ದೆಹಲಿ: ಕೊವಿಡ್-19 ಮೂರನೇ ಅಲೆ ತಡೆಯಲು ಸಾಧ್ಯವಿಲ್ಲ. ಆ ಹಂತದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸುವ ವೇಗವೂ ಹೆಚ್ಚು. ಆದರೆ ಯಾವ ಸಮಯದಲ್ಲಿ ಈ ಅಲೆ ಕಾಣಿಸುತ್ತದೆ ಎಂದು ಹೇಳಲಾಗುವುದಿಲ್ಲ. ಕೊವಿಡ್ ಲಸಿಕೆಗಳು ಈಗ ಇರುವ ಕೊರೊನಾವೈರಸ್ ಪ್ರಭೇದಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿವೆ. ಹೊಸ ಪ್ರಭೇದವು ಭಾರತ ಸೇರಿದಂತೆ ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿದೆ. ಆದರೆ ಪ್ರಸರಣ ಅಧಿಕವಾಗಿರುತ್ತದೆ. ಮುಂಬರುವ ದಿನಗಳಲ್ಲಿ ರೋಗನಿರೋಧಕ ತಪ್ಪಿಸುವ ರೂಪಾಂತರಿಗಳು ಮತ್ತು ರೋಗದ ತೀವ್ರತೆಯನ್ನು ಕಡಿಮೆ ಅಥವಾ ಹೆಚ್ಚಿಸಬಹುದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್, ಪ್ರಕರಣಗಳು ಹೆಚ್ಚಾಗದಂತೆ ತಡೆಯಲು ಲಾಕ್ಡೌನ್ ಮಾತ್ರ ಪರಿಹಾರವೇ ಎಂದು ಕೇಳಿದಾಗ, ಅಗತ್ಯವಿದ್ದರೆ ಆ ಆಯ್ಕೆಗಳನ್ನು ಚರ್ಚಿಸಲಾಗುತ್ತದೆ. ಪ್ರಸರಣ ಸರಪಳಿಯನ್ನು ನಿಗ್ರಹಿಸಲು ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳಿಗೆ ಈಗಾಗಲೇ ಮಾರ್ಗಸೂಚಿ ಇದೆ ಎಂದಿದ್ದಾರೆ. ಅದೇ ವೇಳೆ ಕೊವಿಡ್ ಪ್ರಾಣಿಗಳ ಮೂಲಕ ಹರಡುತ್ತಿಲ್ಲ, ಇದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂದು ಪೌಲ್ ಹೇಳಿದ್ದಾರೆ.
#WATCH | Dr VK Paul, NITI Aayog, when asked if nationwide lockdown the only solution to rise in cases, says, “…If anything more is required those options are always being discussed. There’s already a guideline to states to impose restrictions to suppress chain of transmission.” pic.twitter.com/VBiSXWyTE7
— ANI (@ANI) May 5, 2021
ಹೊಸ ರೂಪಾಂತರಿ ವೈರಸ್ ಎದುರಿಸಲು ಕೊವಿಡ್ ಲಸಿಕೆಗಳ ನಿಯಮಿತ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದಿದ್ದಾರೆ ವಿಜಯ್ ರಾಘವನ್.
ಏತನ್ಮಧ್ಯೆ, ಕೊರೊನಾವೈರಸ್ ಪ್ರಕರಣಗಳಲ್ಲಿ ಪ್ರತಿ ದಿನ ಶೇಕಡಾ 2.4 ರಷ್ಟು ಏರಿಕೆ ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
“12 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಏಳು ರಾಜ್ಯಗಳಲ್ಲಿ 50,000 ರಿಂದ ಒಂದು ಲಕ್ಷ ಸಕ್ರಿಯ ಪ್ರಕರಣಗಳಿವೆ ಮತ್ತು 17 ರಾಜ್ಯಗಳಲ್ಲಿ 50,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ, ಕೇರಳ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶದಲ್ಲಿ 1.5 ಲಕ್ಷ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶೇಕಡಾ 15 ಕ್ಕಿಂತ ಹೆಚ್ಚು ಕೊವಿಡ್ ಪಾಸಿಟಿವ್ ಪ್ರಕರಣ ವರದಿ ಆಗಿದ್ದು , 10 ರಾಜ್ಯಗಳು ಶೇಕಡಾ 25 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವನ್ನು ಹೊಂದಿವೆ. ಮಹಾರಾಷ್ಟ್ರವು ಶೇಕಡಾ 24 ರಷ್ಟು ಪಾಸಿಟಿವಿಟಿ ದರವನ್ನು ಹೊಂದಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಅನಿವಾರ್ಯ, ಈ ಅಂಶಗಳತ್ತ ಗಮನಹರಿಸದಿದ್ದರೆ ಅಪಾಯ: ಏಮ್ಸ್ ನಿರ್ದೇಶಕ ಸೂಚನೆ
(Third wave of Covid infections is inevitable warns Centre Principal Scientific Advisor K VijayRaghavan)
Published On - 7:23 pm, Wed, 5 May 21