ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅಮೆರಿಕಾದಲ್ಲಿ ಮಗನೊಂದಿಗೆ ರೆಸ್ಟುರಾಂಟ್ ಗೆ ಹೋದಾಗ ನಡೆದಿದ್ದು ಇದು!

ಜೈ ಶಂಕರ್ ಅವರು 2021 ರಲ್ಲಿ, ಆಗಷ್ಟೇ ಕೋವಿಡ್ ನಿಷೇಧಗಳ ನಂತರ ವಿಮಾನಯಾನ ಶುರುವಾದಾಗ ಅಮೆರಿಕಾಗೆ ಭೇಟಿ ನೀಡಿದ್ದ ಬಗ್ಗೆ ವಿಡಿಯೋದಲ್ಲಿ ಮಾತಾಡಿದ್ದಾರೆ. ಅಮೆರಿಕದಲ್ಲೇ ವಾಸವಾಗಿರುವ ತಮ್ಮ ಮಗನೊಂದಿಗೆ ರೆಸ್ಟುರಾಂಟ್ ಗೆ ಹೋದ ಸಂಗತಿಯನ್ನು ಸಚಿವರು ವಿವರಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅಮೆರಿಕಾದಲ್ಲಿ ಮಗನೊಂದಿಗೆ ರೆಸ್ಟುರಾಂಟ್ ಗೆ ಹೋದಾಗ ನಡೆದಿದ್ದು ಇದು!
ಎಸ್ ಜೈಶಂಕರ್, ವಿದೇಶಾಂಗ ಸಚಿವ
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2022 | 1:20 PM

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ತಮ್ಮ ಮಗನೊಂದಿಗೆ ಅಮೆರಿಕಾದ ರೆಸ್ಟುರಾಂಟ್ ಗೆ (restaurant) ಹೋದಾಗ ನಡೆದ ಘಟನೆಯನ್ನು ವಿವರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೈ ಶಂಕರ್ ಅವರು 2021 ರಲ್ಲಿ, ಆಗಷ್ಟೇ ಕೋವಿಡ್ ನಿಷೇಧಗಳ ನಂತರ ವಿಮಾನಯಾನ ಶುರುವಾದಾಗ ಅಮೆರಿಕಾಗೆ ಭೇಟಿ ನೀಡಿದ್ದ ಬಗ್ಗೆ ವಿಡಿಯೋದಲ್ಲಿ ಮಾತಾಡಿದ್ದಾರೆ. ಅಮೆರಿಕದಲ್ಲೇ ವಾಸವಾಗಿರುವ ತಮ್ಮ ಮಗನೊಂದಿಗೆ ರೆಸ್ಟುರಾಂಟ್ ಗೆ ಹೋದ ಸಂಗತಿಯನ್ನು ಸಚಿವರು ವಿವರಿಸಿದ್ದಾರೆ.

‘ಹೋಟೆಲ್ ಪ್ರವೇಶಿಸಿದ ಬಳಿಕ ಅವರು ನಮಗೆ ಕೊವಿಡ್ ಲಸಿಕೆ ಹಾಕಿಸಿಕೊಂಡ ಸರ್ಟಿಫಿಕೇಟ್ ತೋರಿಸುವಂತೆ ಹೇಳಿದಾಗ ನಾನು ಮೊಬೈಲ್ ನಲ್ಲಿದ್ದ ನನ್ನ ಸರ್ಟಿಫೀಕೇಟ್ ತೋರಿಸಿದೆ. ನನ್ನ ಮಗ ಪರ್ಸ್ನಲ್ಲಿ ಮಡಿಕೆ ಮಾಡಿ ಇಟ್ಟುಕೊಂಡಿದ್ದ ಒಂದು ಕಾಗದವನ್ನು ಹೊರತೆಗೆದು ಇದು ನನ್ನ ಸರ್ಟಿಫಿಕೇಟ್ ಎಂದು ಹೇಳಿದ,’ ಅಂತ ಜೈಶಂಕರ್ ಹೇಳಿದ್ದಾರೆ.

ಸಚಿವರು ಮುಗುಳ್ನಗುತ್ತಾ ಮಾತಾಡುವುದನ್ನು ಮುಂದುವರಿಸುತ್ತಾರೆ. ‘ನಾನು ಅವನ ಸರ್ಟಿಫಿಕೇಟ್ ಕಡೆ ನೋಡಿ, ಯುಎಸ್ ನವರು ಇನ್ನೂ ಈ ಹಂತದಲ್ಲೇ ಇದ್ದಾರೆ ಅಂದುಕೊಂಡೆ,’ ಎಂದು ಹೇಳಿದಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಚಪ್ಪಾಳೆ ತಟ್ಟುತ್ತಾ ಜೋರಾಗಿ ನಗುತ್ತಾರೆ.

ಟ್ವಿಟರ್ ಬಳಕೆದಾರ ಅರುಣ್ ಪುಡುರ್ ಎನ್ನುವವರೊಬ್ಬರು ಈ ಚಿಕ್ಕ ಕ್ಲಿಪ್ ಅನ್ನು ಶೇರ್ ಮಾಡಿ, ‘ಡಾ ಎಸ್ ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ತಮ್ಮ ಮಗನೊಂದಿಗೆ ಅಮೆರಿಕಾದಲ್ಲಿ ರೆಸ್ಟುರಾಂಟ್ ಗೆ ಹೋದ ಬಳಿಕ ನಡೆದಿದ್ದು ಬಹಳ ಸ್ವಾರಸ್ಯಕರವಾಗಿದೆ,’ ಅಂತ ಶೀರ್ಷಿಕೆ ನೀಡಿದ್ದಾರೆ.

ಸದರಿ ವಿಡಿಯೋವನ್ನು ಟ್ವಿಟರ್ ನಲ್ಲಿ ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.

ಕೋವಿಡ್ ಲಸಿಕೆಗಾಗಿ ಸಾರ್ವಜನಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೇಂದ್ರ ಸರ್ಕಾರವು ಕೋ-ವಿನ್ ಹೆಸರಿನ ಅನ್ಲೈನ್ ಪ್ಲಾಟ್ ಫಾರ್ಮ್ ಆರಂಭಿಸಿತು. ಈ ಪ್ಲಾಟ್ಫಾರ್ಮ್ ಹೆಸರು ನೋಂದಾಯಿಸಿಕೊಳ್ಳಲು ಮತ್ತು ಲಸಿಕೆ ಪಡೆದ ಸರ್ಟಿಫಿಕೇಟ್ ಗಳನ್ನು ಪಡೆಯಲು ಬಳಕೆಯಾಗುತ್ತಿದೆ.