ದೆಹಲಿ: ಪ್ರಧಾನಿ ನರೇಂದ್ರ ಮೋದಿ.. ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿರೋ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿರೋ ಲೀಡರ್.. ಸೋಷಿಯಲ್ ಮೀಡಿಯಾದಿಂದಲೇ ಜನರನ್ನ ತಲುಪಬೋದು, ರಾಜಕೀಯ ಪ್ರಚಾರಕ್ಕೂ ಅದನ್ನ ಬಳಸ್ಬೋದು ಅನ್ನೋದನ್ನ ತೋರಿಸಿದ್ದ ನಾಯಕ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಆಕ್ಟೀವ್ ಆಗಿರೋ ನಮೋ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಮೋದಿ ಮಾಡಿರೋ ಆ ಒಂದು ಟ್ವೀಟ್ಗೆ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಸೋಷಿಯಲ್ ಮೀಡಿಯಾ ಫಾಲೋವರ್ಸ್ಗೆ ‘ನಮೋ’ ಶಾಕ್..!
ಯೆಸ್.. ಸಡನ್ ನಿರ್ಧಾರ.. ದಿಢೀರ್ ನಿರ್ಣಯ.. ಅಚ್ಚರಿಯ ಹೆಜ್ಜೆಗಳನ್ನಿಟ್ಟು ಚಕಿತ ಮೂಡಿಸೋ ನಾಯಕ ಪ್ರಧಾನಿ ನರೇಂದ್ರ ಮೋದಿ. ಸೋಷಿಯಲ್ ಮೀಡಿಯಾದಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿರೋ ಅಗ್ರಗಣ್ಯ ಲೀಡರ್ ಅನ್ನೋ ಹೆಗ್ಗಳಿಕೆ ಕೂಡ ಇದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಕ್ರೀಯರಾಗಿರೋ ಮೋದಿ ಇದೀಗ ಎಫ್ಬಿ, ಟ್ವಿಟ್ಟರ್, ಇನ್ಸ್ಸ್ಟ್ರಾಗ್ರಾಂ, ಯೂಟ್ಯೂಬ್ ಖಾತೆ ಸ್ಥಗಿತಗೊಳಿಸೋ ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಮೋದಿ ಭಾನುವಾರ ವೇಳೆ ಎಲ್ಲಾ ಅಕೌಂಟ್ಗೆ ಬ್ರೇಕ್ ಹಾಕೋ ಬಗ್ಗೆ ಆಲೋಚಿಸುತ್ತಿದ್ದೀನಿ ಅಂತ ಬರೆದ್ಕೊಂಡಿದ್ದಾರೆ. ಟ್ವಿಟ್ಟರ್ನಲ್ಲಿ ಮೋದಿ ಬರೆದಿರೋ ಆ ಎರಡೇ ಎರಡು ಸಾಲು ಕೋಟ್ಯಂತರ ಅಭಿಮಾನಿಗಳನ್ನ ಕಂಗಾಲಾಗಿಸಿದೆ.
ಜನರೊಂದಿಗೆ ಆ್ಯಕ್ಟೀವ್ ಆಗಿ ಬೆರೆಯೋಕೆ ಕೊಂಡಿಯಾಗಿದ್ದ ಸೋಷಿಯಲ್ ಮೀಡಿಯಾದಿಂದ ಮೋದಿ ದೂರವಾಗೋ ಮಾತನ್ನಾಡಿರೋದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ತುಸು ಕಷ್ಟ.
‘ನಮೋ’ ಫಾಲೋವರ್ಸ್..!
ಜನವರಿ 2009ರಂದು ಪ್ರಧಾನಿ ಮೋದಿ ಟ್ವಿಟ್ಟರ್ ಖಾತೆ ತೆರೆದಿದ್ದರು. ಪ್ರಧಾನಿ ಮೋದಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರೋ ವಿಶ್ವದ ನಾಯಕರ ಪೈಕಿ ಒಬ್ರೂ. ಟ್ವಿಟ್ಟರ್ನಲ್ಲಿ ಸುಮಾರು 53.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಫೇಸ್‍ಬುಕ್‍ನಲ್ಲಿ 44 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಸಹ ವಿಶ್ವದ ಪ್ರಭಾವಿ ನಾಯಕರಾಗಿದ್ದು, 30 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.
‘ಸೋಷಿಯಲ್ ಮೀಡಿಯಾದಿಂದ ದೂರ ಹೋಗ್ಬೇಡಿ ಮೋದಿ ಜೀ’
ಇನ್ನೊಂದ್ಕಡೆ ಪ್ರಧಾನಿ ಮೋದಿ ಟ್ವೀಟ್ ಮಾಡಿರೋ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಮೋದಿ ಟ್ವೀಟ್ ಮಾಡಿರೋ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಲೈಕ್ಸ್.. ಲಕ್ಷ ಲಕ್ಷ ರಿಪ್ಲೇಗಳು ಹಾಗೂ ರಿಟ್ವೀಟ್ಸ್ಗಳು ಬಂದಿದೆ.
ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಿಂದ ದೂರ ಹೋಗ್ಬೇಡಿ ಮೋದಿ ಜೀ ಎಂದು ಕಮೆಂಟ್ ಮಾಡುತ್ತಿದ್ದಾರೆ. ಟ್ವಿಟ್ಟರ್ನಲ್ಲಿ #NoSir ಟ್ರೆಂಡಿಂಗ್‍ನಲ್ಲಿದೆ.ಇನ್ನೊಂದೆಡೆ ಮೋದಿ ಜೀ ಸೋಷಿಯಲ್ ಮೀಡಿಯಾ ಖಾತೆ ಕ್ಲೋಸ್ ಮಾಡಿದ್ರೆ ನಾನು ಅವರನ್ನೇ ಫಾಲೋ ಮಾಡ್ತೀನಿ ಅಂತ ಅಮೃತ ಫಡ್ನವೀಸ್ ಟ್ವಿಟ್ಟರ್ನಲ್ಲಿ ಬರೆದ್ಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿ ‘ನಮೋ’ ಕಾಲೆಳೆದ ರಾಹುಲ್ ಗಾಂಧಿ..!
ಸಾಮಾಜಿಕ ಜಾಲತಾಣಗಳಿಂದ ಮೋದಿ ದೂರ ಉಳಿಯೋ ಸುಳಿವು ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕಾಲೆಳೆದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದು, ದ್ವೇಷವನ್ನು ಬಿಡಿ, ಸಾಮಾಜಿಕ ಜಾಲತಾಣವನ್ನಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದಲ್ಲದೇ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಟ್ವೀಟ್ ಮಾಡಿದ್ದು, ನೀವು ಸೋಷಿಯಲ್ ಮೀಡಿಯಾದಿಂದ ದೂರವಾಗೋ ಅಗತ್ಯವಿಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಸಾರ್ತಿರೋರಿಗೆ ಸಾಮಾಜಿಕ ಜಾಲತಾಣಗಳಿಂದ ದೂರವಿರಿ ಎಂದು ಸಲಹೆ ನೀಡಿ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಪ್ರಧಾನಿ ಮೋದಿ ಈ ದಿಢೀರ್ ನಿರ್ಧಾರ ಕೈಗೊಳ್ಳೋಕೆ ಕಾರಣವೇನು.. ಸೋಷಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳೋ ಮಾತನ್ನಾಡಿದ್ದೇಕೆ ಅನ್ನೋದಾದ್ರೆ.
‘ಪಾಠ’ ಕಲಿಸೋ ತಂತ್ರ..?
ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹೆಚ್ಚಾಗ್ತಿದೆ. ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕೋದು ಸಾಮಾಜಿಕ ಶಾಂತಿ ಕದಡುವವರು ಹೆಚ್ಚಾಗುತ್ತಿದ್ದಾರೆ. ಸರ್ಕಾರದಿಂದ ಸಾಕಷ್ಟು ಕಠಿಣ ನಿಯ ಜಾರಿ ಇದ್ರೂ ಇದಕ್ಕೆಲ್ಲಾ ಬ್ರೇಕ್ ಬೀಳ್ತಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾ ಬಳಕೆ ಬಗ್ಗೆ ಜನ ಜಾಗೃತಿ ಮೂಡಿಸೋಕೆ ಪ್ರಧಾನಿ ಮೋದಿ ಈ ನಿರ್ಧಾರ ಮಾಡಿರೋ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ.
ದೆಹಲಿ ಗಲಭೆ ಬಳಿಕ ‘ನಮೋ’ ಕೈಗೊಂಡ್ರಾ ಈ ನಿರ್ಧಾರ..?
ಇತ್ತ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇಶ-ವಿದೇಶಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರು ಸಾಕಷ್ಟು ದ್ವೇಷದ ಸಂದೇಶ ರವಾನಿಸ್ತಿರೋ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣ ದುರ್ಬಳಕೆ ಬೆನ್ನಲ್ಲೇ ಮೋದಿ ಈ ಟ್ವೀಟ್ ಮಾಡಿರೋದು ಮತ್ತೊಂದು ಚರ್ಚೆ ಹುಟ್ಟು ಹಾಕಿದೆ. ದೆಹಲಿ ಗಲಭೆಗೂ ಹಾಗೂ ಪ್ರಧಾನಿ ನಿರ್ಧಾರಕ್ಕೂ ಸಂಬಂಧವಿದ್ಯಾ ಅಥವಾ ಇನ್ಯಾವುದೇ ನಿರ್ದಿಷ್ಟ ಕಾರಣವಿದೆಯೇ ಅನ್ನೋದು ಎಲ್ಲರನ್ನೂ ಕಾಡ್ತಿರೋ ಮತ್ತೊಂದು ಪ್ರಶ್ನೆ.
ಒಟ್ನಲ್ಲಿ ಸಾಮಾಜಿಕ ಜಾಲತಾಣದಲ್ಲೇ ಜನರನ್ನು ತಲುಪಿರೋ ಪಿಎಂ ಮೋದಿ ಅತೀ ಹೆಚ್ಚು ಫ್ಯಾನ್ಸ್ ಪಾಲೋವಿಂಗ್.. ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆದ್ರಿಂದಲೇ ನಮೋ ದೂರವಾಗೋ ಮಾತನಾಡಿರೋದು ಕೋಟಿ ಕೋಟಿ ಅಭಿಮಾನಿಗಳಿಗೆ ಅಘಾತವಾಗಿದೆ. ಎಲ್ಲದಕ್ಕೂ ಭಾನುವಾರವೇ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.
This Sunday, thinking of giving up my social media accounts on Facebook, Twitter, Instagram & YouTube. Will keep you all posted.
— Narendra Modi (@narendramodi) March 2, 2020
Published On - 6:42 am, Tue, 3 March 20