತಿರುವುದು ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಗೋಚರಿಸಿದೆ. ಅದರಲ್ಲಿ ಬಂದ ದುಷ್ಕರ್ಮಿಗಳು ಕೇವಲ 17 ನಿಮಿಷದಲ್ಲಿ ಕೃತ್ಯ ಎಸಗಿದ್ದಾರೆ. ಎಟಿಎಂ ಯಂತ್ರವನ್ನು ಕಿತ್ತು 2.34ಕ್ಕೆ ವಾಪಸ್ ತೆರಳಿದ್ದಾರೆ.

ತಾತಾರ್‌ಪುರ ಪೊಲೀಸ್ ಠಾಣಾಧಿಕಾರಿ ಅಂಕೇಶ್ ಚೌಧರಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನೋಡಿದ್ದೇನೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:26 am, Sun, 21 April 24